ಬೆಂಗಳೂರು: ಭಾರತ ಹಾಗೂ ಪಾಕಿಸ್ತಾನ ನಡುವಿನ ಉದ್ವಿಗ್ನ ಪರಿಸ್ಥಿತಿ ಇರುವಾಗಲೇ ಹಲವು ಸುಳ್ಳು ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಪಾಕಿಸ್ತಾನದ ಮೇಲೆ ಭಾರತ ನಡೆಸಿದ ದಾಳಿಯೆಂದೂ, ಭಾರತದ ಮೇಲೆ ಪಾಕಿಸ್ತಾನ ನಡೆಸಿದ ದಾಳಿಯೆಂದೂ ಹಲವು ವಿಡಿಯೊಗಳು ಹರಿದಾಡುತ್ತಿವೆ.
.India-Pakistan Tensions: ಹಡಗು, ಬಂದರುಗಳಲ್ಲಿ ಭದ್ರತೆ ಹೆಚ್ಚಳ.
ಟಿ.ವಿ ಮಾಧ್ಯಮ, ಎಕ್ಸ್, ಇನ್ಸ್ಟಾಗ್ರಾಮ್ ಹಾಗೂ ಫೇಸ್ಬುಕ್ ಸೇರಿ ಹಲವು ವೇದಿಕೆಗಳಲ್ಲಿ ತಪ್ಪು, ಸುಳ್ಳು ಮಾಹಿತಿ ಹರಿದಾಡುತ್ತಿವೆ.

ವಿಡಿಯೊ ಗೇಮ್ ಒಂದರ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅದರಲ್ಲಿ ಭಾರಿ ಪ್ರಮಾಣದ ರಾಕೆಟ್ ದಾಳಿ ನಡೆಯವುದು ಕಾಣಬಹುದಾಗಿದೆ. ಇದು ಪಾಕಿಸ್ತಾನ ಭಾರತದ ಮೇಲೆ ನಡೆಸಿದ ದಾಳಿ ಎನ್ನುವ ಸುಳ್ಳು ಪ್ರಚಾರ ನಡೆಸಲಾಗುತ್ತಿದೆ.
.India-Pakistan Tensions: ಪಾಕ್ ದಾಳಿ ಯತ್ನ: ಜಮ್ಮುವಿಗೆ ದೌಡಾಯಿಸಿದ CM ಒಮರ್.
ಕನ್ನಡ ಟಿ.ವಿ ಮಾಧ್ಯಮಗಳೂ ಸೇರಿ, ದೇಶದ ಹಲವು ಮಾಧ್ಯಗಳು ಇದು ಪಾಕಿಸ್ತಾನದ ಮೇಲೆ ಭಾರತ ನಡೆಸಿದ ದಾಳಿ ಎಂದು ವರದಿ ಮಾಡಿದ್ದಲ್ಲದೆ, ಅವುಗಳನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದವು.

ವಿಡಿಯೊದ ಸತ್ಯಾಸತ್ಯತೆಯನ್ನು ಪಿಐಬಿಯ ಫ್ಯಾಕ್ಟ್ ಚೆಕ್ ತಂಡ ಪರಿಶೀಲಿಸಿದ್ದು, ಹರಿದಾಡುತ್ತಿರುವ ವಿಡಿಯೊ 3 ವರ್ಷಕ್ಕೂ ಹಳೆಯದು. ಭಾರತ–ಪಾಕಿಸ್ತಾನದ ಸದ್ಯದ ಪರಿಸ್ಥಿತಿಗೂ ಅದಕ್ಕೂ ಸಂಬಂಧವಿಲ್ಲ ಎಂದು ಹೇಳಿದೆ.
.India–Pakistan Tensions | ಪಾಕ್ ದಾಳಿ ಹಿಮ್ಮೆಟ್ಟಿಸಿದ್ದೇವೆ: ಭಾರತೀಯ ಸೇನೆ.
ಜೊತೆಗೆ ಮೂರು ವರ್ಷಗಳ ಹಿಂದೆ ಯೂಟ್ಯೂಬ್ನಲ್ಲಿ ಪ್ರಸಾರಚಾದ ವಿಡಿಯೊದ ಲಿಂಕ್ ಕೂಡ ನೀಡಿದೆ.

ಶೇರ್ ಮಾಡುವುದಕ್ಕಿಂತ ಮುಂಚೆ ಎಚ್ಚರವಹಿಸಿ ಎಂದು ಪಿಐಬಿ ಫ್ಯಾಕ್ಟ್ಚೆಕ್ ಎಕ್ಸ್ಪೋಸ್ಟ್ನಲ್ಲಿ ತಿಳಿಸಿದೆ.

ಮೂಲ ವಿಡಿಯೊದ ಲಿಂಕ್: https://www.youtube.com/watch?v=TxORZsPLpCY
.India-Pak Tensions | ಸುಳ್ಳು ಪೋಸ್ಟ್: ಸರ್ಕಾರದ ಅಧಿಕೃತ ಖಾತೆ ಅವಲಂಬಿಸಿ; PIB.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.