ಮಂಗಳವಾರ, ಜೂಲೈ 7, 2020
25 °C
ರಂಜಾನ್ ರಜೆ ದಿನಗಳು 46ರಿಂದ 42ಕ್ಕೆ ಇಳಿಕೆ

ಮದರಸಾ ರಜೆ ದಿನಗಳನ್ನು ಕಡಿತಗೊಳಿಸಿದ ಉತ್ತರಪ್ರದೇಶ ಸರ್ಕಾರ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಮದರಸಾ ರಜೆ ದಿನಗಳನ್ನು ಕಡಿತಗೊಳಿಸಿದ ಉತ್ತರಪ್ರದೇಶ ಸರ್ಕಾರ

ನವದೆಹಲಿ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ನೇತೃತ್ವದ ಸರ್ಕಾರ 2018ರ ಮದರಸಾ ರಜೆಗಳ ಸಂಖ್ಯೆಯನ್ನು ಕಡಿತಗೊಳಿಸಿದೆ.

ರಜೆಗಳ ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸಿದ ಉತ್ತರ ಪ್ರದೇಶದ ಮದರಸಾ ಸಮಿತಿಯ ರೆಜಿಸ್ಟ್ರಾರ್ ರಾಹುಲ್ ಗುಪ್ತಾ ಅವರು,  ‘ಅನ್ಯ ಧರ್ಮೀಯ ಹಬ್ಬಗಳಾದ ದೀಪಾವಳಿ, ಕ್ರಿಸ್‌ಮಸ್, ದಸರಾ, ಮಹಾವೀರ ಜಯಂತಿ, ಬುದ್ಧ ಪೂರ್ಣಿಮಾ ರಕ್ಷಾ ಬಂಧನ ಹಬ್ಬಗಳಿಗೆ ಹೆಚ್ಚುವರಿ ರಜೆಯನ್ನು ನೀಡಲಾಗಿದೆ’ ಎಂದಿದ್ದಾರೆ.

ಅಲ್ಲದೇ ಈ ಮೊದಲು ರಂಜಾನ್ ಹಬ್ಬಕ್ಕೆ  46 ದಿನಗಳ ಕಾಲ ರಜೆಗಳನ್ನು ನೀಡಲಾಗುತ್ತಿತ್ತು. ಇದೀಗ 42ಕ್ಕೆ ಕಡಿತಗೊಳಿಸಲಾಗಿದೆ ಎಂದು ಹೇಳಿದ್ದಾರೆ.

ಹೊಸ ಕ್ಯಾಲೆಂಡರ್ ಪ್ರಕಾರ, ಈ ಮೊದಲು ರಂಜಾನ್ ಆರಂಭವಾಗುವ ಎರಡು ದಿನ ಮುಂಚಿತವಾಗಿ ರಜೆಯನ್ನು ಕೊಡಲಾಗುತ್ತಿತ್ತು. ಇದರಿಂದ ಊರಿಗೆ ಹೋಗುವ ಗುರುಗಳು ಹಾಗೂ ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ತಮ್ಮ ಊರುಗಳನ್ನು ತಲುಪುದು ಕಷ್ಟವಾಗುತ್ತಿತ್ತು. ಹಾಗಾಗಿ ಈ ಬಾರಿಯಿಂದ 10 ದಿನಗಳ ಮೊದಲೇ ರಜೆಯನ್ನು ನೀಡಲಾಗುತ್ತಿದೆ ಎಂದಿದ್ದಾರೆ.

ರಾಜ್ಯ ಅಲ್ಪಸಂಖ್ಯಾತ ಕಲ್ಯಾಣ ಸಚಿವ ಚೌಧರಿ ಲಕ್ಷ್ಮೀ ನಾರಾಯಣ್ , ‘ಈ ಹೊಸ ಕ್ಯಾಲೆಂಡರ್‌ನ ನಿಯಮ ಎಲ್ಲಾ ಸಮಿತಿ, ವಿಶ್ವವಿದ್ಯಾನಿಲಯ, ಮದರಸಾಗಳಿಗೆ ಅನ್ವಯವಾಗಲಿದೆ. ಇದು ವಿದ್ಯಾರ್ಥಿಗಳ ಅಭಿಪ್ರಾಯ ಅನುಸಾರ ಮಾಡಲಾಗಿರುವ ಕ್ಯಾಲೆಂಡರ್’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.