ಮುಂಬೈ: ಕೋಲ್ಕತ್ತದಿಂದ ಮುಂಬೈಗೆ ತೆರಳಬೇಕಿದ್ದ ಇಂಡಿಗೊ ವಿಮಾನಕ್ಕೆ ಬಾಂಬ್ ಬೆದರಿಕೆ ಹಾಕಲಾಗಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ಪ್ರಯಾಣಿಕರೊಬ್ಬರು ಬಾಂಬ್ ಹೊತ್ತೊಯ್ಯುತ್ತಿದ್ದಾರೆ ಎಂಬ ಶಂಕೆ ವ್ಯಕ್ತವಾದ ಹಿನ್ನೆಲೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಯನ್ನು ತಪಾಸಣೆ ನಡೆಸುವ ಸಮಯದಲ್ಲಿ ಬಾಂಬ್ ಬೆದರಿಕೆಯೊಡ್ಡಿದ್ದ ಹಿನ್ನೆಲೆ ಆತನನ್ನು ತೀವ್ರ ತಪಾಸಣೆಗೆ ಒಳಪಡಿಸಲಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
.Operation Sindoor: ನಮ್ಮ 11 ಸೈನಿಕರಷ್ಟೆ ಮೃತಪಟ್ಟಿದ್ದಾರೆಂದ ಪಾಕ್!.'ನಕಲಿ ಮತದಾರರ ಗುರುತಿನ ಚೀಟಿ' ಸಮಸ್ಯೆ ಪರಿಹರಿಸಲಾಗಿದೆ: ಚುನಾವಣಾ ಆಯೋಗ.
ಕೋಲ್ಕತ್ತದಿಂದ ಮುಂಬೈಗೆ ತೆರಳಬೇಕಿದ್ದ ಇಂಡಿಗೊ 6E 5227 ವಿಮಾನಕ್ಕೆ ಬಾಂಬ್ ಬೆದರಿಕೆ ಬಂದಿತ್ತು. ಭದ್ರತಾ ನಿಯಮಗಳಿಗೆ ಅನುಸಾರವಾಗಿ ವಿಮಾನವನ್ನು ಪ್ರತ್ಯೇಕ ಸ್ಥಳಕ್ಕೆ ಸ್ಥಳಾಂತರಿಸಿ ತೀವ್ರ ಶೋಧ ನಡೆಸಲಾಯಿತು ಎಂದು ವಿಮಾನಯಾನ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.

ಇಂಡಿಯೊ ವಿಮಾನದ ಮೂಲಕ ಕೋಲ್ಕತ್ತಗೆ ಬಂದಿಳಿದ ಆರೋಪಿಯು ಅದೇ ವಿಮಾನಯಾನ ಸಂಸ್ಥೆಯ ಮೂಲಕ ಮುಂಬೈಗೆ ತೆರಳುತ್ತಿದ್ದನು.

ಕೋಲ್ಕತ್ತದಿಂದ ಮುಂಬೈಗೆ ಪ್ರಯಾಣಿಸಬೇಕಿದ್ದ ಒಟ್ಟು 186 ಪ್ರಯಾಣಿಕರಲ್ಲಿ 179 ಜನರು ವಿಮಾನ ಹತ್ತಿದ್ದರು. ಆದರೆ ಬಾಂಬ್ ಬೆದರಿಕೆ ಬಂದ ಹಿನ್ನೆಲೆ ವಿಮಾನವನ್ನು ಸಂಪೂರ್ಣ ತಪಾಸಣೆಗೆ ಒಳಪಡಿಸಲಾಗಿತ್ತು ಮತ್ತು ಪ್ರಯಾಣ ಸಮಯದಲ್ಲಿ ವ್ಯತ್ಯಯವಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಭಾರತ-ಪಾಕಿಸ್ತಾನದ ಸೇನಾ ಸಂಘರ್ಷದ ನಂತರ ದೇಶದ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.
.ಬೆಳ್ಳಿತೆರೆಗೆ ಉಪೇಂದ್ರ ಮಗ ಆಯುಷ್! ‘ಮೊದಲಾಸಲ’ ಖ್ಯಾತಿಯ ಪುರುಷೋತ್ತಮ್ ಸಿನಿಮಾ.ತಗ್ಗಿದ ಚಿಲ್ಲರೆ ಹಣದುಬ್ಬರ: ಮತ್ತೆ ರೆಪೊ ದರ ಕಡಿತಕ್ಕೆ ಹಾದಿ ಸುಗಮ.Explainer | ಉಗ್ರರ ನೆಲೆಗಳ ಧ್ವಂಸಕ್ಕೆ ಭಾರತ ಬಳಸಿದ್ದು ಇವೇ ಅಸ್ತ್ರಗಳು!.ಪೊಲ್ಲಾಚಿ ಲೈಂಗಿಕ ದೌರ್ಜನ್ಯ ಪ್ರಕರಣ: 9 ಅಪರಾಧಿಗಳಿಗೆ ಬದುಕಿರುವವರೆಗೂ ಜೈಲು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.