ಅರಮನೆ ಮೈದಾನದಲ್ಲಿ ನಡೆಯುತ್ತಿರುವ ವಿಶ್ವ ಹವ್ಯಕ ಸಮ್ಮೇಳನ ಹವ್ಯಕರಿಗಾಗಿ ಮಾತ್ರವೇ ಅಲ್ಲ. ಅಲ್ಲಿ ಹವ್ಯಕರಲ್ಲದವರೂ ಭೇಟಿ ನೀಡಲು ಕಾರಣಗಳಿವೆ.

ತಲೆಗೆ ಒಂದಿಷ್ಟು ಆಹಾರ ಬಯಸುವವರು, ಅಲ್ಲಿ ನಡೆಯುವ ಗೋಷ್ಠಿಗಳಲ್ಲಿ ಪಾಲ್ಗೊಂಡು ಹವ್ಯಕ ಸಮುದಾಯದ ಬಗ್ಗೆ ಒಂದಿಷ್ಟು ವಿಚಾರ ತಿಳಿದು ಕೊಳ್ಳಬಹುದು. ಹಾಗೆಯೇ, ಗೋಷ್ಠಿಗಳು ನಡೆಯುವ ಸಭಾಂಗಣದ ಪಕ್ಕದಲ್ಲಿಯೇ ಇರುವ ಪಾಕಶಾಲೆಗೆ ಭೇಟಿ ನೀಡಿ ಹವ್ಯಕರ ಅಡುಗೆ ವೈವಿಧ್ಯವನ್ನು ಕಾಣಬಹುದು, ಸವಿಯಬಹುದು!

‘ತೊಡೆದೇವು’ ಎಂಬುದು ಹವ್ಯಕರ ಮನೆಗಳಲ್ಲಿ ವಿಶೇಷ ಸಂದರ್ಭಗಳಲ್ಲಿ ಸಿದ್ಧಪಡಿಸುವ ರುಚಿಕರ, ತುಸು ಸಿಹಿಯ ತಿನಿಸು. ಇದು ಸಮ್ಮೇಳನದ ಸ್ಥಳದಲ್ಲಿ ನಡೆಯುತ್ತಿರುವ ಪಾಕೋತ್ಸವದಲ್ಲಿ ಲಭ್ಯವಿದೆ. ಇದಕ್ಕೆ ತುಸು ತುಪ್ಪ ಸವರಿಕೊಂಡು ಆಸ್ವಾದಿಸಬೇಕು.

ಇಷ್ಟೇ ಅಲ್ಲ. ಹವ್ಯಕ ರುಚಿಯ ಸ್ಪರ್ಶವಿರುವ ಕಾಯಿ ಹೋಳಿಗೆ – ತುಪ್ಪ, ಗೋಳಿ ಬಜೆ, ಮಸಾಲೆ ದೋಸೆ ಹಾಗೂ ನೀರು ದೋಸೆ ಸಹ ಇಲ್ಲಿ ಲಭ್ಯ.

ಮಲೆನಾಡಿನಿಂದ ಬಂದವು: ಪಾಕೋತ್ಸವ ನಡೆಯುತ್ತಿರುವ ಸ್ಥಳದ ಪಕ್ಕದಲ್ಲೇ ಒಂದಿಷ್ಟು ಅಂಗಡಿಗಳನ್ನು ತೆರೆಯಲಾಗಿದ್ದು, ಮಲೆನಾಡಿನ ತರಹೇವಾರಿ ವಸ್ತುಗಳು ಇಲ್ಲಿ ಲಭ್ಯವಿವೆ. ಜೇನುತುಪ್ಪ, ತುಪ್ಪ, ಸುಕೇಳಿ (ಬಾಳೆ ಹಣ್ಣನ್ನು ಸಂಸ್ಕರಿಸಿ, ಒಣಗಿಸಿ ಮಾಡುವ ತಿನಿಸು), ಸಂಡಿಗೆ, ಹಪ್ಪಳ, ಉಪ್ಪಿನಕಾಯಿ, ಚಟ್ನಿ ಪುಡಿಗಳು, ಸಾಂಬಾರು ಪುಡಿಗಳು... ಪಟ್ಟಿ ಮಾಡುತ್ತ ಹೋದರೆ ಒಂದೆರಡು ಸಾಲುಗಳಲ್ಲಿ ಮುಗಿಯುವಂಥವಲ್ಲ ಅಲ್ಲಿರುವ ವಸ್ತುಗಳು.

ಗೋವಿನ ಉತ್ಪನ್ನಗಳನ್ನು ಮಾರಾಟ ಮಾಡಲೆಂದೇ ಒಂದೆರಡು ಮಳಿಗೆಗಳನ್ನು ಪ್ರತ್ಯೇಕವಾಗಿ ತೆರೆಯಲಾಗಿದೆ. ಮಲೆನಾಡು ಪ್ರದೇಶದ ವಸ್ತುಗಳ ಮಾರಾಟ ಸಹಕಾರ ಸಂಘಗಳೂ ತಮ್ಮ ಮಳಿಗೆಗಳನ್ನು ತೆರೆದಿವೆ.

‘ಹವ್ಯಕರಿಗೆ ತೊಡೆದೇವು, ಮಲೆನಾಡಿನ ಚೆಂದದ ಉಪ್ಪಿನಕಾಯಿ, ಒತ್ತು ಶಾವಿಗೆ ಇವೆಲ್ಲ ಮನೆಯಲ್ಲೂ ಸಿಗುತ್ತವೆ. ಆದರೆ ಬೇರೆ ಬೇರೆ ಸಮುದಾಯಗಳ ಜನರಿಗೆ ಅವು ಸುಲಭವಾಗಿ ಸಿಗುವುದಿಲ್ಲ ಎಂಬುದು ನನ್ನ ಭಾವನೆ. ಹಾಗಾಗಿ ಅವರು ತಮ್ಮ ಹವ್ಯಕ ಸ್ನೇಹಿತರ ಜೊತೆಗೂಡಿ ಅರಮನೆ ಮೈದಾನದ ಕಡೆ ಬಂದರೆ, ಇವನ್ನೆಲ್ಲ ಸವಿಯಬಹುದು’ ಎನ್ನುತ್ತಾರೆ ಸಮ್ಮೇಳನಕ್ಕೆ ಬಂದಿದ್ದ ಈಶ್ವರ್.

ಆಲೆಮನೆ ನೋಡಬನ್ನಿ
ಹವ್ಯಕ ಸಮ್ಮೇಳನದ ಭಾಗವಾಗಿ ಆಲೆಮನೆಯ ಪ್ರತಿಕೃತಿಯೊಂದು ತಲೆ ಎತ್ತಲಿದೆ. ಇದನ್ನು ಶನಿವಾರ ಮತ್ತು ಭಾನುವಾರ ಸಂದರ್ಶಿಸಬಹುದು ಎನ್ನುತ್ತಿದ್ದಾರೆ ಸಂಘಟಕರು.

ಆಲೆಮನೆ ಸಂಸ್ಕೃತಿ ಮಲೆನಾಡು, ಕರಾವಳಿಯಲ್ಲೂ ಕಡಿಮೆ ಆಗುತ್ತಿರುವಾಗ ಬೆಂಗಳೂರೆಂಬ ಮಹಾನಗರಿಯಲ್ಲಿ ಎರಡು ದಿನಗಳ ಅವಧಿಗೆ ನೋಡಲು ಸಿಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.