ಲಡಾಖ್‌ನ ಗಾಲ್ವನ್ ಕಣಿವೆಯಲ್ಲಿ ಚೀನಾ ಸೈನಿಕರ ಜತೆ ನಡೆದ ಸಂಘರ್ಷದಲ್ಲಿ ಭಾರತದ 35 ಸೈನಿಕರು ಮೃತಪಟ್ಟಿದ್ದಾರೆ. ಭಾರತೀಯ ಸೇನೆಗೆ ಭಾರಿ ಹಾನಿ ಸಂಭವಿಸಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಾಶ್ಮೀರಿ ಅಪ್‌ಡೇಟ್ ಎಂಬ ಹೆಸರಿನ ಫೇಸ್‌ಬುಕ್ ಖಾತೆಯಿಂದ ಈ ಸುದ್ದಿಯನ್ನು ಮೊದಲು ಪೋಸ್ಟ್ ಮಾಡಲಾಗಿದೆ. ನೂರಾರು ಸೈನಿಕರ ಶವಗಳನ್ನು ಒಂದೆಡೆ ಸಾಲಾಗಿ ಮಲಗಿಸಿರುವ ಚಿತ್ರವೂ ಈ ಪೋಸ್ಟ್‌ನಲ್ಲಿದೆ. ಈ ಚಿತ್ರವೂ ಫೇಸ್‌ಬುಕ್, ಟ್ವಿಟರ್ ಮತ್ತು ಟಿಕ್‌ಟಾಕ್‌ನಲ್ಲಿ ವೈರಲ್ ಆಗಿದೆ.

ಆದರೆ, ಈ ಚಿತ್ರಕ್ಕೂ ಲಡಾಖ್‌ನಲ್ಲಿನ ಸಂಘರ್ಷಕ್ಕೂ ಸಂಬಂಧವಿಲ್ಲ ಎಂದು ಆಲ್ಟ್‌ನ್ಯೂಸ್ ವರದಿ ಮಾಡಿದೆ. ರಿವರ್ಸ್ ಇಮೇಜ್ ಸರ್ಚ್ ಮೂಲಕ ಈ ಚಿತ್ರವನ್ನು ಪರಿಶೀಲಿಸಿದಾಗ, ಅದು ನೈಜೀರಿಯಾಕ್ಕೆ ಸಂಬಂಧಿಸಿದ ಚಿತ್ರ,2015ರದ್ದು ಎಂಬುದು ಪತ್ತೆಯಾಗಿದೆ. ಬೊಕೊಹರಮ್ ಉಗ್ರರ ಜತೆಗಿನ ಕಾದಾಟದಲ್ಲಿ ಮೃತಪಟ್ಟಿದ್ದ 105 ಸೈನಿಕರ ಶವಗಳ ಅಂತ್ಯಕ್ರಿಯೆಯನ್ನು ಅಲ್ಲಿನ ಸೇನೆ ರಹಸ್ಯವಾಗಿ ನಡೆಸಿತ್ತು. ಈ ಚಿತ್ರವನ್ನೇ ತಿರುಚಿ, ಗಾಲ್ವನ್ ಸಂಘರ್ಷಕ್ಕೆ ತಳಕು ಹಾಕಿ ಪೋಸ್ಟ್ ಮಾಡಲಾಗಿದೆ. ಇದು ಸುಳ್ಳು ಸುದ್ದಿ ಎಂದು ಆಲ್ಟ್‌ನ್ಯೂಸ್ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.