ಬುದ್ಗಾಮ್: ಕಳೆದ ಐದು ವರ್ಷಗಳಿಂದ ನ್ಯಾಷನಲ್ ಕಾನ್ಫರೆನ್ಸ್ (ಎನ್ಸಿ) ಪಕ್ಷವನ್ನು ನಾಶಪಡಿಸಲು ಯತ್ನಿಸಿದವರೇ ಈ ಬಾರಿಯ ಚುನಾವಣೆಯಲ್ಲಿ ನಿರ್ನಾಮವಾದರು ಎಂದು ಪಕ್ಷದ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಮಂಗಳವಾರ ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯಲ್ಲಿ ಒಮರ್ ಅವರು, ಕ್ರಮವಾಗಿ ಗಂಡೇರ್ಬಲ್ನಲ್ಲಿ 10 ಸಾವಿರ ಮತ್ತು ಬುದ್ಗಾಮ್ ಕ್ಷೇತ್ರದಲ್ಲಿ 18 ಸಾವಿರ ಮತಗಳ ಅಂತರದಲ್ಲಿ ಪಿಡಿಪಿ ಅಭ್ಯರ್ಥಿಗಳ ವಿರುದ್ಧ ಭರ್ಜರಿ ಜಯ ಸಾಧಿಸಿದ್ದಾರೆ.

ಗೆಲುವಿನ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಮ್ಮ ಪಕ್ಷವನ್ನು ನಾಶಪಡಿಸಲು ಹಲವು ಇತರ ರಾಜಕೀಯ ಪಕ್ಷಗಳು ರಾಜ್ಯದಲ್ಲಿ ಹುಟ್ಟಿಕೊಂಡವು. ಆದರೆ ದೇವರ ದಯೆ, ನಮ್ಮ ಪಕ್ಷವನ್ನು ನಾಶ ಮಾಡುವ ಹಾದಿಯಲ್ಲಿ ಅವರೇ ನಿರ್ನಾಮವಾದರು’ ಎಂದು ಹೇಳಿದ್ದಾರೆ.

‘ನನಗೆ ಮತಚಲಾಯಿಸಿದ ಬುಡ್ಗಾಮ್ ಕ್ಷೇತ್ರ ಜನರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ. ಮತ್ತೊಮ್ಮೆ ಜಮ್ಮು– ಕಾಶ್ಮೀರದ ಜನರ ಸೇವೆ ಮಾಡಲು ಅವಕಾಶ ಸಿಕ್ಕಿದೆ. ಈ ಫಲಿತಾಂಶ ಪಕ್ಷದ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದೆ’ ಎಂದು ಸಂತಸ ವ್ಯಕ್ತಪಡಿಸಿದರು.
.J&K Result Highlights: ಎನ್ಸಿ– ಕಾಂಗ್ರೆಸ್ ಮೈತ್ರಿಗೆ ಬಹುಮತ: ಒಮರ್ CM ಸಂಭವ.J&K Result 2024: ಗೆದ್ದವರು – ಸೋತವರು ಯಾರ್ಯಾರು? ಇಲ್ಲಿದೆ ಮಾಹಿತಿ....

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.