ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಮೂನು ಸವಿದರು, ಚಿನ್ನವನ್ನೂ ಗೆದ್ದರು...

Last Updated 1 ಜುಲೈ 2018, 14:22 IST
ಅಕ್ಷರ ಗಾತ್ರ

ಎಂಟಿಆರ್ ಗುಲಾಬ್ ಜಾಮೂನ್‍ನ 25ನೇ ವಾರ್ಷಿಕೋತ್ಸವ ಅಂಗವಾಗಿಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ‘ಪ್ರತಿ ಗಂಟೆ ಸುವರ್ಣ ಗಂಟೆ’ ಸ್ಪರ್ಧೆಯಲ್ಲಿ ಬೆಂಗಳೂರಿನ ನಿವಾಸಿಎಸ್‌.ಕೆ. ಪ್ರತಿಭಾ ವಿಜೇತರಾಗಿದ್ದು, 17 ಲಕ್ಷ ಮೌಲ್ಯದ ಚಿನ್ನವನ್ನು ತನ್ನದಾಗಿಸಿಕೊಂಡಿದ್ದಾರೆ.

ಭಾರತದ ಅತ್ಯಂತ ಪರಿಚಿತ ಸಿಹಿ ತಿಂಡಿಗಳಲ್ಲಿ ಒಂದಾದ ಗುಲಾಬ್ ಜಾಮೂನ್ ಜನಸಮೂಹದ ನೆಚ್ಚಿನ ಪದಾರ್ಥವಾಗಿದೆ. ಎಂಟಿಆರ್‌ ಗುಲಾಬ್‌ ಜಾಮೂನ್‌ ತನ್ನ 25 ವರ್ಷಗಳ ಸಂಭ್ರಮವನ್ನು ಆಚರಿಸಲು, ಎಂಟಿಆರ್ ಗುಲಾಬ್ ಜಾಮೂನ್ ಮಿಕ್ಸ್ ಸುವರ್ಣ ಸ್ಪರ್ಧೆ(ಗೋಲ್ಡ್ ಕಾಂಟೆಸ್ಟ್)ಯೊಂದನ್ನು ಆಯೋಜಿಸಿತ್ತು. ಇದರಲ್ಲಿ ಪ್ರತಿ ಗಂಟೆಗೆ 1 ಗ್ರಾಮ್ ಚಿನ್ನ ಗೆಲ್ಲುವ ಮತ್ತು ಒಂದು ಬಂಪರ್ ಬಹುಮಾನ ವಿಜೇತರು ಅರ್ಧ ಕೆ.ಜಿ ಚಿನ್ನ ಗೆಲ್ಲುವ ಅವಕಾಶವನ್ನು ನೀಡಲಾಗಿತ್ತು.

ಬಹುಮಾನ ಗೆದ್ದ ಎಸ್.ಕೆ.ಪ್ರತಿಭಾ ಅವರು ಮಾತನಾಡಿ ‘ನಾನು 1 ಗ್ರಾಂ ಚಿನ್ನವನ್ನೂ ಕೂಡ ಗೆಲ್ಲಬಹುದು ಎಂದು ನಂಬಿರಲಿಲ್ಲ. ಆದರೆ ಈ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ನನ್ನ ಮಗ ನನ್ನನ್ನು ಪುಸಲಾಯಿಸಿದ್ದ’ ಎಂದರು.

ಈ ಸಂದರ್ಭದ ಕುರಿತು ಎಂಟಿಆರ್ ಫುಡ್ಸ್ಪ್ರೈವೇಟ್ ಲಿಮಿಟೆಡ್‍ನ ಮುಖ್ಯ ಮಾರುಕಟ್ಟೆ ಅಧಿಕಾರಿ, ಸುನಯ್ ಭಾಸಿನ್ ಅವರು ಮಾತನಾಡಿ, ‘ಭಾರತದಲ್ಲಿ ಮುಂಚೂಣಿಯ ಡೆಸರ್ಟ್ಮಿಕ್ಸ್ ಇದಾಗಿದೆ. ಗುಲಾಬ್ ಜಾಮೂನ್ ಮಿಕ್ಸ್‌ನ 25ನೇ ವಾರ್ಷಿಕೋತ್ಸವದ ಅಂಗವಾಗಿ, ಗ್ರಾಹಕರ ಹಬ್ಬದ ಸಂದರ್ಭವನ್ನು ನಿಜಕ್ಕೂ ವಿಶೇಷವಾಗಿಸಲು ನಾವು ಆಶಯಿಸಿದ್ದೆವು. ಚಿನ್ನ ಮತ್ತು ಹಬ್ಬಗಳಿಗೆ ನಂಟು ಇದೆ. ಹಾಗಾಗಿ ಗುಲಾಬ್ ಜಾಮೂನ್ ಮಿಕ್ಸ್ ಮೂಲಕ ನಾವು ಗ್ರಾಹಕರಿಗೆ ಪ್ರತಿ ಗಂಟೆಗೆ ಚಿನ್ನ ಗೆಲ್ಲುವ ಒಂದು ಅವಕಾಶವನ್ನು ನೀಡಿದ್ದೆವು’ ಎಂದು ತಿಳಿಸಿದರು. ಈ ಸ್ಪರ್ಧೆಯು ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣಗಳಲ್ಲಿ ನಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT