ಶನಿವಾರ, ಜೂಲೈ 4, 2020
21 °C

ಚಿತ್ರದುರ್ಗ: ರಸ್ತೆ ಅಪಘಾತದಲ್ಲಿ ಐವರು ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ರಸ್ತೆ ಅಪಘಾತದಲ್ಲಿ ಐವರು ಸಾವು

ಚಿತ್ರದುರ್ಗ: ಕ್ರೂಸರ್ ಮತ್ತು ಟ್ರಕ್ ಡಿಕ್ಕಿಯಾಗಿ ಸ್ಥಳದಲ್ಲೇ ಐವರು ಮೃತಪಟ್ಟ ಘಟನೆ ಚಿತ್ರದುರ್ಗ ಹೊರವಲಯದ ಸಿಬಾರ ಬಳಿ ಸೋಮವಾರ ಬೆಳಿಗ್ಗೆ 7.30ಕ್ಕೆ ನಡೆದಿದೆ. ಎಂಟು ಜನ ಗಾಯಗೊಂಡಿದ್ದಾರೆ.

ಸಿದ್ದಾರ್ಥ, ರಾಕೇಶ್, ಶಿವಲಿಂಗು, ವಿನೋದ್ ಹಾಗೂ ಕ್ರೂಸರ್ ಚಾಲಕ ಸುರೇಶ್ ಮೃತರು. ಇವರು ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನ ಮುನ್ಯಾಳು ಗ್ರಾಮದವರಾಗಿದ್ದಾರೆ.

‌ಮೈಸೂರು ಪ್ರವಾಸ ಮುಗಿಸಿ ವಾಪಾಸಾಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಮೃತರು ಸುಮಾರು 18ರಿಂದ 24ವರ್ಷದೊಳಗಿನವರಾಗಿದ್ದಾರೆ.

ಗಾಯಾಳುಗಳುಗಳನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.