ನವದೆಹಲಿ: ಪಾಕಿಸ್ತಾನದ ವಶದಲ್ಲಿಎಷ್ಟು ಮಂದಿ ಭಾರತೀಯ ಮೀನುಗಾರರಿದ್ದಾರೆ ಎಂಬ ಮಾಹಿತಿಯನ್ನುಕೇಂದ್ರ ಸರ್ಕಾರವುಲೋಕಸಭೆಗೆ ಶುಕ್ರವಾರ ನೀಡಿದೆ. ಅಲ್ಲದೇ, ಮೀನುಗಾರರ ಬಂಧನ ಮತ್ತು ಅವರ ದೋಣಿಗಳನ್ನು ವಶಪಡಿಸಿಕೊಂಡಿರುವಘಟನೆಗಳನ್ನು ಭಾರತ ನಿರಂತರವಾಗಿ ಪಾಕಿಸ್ತಾನದೊಂದಿಗೆ ಪ್ರಸ್ತಾಪಿಸುತ್ತಲೇ ಬರುತ್ತಿದೆ ಎಂದು ಸರ್ಕಾರ ಹೇಳಿದೆ.

'ಭಾರತ-ಪಾಕಿಸ್ತಾನದ ನುಡುವೆ2008ರ ಮೇ 21ರಂದು'ದೂತವಾಸಪ್ರವೇಶ ಒಪ್ಪಂದ' ಆಗಿದೆ. ಅದರ ಪ್ರಕಾರಎರಡೂದೇಶಗಳ ಜೈಲುಗಳಲ್ಲಿ ಇರುವ ಎರಡೂ ಕಡೆಗಳ ನಾಗರಿಕರ, ಮೀನುಗಾರರ ಪಟ್ಟಿಗಳನ್ನುಪ್ರತಿ ವರ್ಷದ ಜನವರಿ 1 ಮತ್ತು ಜುಲೈ 1 ರಂದು ವಿನಿಮಯ ಮಾಡಿಕೊಳ್ಳಲಾಗುತ್ತದೆ' ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ ಮುರಳೀಧರನ್ ಲೋಕಸಭೆಗೆ ತಿಳಿಸಿದರು.

'2022ರ ಜನವರಿ 1 ರಂದು ವಿನಿಮಯ ಮಾಡಿಕೊಂಡ ಪಟ್ಟಿಗಳ ಪ್ರಕಾರ, ಭಾರತೀಯರು ಅಥವಾ ಭಾರತೀಯರೆಂದು ನಂಬಲಾದ 577 ಮೀನುಗಾರರನ್ನುಬಂಧಿಸಿರುವುದಾಗಿ ಪಾಕಿಸ್ತಾನ ಒಪ್ಪಿಕೊಂಡಿದೆ' ಎಂದುಮುರಳೀಧರನ್ ಅವರುಪ್ರಶ್ನೋತ್ತರ ಅವಧಿಯಲ್ಲಿ ಹೇಳಿದರು.

ಅಲ್ಲದೆ, 'ಸರ್ಕಾರದ ದಾಖಲೆಗಳ ಪ್ರಕಾರ 1,164 ಭಾರತೀಯ ಮೀನುಗಾರಿಕಾ ದೋಣಿಗಳು ಪಾಕಿಸ್ತಾನದ ವಶದಲ್ಲಿವೆ ಎಂದು ನಂಬಲಾಗಿದೆ' ಎಂದು ಸಚಿವರು ಹೇಳಿದರು. 'ಆದರೆ,ದೋಣಿಗಳನ್ನು ವಶಪಡಿಸಿಕೊಂಡಿರುವುದನ್ನು ಪಾಕಿಸ್ತಾನ ಒಪ್ಪಿಕೊಂಡಿಲ್ಲ' ಎಂದೂ ಅವರು ತಿಳಿಸಿದರು.

'ಪಾಕಿಸ್ತಾನದ ಅಧಿಕಾರಿಗಳು ಭಾರತೀಯ ಮೀನುಗಾರರನ್ನು ಮತ್ತು ಅವರ ದೋಣಿಗಳನ್ನುವಶದಲ್ಲಿಟ್ಟುಕೊಂಡಿರುವ ಘಟನೆಗಳನ್ನು ನಿರಂತರವಾಗಿ ಪ್ರಸ್ತಾಪಿಸುತ್ತಿದ್ದೇವೆ.ಈ ಸಮಸ್ಯೆಯನ್ನು ಮಾನವೀಯತೆ ಆಧಾರದ ಮೇಲೆ ಪರಿಗಣಿಸಬೇಕಾಗಿದೆ' ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.