ಚಳಿಗಾಲದಲ್ಲಿ ಪ್ರವಾಸಕ್ಕೆ ತೆರಳಲು ಅನೇಕರು ಇಷ್ಟಪಡುತ್ತಾರೆ. ವರ್ಷಾಂತ್ಯದಲ್ಲಿ ಹೊಸ ಹೊಸ ಸ್ಥಳಗಳನ್ನು ನೋಡಬೇಕು ಎಂದು ಯೋಜನೆ ಮಾಡಿರುತ್ತಾರೆ. ಈ ಚಳಿಗಾಲದ ಸಂದರ್ಭದಲ್ಲಿ ಉತ್ತರ ಭಾರತದ ಹಿಮಾಲಯದ ತಪ್ಪಲಿನಲ್ಲಿರುವ ಕೆಲವು ಸ್ಥಳಗಳಿಗೆ ಈ ಋತುವಿನಲ್ಲಿ ಪ್ರವಾಸಕ್ಕೆ ಹೋಗಲು ಹೇಳಿ ಮಾಡಿಸಿದ ಸ್ಥಳಗಳಾಗಿವೆ.
.ಚಳಿಗಾಲ: ನವೆಂಬರ್ನಲ್ಲಿ ಗಂಗೋತ್ರಿ, ಯಮುನೋತ್ರಿ ದೇಗುಲಗಳು ಬಂದ್.
ಶ್ರೀನಗರ:

’ಭೂಮಿಯ ಮೇಲಿನ ಸ್ವರ್ಗ’ ಎಂದೇ ಪ್ರಸಿದ್ಧಿ ಪಡೆದಿರುವ ಶ್ರೀನಗರ ಜಮ್ಮು–ಕಾಶ್ಮೀರದ ರಾಜಧಾನಿಯಾಗಿದೆ. ಇಲ್ಲಿನ ಪ್ರಕೃತಿ ಸೌಂದರ್ಯ, ಐತಿಹಾಸಿಕ ತಾಣ ಹಾಗೂ ವಿಶಿಷ್ಟ ಸಂಸ್ಕೃತಿ ಭಿನ್ನ ಅನುಭವ ನೀಡುತ್ತದೆ. ಇಲ್ಲಿ ಪ್ರಮುಖವಾಗಿ ದಾಲ್ ಸರೋವರ ಮತ್ತು ನಗೀನ್ ಸರೋವರ, ಮೊಘಲ್ ಶೈಲಿಯ ಹಸಿರು ಉದ್ಯಾನ ಹಾಗೂ ಟುಲಿಪ್ ಗಾರ್ಡನ್ ನೋಡಬಹುದು.

ಧರ್ಮಶಾಲಾ:

ಹಿಮಾಚಲ ಪ್ರದೇಶದ ಸುಂದರವಾದ ತಾಣಗಳಲ್ಲಿ ಧರ್ಮಶಾಲಾ ಒಂದಾಗಿದೆ. ಸದಾ ಮಂಜಿನಿಂದ ಆವೃತವಾಗಿರುವ ಧರ್ಮಶಾಲಾದಲ್ಲಿ ಭವ್ಯವಾದ ಶ್ರೇಣಿಗಳನ್ನು ನೋಡಬಹುದು. ಇಲ್ಲಿ ಪ್ರಮುಖವಾಗಿ ಟ್ರಿಯುಂಡ್ ಚಾರಣ, ಭಗ್ಸು ಜಲಪಾತ ಮತ್ತು ಭಗ್ಸುನಾಗ್ ದೇವಸ್ಥಾನಗಳಿಗೆ ಭೇಟಿ ನೀಡಬಹುದು. ಇಲ್ಲಿನ ಟಿಬೆಟಿಯನ್ ಸಂಸ್ಕೃತಿ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ.

ಕಲ್ಗಾ:

ಹಿಮಾಚಲ ಪ್ರದೇಶದ ಪಾರ್ವತಿ ಕಣಿವೆಯಲ್ಲಿರುವ ಸುಂದರವಾದ ಹಾಗೂ ಕಡಿಮೆ ಜನಸಂಖ್ಯೆ ಇರುವ ಗ್ರಾಮವಾಗಿದೆ. ಪ್ರಕೃತಿಯ ಮಡಿಲಿನಲ್ಲಿ ಸಮಯ ಕಳೆಯಬೇಕು ಎನ್ನುವವರು, ಏಕಾಂತ ಬಯಸುವವರು ಹಾಗೂ ಚಾರಣ ಪ್ರಿಯರಿಗೆ ಹೇಳಿ ಮಾಡಿಸಿದ ಸ್ಥಳವಾಗಿದೆ. ಇಲ್ಲಿನ ಹಿಮದ ವಾತಾವರಣವು ಮನಸ್ಸಿಗೆ ನೆಮ್ಮದಿಯ ತಾಣವಾಗಿದೆ.

ತೋಶ್:

ತೋಶ್ ಗ್ರಾಮ ಹಿಮಾಚಲ ಪ್ರದೇಶದ ಪಾರ್ವತಿ ಕಣಿವೆಯಲ್ಲಿರುವ ಒಂದು ಹಳ್ಳಿಯಾಗಿದೆ. ಸಮುದ್ರ ಮಟ್ಟದಿಂದ 2,400 ಮೀಟರ್ ಎತ್ತರದಲ್ಲಿದ್ದು ಪ್ರವಾಸಿಗರು ಭೇಟಿ ನೀಡಲು ಹೇಳಿ ಮಾಡಿಸಿದ ಜಾಗವಾಗಿದೆ. ಇಲ್ಲಿನ ಮರದ ಮನೆಗಳು ಸೇರಿದಂತೆ ಹಿಮಾಲಯದ ವಿವಿಧ ಜಾತಿಯ ಹೂಗಳನ್ನು ನೋಡಬಹುದು.

ಧರ್ಮಕೋಟ್:

ಹಿಮಾಚಲ ಪ್ರದೇಶದ ಕಂಗ್ರಾ ಜಿಲ್ಲೆಯಲ್ಲಿರುವ ಧರ್ಮಕೋಟ್ ಪ್ರಸಿದ್ದ ಗಿರಿಧಾಮಗಳ ಪೈಕಿ ಒಂದಾಗಿದೆ. ಈ ಸ್ಥಳ ಸುತ್ತಲು ಹಿಮದಿಂದ ಕೂಡಿದ್ದು, ನಿಶ್ಶಬ್ದತೆಯಿಂದ ಕೂಡಿದೆ. ಧ್ಯಾನ, ಚಾರಣಗಳಿಗೆ ಹೇಳಿ ಮಾಡಿಸಿದ ಸ್ಥಳವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.