ಪಟ್ನಾ: ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಬಿಹಾರದಲ್ಲಿ ಅಂಗನವಾಡಿ ಕಾರ್ಯಕರ್ತರು ಹಾಗೂ ಸಹಾಯಕಿಯರ ಸಹಾಯಧಾನವನ್ನು ಹೆಚ್ಚಳ ಮಾಡಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಸೋಮವಾರ ಘೋಷಣೆ ಮಾಡಿದ್ದಾರೆ.
.ಬಿಹಾರ ಚುನಾವಣೆ: ಎನ್ಡಿಎ, ಇಂಡಿಯಾ ಮೈತ್ರಿಕೂಟಕ್ಕೆ ಸೀಟು ಹಂಚಿಕೆ ಸವಾಲು.
ಎಕ್ಸ್ ಪೋಸ್ಟ್ನಲ್ಲಿ ಮಾಡಿರುವ ಅವರು, ಅಂಗನವಾಡಿ ಕಾರ್ತಕರ್ತೆಯರು ಇನ್ನು ಮುಂದೆ ₹7 ಸಾವಿರಕ್ಕೆ ಬದಲಾಗಿ ₹ 9 ಸಾವಿರ ಪಡೆಯಲಿದ್ದಾರೆ ಎಂದು ಹೇಳಿದ್ದಾರೆ.

ಅಂಗನವಾಡಿ ಸಹಾಯಕಿಯರ ಸಹಾಯಧನವನ್ನು ₹ 4 ಸಾವಿರದಿಂದ ₹ 4,500ಕ್ಕೆ ಏರಿಕೆ ಮಾಡಲಾಗಿದೆ. ಈ ಬಗ್ಗೆ ಸಂಬಂಧಿತ ಇಲಾಖೆಗೆ ನಿರ್ದೇಶನ ನೀಡಲಾಗಿದೆ ಎಂದು ಹೇಳಿದ್ದಾರೆ.
.ಬಿಹಾರ | ಉದ್ಯಮ ಆರಂಭಿಸುವ ಪ್ರತಿ ಮಹಿಳೆಗೆ ಆರ್ಥಿಕ ನೆರವು: ಸಿಎಂ ನಿತೀಶ್ ಕುಮಾರ್.
ಮಕ್ಕಳು ಮತ್ತು ಗರ್ಭಿಣಿಯರ ಪೋಷಣೆ ಮತ್ತು ಒಟ್ಟಾರೆ ಯೋಗಕ್ಷೇಮ ಸುಧಾರಣೆಯಲ್ಲಿ ಅಂಗನವಾಡಿ ಕಾರ್ಯಕರ್ತರ ಹಾಗೂ ಸೇವಕಿಯಯರು ಬಹುಮುಖ್ಯ ಪಾತ್ರ ವಹಿಸುತ್ತಾರೆ ಎಂದು ನಿತೀಶ್ ಹೇಳಿದ್ದಾರೆ.

‘2005ರಲ್ಲಿ ನಾವು ಅಧಿಕಾರಕ್ಕೆ ಬಂದ ಬಳಿಕ, ಮಕ್ಕಳು ಹಾಗೂ ಗರ್ಭಿಣಿಯರ ಕಲ್ಯಾಣಕ್ಕೆ ನಾವು ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಈ ಯೋಜನೆಗಳನ್ನು ಜಾರಿಗೆ ತರುವಲ್ಲಿ ಅಂಗನವಾಡಿಗಳ ಪಾತ್ರವನ್ನು ಪರಿಗಣಿಸಿ, ಸಹಾಯಧನ ಹೆಚ್ಚಿಸುವ ಕ್ರಮ ತೆಗೆದುಕೊಂಡಿದ್ದೇವೆ’ ಎಂದು ಹೇಳಿದ್ದಾರೆ.
.JP ಸೇನಾನಿಗಳ ಪಿಂಚಣಿ ದ್ವಿಗುಣ: ಹಲವು ಪ್ರಸ್ತಾವನೆಗಳಿಗೆ ಬಿಹಾರ ಸರ್ಕಾರ ಅನುಮೋದನೆ.
ಕಳೆದ ಕೆಲವು ತಿಂಗಳಲ್ಲಿ ಬಿಹಾರದಲ್ಲಿ, 125 ಯುನಿಟ್ ಉಚಿತ ವಿದ್ಯುತ್, ಸಾಮಾಜಿಕ ಭದ್ರತಾ ಪಿಂಚಣಿ ಹೆಚ್ಚಳ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ಅರ್ಜಿ ಶುಲ್ಕ ಮನ್ನಾ ಸೇರಿದಂದತೆ ಹಲವು ಜನಪ್ರಿಯ ಯೋಜನೆಗಳನ್ನು ಘೋಷಿಸಲಾಗಿದೆ.

ಮೂಲಗಳ ಪ್ರಕಾರ 1.20 ಲಕ್ಷ ಅಂಗನವಾಡಿ ಕಾರ್ಯಕರ್ತೆಯರಿಗೆ ಸಹಾಯಧನ ಏರಿಕೆಯಿಂದ ಲಾಭವಾಗಲಿದೆ.
.ಬಿಹಾರ: ಹಲವು ಯೋಜನೆ ಘೋಷಿಸಿದ ಸಿ.ಎಂ ನಿತೀಶ್ ಕುಮಾರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.