ಪಟ್ನಾ: ಬಿಹಾರ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಇಂದು (ಬುಧವಾರ) ನಾಮಪತ್ರ ಸಲ್ಲಿಸಿದ್ದಾರೆ.

ತೇಜಸ್ವಿ ಯಾದವ್ ರಾಘೋಪುರ ಕ್ಷೇತ್ರದಿಂದ ಮೂರನೇ ಬಾರಿಗೆ ಕಣಕ್ಕಿಳಿದಿದ್ದು, ಹ್ಯಾಟ್ರಿಕ್ ಗೆಲುವು ಸಾಧಿಸುವ ಗುರಿ ಹೊಂದಿದ್ದಾರೆ.

ಈ ಹಿಂದೆ ರಾಘೋಪುರ ಕ್ಷೇತ್ರದಿಂದ ಯಾದವ್ ಪೋಷಕರು ಸ್ಪರ್ಧಿಸಿದ್ದರು. ಇಬ್ಬರೂ ಬಿಹಾರದ ಮುಖ್ಯಮಂತ್ರಿಯಾಗಿದ್ದರು.
.ಕನ್ನಡ ಸಿನಿಮಾಗಳಲ್ಲೂ ನಟಿಸಿದ್ದ ಮಹಾಭಾರತದ ‘ಕರ್ಣ’ ಪಂಕಜ್ ಧೀರ್ ಇನ್ನಿಲ್ಲ.ಆನೆಗಳಿಗೆ ನೆಲೆಯಾದ ದಕ್ಷಿಣ ಭಾರತ: ಅಗ್ರಸ್ಥಾನದಲ್ಲಿ ಕರ್ನಾಟಕ.
35 ವರ್ಷದ ಯಾದವ್, ವೈಶಾಲಿ ಜಿಲ್ಲೆಯ ಪ್ರಧಾನ ಕಚೇರಿ ಹಾಜಿಪುರದಲ್ಲಿ ಆರ್ಜೆಡಿ ಮುಖ್ಯಸ್ಥ ಮತ್ತು ತಂದೆ ಲಾಲು ಪ್ರಸಾದ್ ಮತ್ತು ತಾಯಿ ರಾಬ್ರಿ ದೇವಿ ಅವರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿದರು.

ಈ ವೇಳೆ ಸಂಸದೆ ಮತ್ತು ಸಹೋದರಿ ಮಿಸಾ ಭಾರ್ತಿ ಹಾಗೂ ರಾಜ್ಯಸಭಾ ಸದಸ್ಯ ಸಂಜಯ್ ಯಾದವ್ ಸೇರಿದಂತೆ ಆಪ್ತರು ಹಾಗೂ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.
.ಬಿಗ್ಬಾಸ್ ಮನೆಯಲ್ಲಿ ಗೆಜ್ಜೆ ಸದ್ದು: ದಿಢೀರ್ ಎದ್ದು ಕುಳಿತ ಸ್ಪರ್ಧಿಗಳು.ಕೋಲ್ಕತ್ತ | ಎಂಜಿನಿಯರಿಂಗ್ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: ಸಹಪಾಠಿ ಬಂಧನ.
ಪಟ್ನಾದಿಂದ ಹಾಜಿಪುರದವರೆಗೂ ಮೆರವಣಿಗೆ ಮೂಲಕ ಸಾಗಿದ ಯಾದವ್ಗೆ ಸಾವಿರಾರು ಕಾರ್ಯಕರ್ತರು ಸಾಥ್ ನೀಡಿದರು.

ಬಿಹಾರ ವಿಧಾನಸಭೆ ಚುನಾವಣೆಯು ನವೆಂಬರ್ 6 ಮತ್ತು 11ರಂದು ನಡೆಯಲಿದೆ. ನವೆಂಬರ್ 14ರಂದು ಮತ ಎಣಿಕೆ ನಡೆಯಲಿದೆ.
.ಕಲಾಂ–ಬ್ರಹ್ಮೋಸ್ ಕ್ಷಿಪಣಿ ಹಿಂದಿನ ಕಥೆ: ಮಾಜಿ ರಾಷ್ಟ್ರಪತಿಗಳ ಮಹೋನ್ನತ ಕೊಡುಗೆ.ಇರಾಕ್ನಲ್ಲಿ ಬಾಂಬ್ ಸ್ಫೋಟ; ಸಂಸತ್ ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿ ಸಾವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.