ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ಯಾಕ್ಟ್ ಚೆಕ್: ಕಾಂಗ್ರೆಸ್‌ನ ಚಿಂತನ ಶಿಬಿರದಲ್ಲಿ ಪಾಕಿಸ್ತಾನದ ಧ್ವಜದ ಬಣ್ಣಗಳು?

Last Updated 16 ಮೇ 2022, 19:30 IST
ಅಕ್ಷರ ಗಾತ್ರ

ರಾಜಸ್ಥಾನದ ಉದಯಪುರದಲ್ಲಿ ನಡೆದ ಕಾಂಗ್ರೆಸ್‌ನ ಮೂರು ದಿನಗಳ ‘ಚಿಂತನ ಶಿಬಿರ’ದ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಚಿಂತನ ಶಿಬಿರದಲ್ಲಿ ಪಾಕಿಸ್ತಾನದ ಧ್ವಜದ ಬಣ್ಣಗಳನ್ನು ಕಾಂಗ್ರೆಸ್‌ ಬಳಸಿದೆ ಎಂದು ಆರೋಪಿಸಲಾಗಿದೆ. ಚಾವಣಿ ಅಲಂಕಾರಕ್ಕೆ ಬಳಸಿರುವ ಬಟ್ಟೆಯು ಹಸಿರು ಮತ್ತು ಬಿಳಿ ಬಣ್ಣದ್ದಾಗಿದೆ. ಆದರೆ ನೆಲಕ್ಕೆ ಕೇಸರಿ ಬಣ್ಣದ ನೆಲಹಾಸನ್ನು ಬಳಸಲಾಗಿದೆ ಎಂದು ಚಿತ್ರದ ಜೊತೆ ವಿವರಿಸಲಾಗಿದೆ.

ಚಿತ್ರದ ಜೊತೆ ನೀಡಲಾಗಿರುವ ಮಾಹಿತಿ ಸುಳ್ಳು ಎಂದು ‘ದಿ ಕ್ವಿಂಟ್‌’ ವರದಿ ಮಾಡಿದೆ. ಕಾಂಗ್ರೆಸ್‌ನ ಹಲವು ನಾಯಕರ ಟ್ವಿಟರ್‌ ಖಾತೆಗಳಲ್ಲಿ ಮತ್ತು ಪಕ್ಷದ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಕಾರ್ಯಕ್ರಮದ ಚಿತ್ರಗಳನ್ನು ಪೋಸ್ಟ್‌ ಮಾಡಲಾಗಿದೆ. ಚಾವಣಿಗೆ ಕೇಸರಿ, ಬಿಳಿ, ಹಸಿರು ಬಣ್ಣದ ಬಟ್ಟೆಗಳನ್ನು ಬಳಸಲಾಗಿದೆ. ಪಕ್ಷದ ಯೂಟ್ಯೂಬ್‌ ಚಾನಲ್‌ ಕೂಡಾ ಕಾರ್ಯಕ್ರಮದ ಹಲವು ವಿಡಿಯೊಗಳನ್ನು ಪ್ರದರ್ಶಿಸಿದೆ. ಕಾರ್ಯಕ್ರಮದಲ್ಲಿ ತ್ರಿವರ್ಣ ಧ್ವಜದ ಬಣ್ಣವನ್ನು ಚಾವಣಿಗೆ ಬಳಸಿರುವುದು ಸ್ಪಷ್ಟವಾಗಿ ಕಾಣುತ್ತದೆ ಎಂದು ದಿ ಕ್ವಿಂಟ್‌ ವರದಿಯಲ್ಲಿ ವಿವರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT