ಪ್ರಕೃತಿ ಮತ್ತು ಮನುಷ್ಯನ ನಡುವಿನ ಒಡನಾಟ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ. ಗಿಡ ಮರಗಳು, ಪ್ರಾಣಿ ಪಕ್ಷಿಗಳೊಂದಿಗೆ ಮಾನವನ ಸಂಬಂಧ...

ಈಗೆ ನಿಸರ್ಗದೊಂದಿಗಿನ ಬದುಕನ್ನು ಕಲಾವಿದ ಟಿ. ಶಿವಾಜಿ ಅವರು ಕುಂಚದಲ್ಲಿ ಅನಾವರಣಗೊಳಿಸಿದ್ದಾರೆ. ಪತ್ರಕರ್ತರಾಗಿರುವ ಶಿವಾಜಿ ಅವರು ಲೇಖನಿ ಜೊತೆಗೆ ಕುಂಚದಲ್ಲೂ ತಮ್ಮ ಕಲೆಯನ್ನು ಎಣೆದಿದ್ದಾರೆ. ಕ್ಯಾನ್ವಾಸ್ ಮೇಲಿನ ಅವರ ಅಕ್ರಿಲಿಕ್ ಚಿತ್ರಗಳಲ್ಲಿ ಗ್ರಾಮೀಣ ಭಾಗದ ಸೊಗಡಿದೆ. ಪೆನ್ನಿನಿಂದ ಬಿಡಿಸಿದ ಚಿತ್ರ ಅವರ ಕಲಾ ನೈಪುಣ್ಯತೆಗೆ ಹಿಡಿದ ಕನ್ನಡಿಯಾಗಿದೆ.

ಹೈದರಾಬಾದ್ನ ಕಲಾವಿದರಾದ ಟಿ. ಶಿವಾಜಿ ಮತ್ತು ರಾಜು ಯೆಪೂರಿ ಅವರ ‘ದಿ ಅನ್ಟೋಲ್ಡ್ ಸ್ಟೋರಿಸ್ ಆಫ್ ಮೆನ್ ಅಂಡ್ ವುಮೆನ್’ ಹೆಸರಿನಲ್ಲಿ ಪ್ರದರ್ಶಿತವಾಗುತ್ತಿರುವ ಕಲಾ ಬರಹಗಳು ನೋಡಗರ ಕಣ್ಮನ ಸೆಳೆಯುತ್ತಿವೆ.

ರಾಜು ಯೆಪೂರಿ ಅವರ ಚಿತ್ರಗಳಲ್ಲಿ ವಿವಿಧ್ಯ ಇದೆ. ಹೆಣ್ಣು ಗಂಡಿನ ನಡುವಿನ ಸಂಬಂಧವನ್ನು ಮಿಶ್ರ ಮಾಧ್ಯಮದಲ್ಲಿ ಚಿತ್ರಿಸಿದ್ದಾರೆ. ನಾಲ್ಕು ಗೋಡೆಗಳ ಮಧ್ಯೆ ನಡೆಯುವ ದೈಹಿಕ ಸಂಪರ್ಕದಲ್ಲಿ ಯಾವುದೇ ನಿಗೂಢತೆ ಇಲ್ಲ ಎಂಬುದನ್ನು ತಮ್ಮ ಚಿತ್ರಗಳಲ್ಲಿ ಕಾಣಿಸಿದ್ದಾರೆ. ಹೆಣ್ಣಿನ ಮನಸ್ಸಿನಲ್ಲಾಗುವ ತೊಳಲಾಟ ಅವರಲ್ಲಿ ಕುತೂಹಲ ಮೂಡಿಸಿ, ಕುಂಚದಲ್ಲೂ ಅದು ಮೂಡಿಬಂದಿದೆ. ಪ್ರದರ್ಶನ ಮಾ. 15ರವರೆಗೆ ನಡೆಯಲಿದೆ.

ಸ್ಥಳ: ಗ್ಯಾಲರಿ ಕಿವಶ್, 74/1, ರೈಲ್ವೆ ಸಮನಾಂತರ ರಸ್ತೆ, ಕುಮಾರ ಪಾರ್ಕ್ ವೆಸ್ಟ್. ಬೆಳಿಗ್ಗೆ 11ರಿಂದ ಸಂಜೆ 7.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.