ಭಾನುವಾರ, ಜೂನ್ 7, 2020
29 °C

ಟಿಪ್ಪರ್‌ ಡಿಕ್ಕಿ ಸ್ಥಳದಲ್ಲೇ ವ್ಯಕ್ತಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟಿಪ್ಪರ್‌ ಡಿಕ್ಕಿ ಸ್ಥಳದಲ್ಲೇ ವ್ಯಕ್ತಿ ಸಾವು

ಕನಕಪುರ: ನಗರದ ವಾಣಿ ಟಾಕೀಸ್‌ ಮುಂಭಾಗ ಶನಿವಾರ ಟಿಪ್ಪರ್‌ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್‌ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಬೆಂಗಳೂರು ದೊಡ್ಡಮಾವಳ್ಳಿ ನಂಜೇಗೌಡ ಸ್ಟ್ರೀಟ್‌ನ ನಟರಾಜು ಅವರ ಪುತ್ರ ಎನ್‌.ಸಾಗರ್‌ (25) ಮೃತಪಟ್ಟವರು. ಅವರು ಬೆಂಗಳೂರಿನಿಂದ ಹೋಂಡಾ ಆಕ್ಟೀವಾ ಸ್ಕೂಟರ್‌ನಲ್ಲಿ ಕಂಪನಿ ಸಂಬಂಧಿತ ಸಭೆಗೆ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ.

ದ್ವಿಚಕ್ರ ವಾಹನಕ್ಕೆ ಟಿಪ್ಪರ್‌ ಡಿಕ್ಕಿ ಹೊಡೆದಾಗ ಸಾಗರ್‌ ರಸ್ತೆ ಮೇಲೆ ಬಿದ್ದಿದ್ದಾರೆ. ಅವರ ತಲೆ ಮೇಲೆ ಟಿಪ್ಪರ್‌ನ ಚಕ್ರ ಹರಿದಿದೆ. ಹೆಲ್ಮೆಟ್‌ ಹೋಳಾಗಿ ತಲೆಗೆ ತೀವ್ರವಾಗಿ ಪೆಟ್ಟಾಗಿ ಕ್ಷಣಾರ್ಧದಲ್ಲಿ ಮೃತಪಟ್ಟಿದ್ದಾರೆ. ಸ್ಕೂಟರ್‌ನಲ್ಲಿದ್ದ ಡ್ರೈವಿಂಗ್‌ ಲೈಸೆನ್ಸ್‌ ಮತ್ತು ಆರ್‌ಸಿ ಪುಸ್ತಕದ ವಿಳಾಸ ಪತ್ತೆ ಹಚ್ಚಿ ಮೃತರ ಕುಟುಂಬಕ್ಕೆ ಮಾಹಿತಿ ನೀಡಲಾಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.