ಬೆಂಗಳೂರು: ಹಾರ್ದಿಕ್ ರಾಜ್ (37ಕ್ಕೆ 3) ಮತ್ತು ಸಮಿತ್ ದ್ರಾವಿಡ್ (25ಕ್ಕೆ 2) ಅವರ ಪರಿಣಾಮಕಾರಿ ಬೌಲಿಂಗ್ ದಾಳಿಯ ನೆರವಿನಿಂದ ಕರ್ನಾಟಕ ತಂಡವು ಕರ್ನಲ್ ಸಿ.ಕೆ. ನಾಯ್ದು ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ 343 ರನ್ಗಳ ಬೃಹತ್ ಮುನ್ನಡೆ ಪಡೆದು, ರೈಲ್ವೇಸ್ (ಆರ್ಎಸ್ಪಿಬಿ) ತಂಡದ ಮೇಲೆ ಫಾಲೋಆನ್ ಹೇರಿತು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನವಾದ ಶನಿವಾರ ರೈಲ್ವೇಸ್ ತಂಡವು ಮೊದಲ ಇನಿಂಗ್ಸ್ನಲ್ಲಿ 81 ಓವರ್ಗಳಲ್ಲಿ 186 ರನ್ಗಳಿಗೆ (ಶುಕ್ರವಾರ 3 ವಿಕೆಟ್ಗೆ 82) ಆಲೌಟ್ ಆಯಿತು. ಅಭಿಷೇಕ್ ಕೌಶಲ್ (73;221ಎ) ಏಕಾಂಗಿ ಹೋರಾಟ ನಡೆಸಿದರು.

ಫಾಲೋಆನ್ ಬಳಿಕ ಎರಡನೇ ಇನಿಂಗ್ಸ್ ಆರಂಭಿಸಿದ ರೈಲ್ವೇಸ್ ದಿನದಾಟದ ಅಂತ್ಯಕ್ಕೆ 10.1 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 41 ರನ್ ಗಳಿಸಿದೆ. ಇನಿಂಗ್ಸ್ ಸೋಲು ತಪ್ಪಿಸಲು ರೈಲ್ವೇಸ್ ಇನ್ನೂ 302 ರನ್ ದೂರದಲ್ಲಿದೆ. ಹೀಗಾಗಿ, ಕೊನೆಯ ದಿನದ ಆಟ ಕುತೂಹಲ ಕೆರಳಿಸಿದೆ.

ಕರ್ನಾಟಕ ತಂಡವು ಮೊದಲ ಇನಿಂಗ್ಸ್ನಲ್ಲಿ ಪ್ರಖರ್ ಚತುರ್ವೇದಿ (225) ಅವರ ದ್ವಿಶತಕದ ನೆರವಿನಿಂದ 7 ವಿಕೆಟ್ಗೆ 529 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು.

ಸಂಕ್ಷಿಪ್ತ ಸ್ಕೋರ್: ಮೊದಲ ಇನಿಂಗ್ಸ್: ಕರ್ನಾಟಕ: 135.4 ಓವರ್ಗಳಲ್ಲಿ 7 ವಿಕೆಟ್ಗೆ 529. ರೈಲ್ವೇಸ್: 81 ಓವರ್ಗಳಲ್ಲಿ 186 (ಅಭಿಷೇಕ್ ಕೌಶಲ್ 73, ಗರ್ವ್ ಸಾಂಗ್ವನ್ 42; ಸಮಿತ್ ದ್ರಾವಿಡ್ 25ಕ್ಕೆ 2, ಹಾರ್ದಿಕ್ ರಾಜ್ 37ಕ್ಕೆ 3). ಎರಡನೇ ಇನಿಂಗ್ಸ್: ರೈಲ್ವೇಸ್: 10.1 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 41.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.