ಶನಿವಾರ, 9 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

FactCheck:ಇದು ಗಾಜಾದ ದೃಶ್ಯವಲ್ಲ, ಮಲೇಷ್ಯಾದಲ್ಲಿ ನಡೆದ ಅಂತ್ಯಸಂಸ್ಕಾರದ ತರಬೇತಿ

Published 8 ನವೆಂಬರ್ 2023, 23:30 IST
Last Updated 8 ನವೆಂಬರ್ 2023, 23:30 IST
ಅಕ್ಷರ ಗಾತ್ರ

ಹೆಣಗಳಿಗೆ ಬಿಳಿ ಬಟ್ಟೆ ಸುತ್ತಿ ಸಾಲಾಗಿ ಇರಿಸಲಾಗಿರುವ ದೃಶ್ಯಗಳನ್ನು ವಿಡಿಯೊ ಆರಂಭವಾದ ಕೆಲವು ಸೆಕೆಂಡಿನವರೆಗೂ ನೋಡಬಹುದು. ಇದ್ದಕ್ಕಿದ್ದಂತೆ, ಶವಗಳು ಕಣ್ಣುಬಿಡುತ್ತವೆ... ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಖ್ಯೆಯಲ್ಲಿ ಹರಿದಾಡುತ್ತಿವೆ. ಇಸ್ರೇಲ್‌–ಹಮಾಸ್‌ ಯುದ್ಧಕ್ಕೂ ಇದಕ್ಕೂ ಹೋಲಿಸಿ ಅಭಿಪ್ರಾಯಹಂಚಿಕೊಳ್ಳಲಾಗುತ್ತಿದೆ. ಗಾಜಾದಲ್ಲಿ ಜನರು ಸಾಯುತ್ತಿಲ್ಲ, ಜಗತ್ತಿಗೆ ಸಾವಿನ ಸಂಖ್ಯೆಯನ್ನು ತೋರಿಸಲು ಈ ರೀತಿ ನಾಟಕ ಮಾಡುತ್ತಿದ್ದಾರೆ ಎಂದು ಪೋಸ್ಟ್‌ಗಳನ್ನು ಹಂಚಿಕೊಳ್ಳಲಾಗುತ್ತಿದೆ. ‘ಸತ್ತವನಿಗೆ ಜೀವ ಬಂತು!’ ಎನ್ನುವ ವ್ಯಂಗ್ಯದ ದಾಟಿಯಲ್ಲಿ ಪೋಸ್ಟ್‌ಗಳನ್ನು ಹಂಚಿಕೊಳ್ಳಲಾಗುತ್ತಿದೆ. ಆದರೆ, ಇದು ಸುಳ್ಳು ಸುದ್ದಿ.

ಮಲೇಷ್ಯಾದಲ್ಲಿ ಅಂತ್ಯಸಂಸ್ಕಾರದ ವಿಧಿಗಳನ್ನು ಹೇಳಿಕೊಡುವ ತರಬೇತಿ ಕೇಂದ್ರಗಳಿವೆ. ಹೀಗೆ ಮುಸ್ಲಿಂ ಸಮುದಾಯದ ಅಂತ್ಯಸಂಸ್ಕಾರದ ಕುರಿತು ತರಬೇತಿ ನೀಡುತ್ತಿದ್ದ ವೇಳೆ ಈ ವಿಡಿಯೊವನ್ನು ಸೆರೆ ಹಿಡಿಯಲಾಗಿದೆ. ಇನ್‌ಸ್ಟಾಗ್ರಾಂನಲ್ಲಿ ಆಗಸ್ಟ್‌ 21ರ ಸುಮಾರಿಗೆ ಈ ವಿಡಿಯೊಗಳು ಮೊದಲು ಹರಿದಾಡಿವೆ. ‘ಈ ವಿಡಿಯೊಗಳನ್ನು ತಮಾಷೆಗಾಗಿ ಹಂಚಿಕೊಳ್ಳಲಾಗುತ್ತಿದೆ’ ಎಂದು ಜಯಾನ್‌ ಎನ್ನುವ ಮಲೇಷ್ಯಾದ ರೇಡಿಯೊ ವಾಹಿನಿಯು ತನ್ನ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದೆ. ಸ್ವಯಂ ಪ್ರೇರಿತವಾಗಿ ಮಲೇಷ್ಯಾದ ಶಾಲೆ ಹಾಗೂ ಮಸೀದಿಗಳಲ್ಲಿ ಈ ಕೋರ್ಸ್‌ ಅನ್ನು ಮಾಡಬಹುದು ಎಂದು ಅಲ್ಲಿನ ಸ್ಥಳೀಯರೊಬ್ಬರು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಹಲವು ವಿಡಿಯೊಗಳು ಯೂಟ್ಯೂಬ್‌ನಲ್ಲಿ ಇವೆ. ಖಚಿತವಾಗಿ ಯಾವ ಜಾಗದಲ್ಲಿ ಈ ವಿಡಿಯೊ ಸೆರೆಹಿಡಿಯಲಾಗಿದೆ ಎಂದು ತಿಳಿದುಬಂದಿಲ್ಲ. ಆದರೆ, ಇದು ಇಸ್ರೇಲ್‌–ಹಮಾಸ್‌ ಯುದ್ಧಕ್ಕೆ ಸಂಬಂಧಿಸಿದ್ದಲ್ಲ ಎಂದು ಬೂಮ್‌ಲೈವ್‌ ಫ್ಯಾಕ್ಟ್‌ಚೆಕ್‌ ಪ್ರಕಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT