ಚೆನ್ನೈ: ರೈಲ್ವೆ ಹಳಿ ದಾಟುವ ಆನೆಗಳ ಸುರಕ್ಷತೆ ಖಾತ್ರಿಗೆ ಕೃತಕ ಬುದ್ಧಿಮತ್ತೆ (AI) ಆಧಾರಿತ ತಂತ್ರಜ್ಞಾನ ಬಳಸಿರುವ ತಮಿಳುನಾಡು ಅರಣ್ಯ ಇಲಾಖೆ ಈ ಕುರಿತ ವಿಡಿಯೊ ಬಿಡುಗಡೆ ಮಾಡಿದೆ.

ಕೊಯಮತ್ತೂರಿನ ಮದುಕ್ಕರೈನಲ್ಲಿನ ರೈಲ್ವೆ ಹಳಿಯ ಮೇಲೆ ಮರಿಗಳೊಂದಿಗೆ ಹಳಿ ದಾಟುತ್ತಿರುವ ಆನೆ ಹಿಂಡಿನ ದೃಶ್ಯ ವಿಡಿಯೊದಲ್ಲಿದೆ.

ಈ ಬಗ್ಗೆ ಮಾಹಿತಿ ಹಂಚಿಕೊಂಡ ಇಲಾಖೆ, ‘ಕೃತಕ ಬುದ್ಧಿಮತ್ತೆ ಆಧಾರಿತ ಮುನ್ನೆಚ್ಚರಿಕೆ ವ್ಯವಸ್ಥೆಯ ಮೂಲಕ 2023ರ ನವೆಂಬರ್ನಿಂದ ಈವರೆಗೆ ಯಾವೊಂದು ಆನೆಗಳ ಸಾವು ಸಂಭವಿಸಿಲ್ಲ. 12 ಟವರ್ಗಳು, 24 ಕ್ಯಾಮೆರಾ, 25 ಅರಣ್ಯ ಸಿಬ್ಬಂದಿ ಕಣ್ಗಾವಲಿನಲ್ಲಿ 6,592 ಆನೆಗಳು ಸುರಕ್ಷಿತವಾಗಿ ಹಳಿ ದಾಟಿವೆ’ ಎಂದು ಮಾಹಿತಿ ಹಂಚಿಕೊಂಡಿದೆ. ಮುಂದುವರಿದು, ‘ಪ್ರತಿಯೊಂದು ಆನೆಯೂ ಮುಖ್ಯ. ಬದ್ಧತೆಯ ಜತೆಗೆ ತಂತ್ರಜ್ಞಾನವೂ ಬೆಸೆದಾಗ ಏನನ್ನಾದರೂ ಸಾಧಿಸಲು ಸಾಧ್ಯ ಎಂದು ತಮಿಳುನಾಡು ಸಾಬೀತುಮಾಡಿದೆ’ ಎಂದು ಬರೆದುಕೊಂಡಿದೆ.
.ಬೇಟೆಯನ್ನು ತಿನ್ನುತ್ತಿದ್ದ ಸಿಂಹದ ಬಳಿ ಹೋಗಿ ವಿಡಿಯೊ ಮಾಡಿದ ವ್ಯಕ್ತಿಯ ಬಂಧನ.ಉತ್ತರಕಾಶಿ ಮೇಘಸ್ಫೋಟ: ಮಣ್ಣಿನಡಿಯಿಂದ ತೆವಳಿಕೊಂಡು ಬಂದು ಸಾವಿನ ದವಡೆಯಿಂದ ಪಾರಾದ!.ಸಂಬಳ ನೀಡಿಲ್ಲವೆಂದು ಫುಟ್ಪಾತ್ ಮೇಲೆ ಮಲಗಿದ TCS ಉದ್ಯೋಗಿ: ಕಂಪನಿ ಹೇಳಿದ್ದೇನು?.ಕೊಲ್ಹಾಪುರಿ ಚಪ್ಪಲಿ ವಿನ್ಯಾಸ ನಕಲು ಮಾಡಿದ ಪ್ರಾಡಾ: ಚಪ್ಪಲ್ ಚೋರ್ ಎಂದ ನೆಟ್ಟಿಗರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.