ಗುವಾಹಟಿ: ಪಶ್ಚಿಮ ಅಸ್ಸಾಂನ ಬೊಡೊಲ್ಯಾಂಡ್ ಪ್ರಾಂತ್ಯದ (ಬಿಟಿಆರ್) ಕೋಕ್ರಾಝಾರ್ ಸಮೀಪದಲ್ಲಿರುವ ರೈಲ್ವೆ ಹಳಿಯ ಮೇಲೆ ದುಷ್ಕರ್ಮಿಗಳು ಕಚ್ಚಾ ಬಾಂಬ್ (ಐಇಡಿ) ಸ್ಫೋಟಿಸಿರುವ ಘಟನೆ ಗುರುವಾರ ನಡೆದಿದೆ.

ಇದರಿಂದಾಗಿ ನಾಲ್ಕು ಗಂಟೆಗಳ ಕಾಲ ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿದ್ದು, ಎಂಟು ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿತ್ತು.

ಈಶಾನ್ಯ ಗಡಿನಾಡು ರೈಲ್ವೆ ಅಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಕೋಕ್ರಾಝಾರ್ ಮಾರ್ಗವಾಗಿ ತೆರಳುತ್ತಿದ್ದ ಸರಕು ಸಾಗಣೆ ರೈಲು ಜರ್ಕ್ನಿಂದಾಗಿ ತಡರಾತ್ರಿ 1 ಗಂಟೆ ಸಮಯಕ್ಕೆ ನಿಲ್ಲುವಂತಾಗಿತ್ತು. ಬಳಿಕ ಪರಿಶೀಲಿಸಿದಾಗ ರೈಲ್ವೆ ಹಳಿಗಳ ಮೇಲೆ ಕಚ್ಚಾ ಬಾಂಸ್ ಸ್ಫೋಟಿಸಿರುವ ಶಂಕೆ ವ್ಯಕ್ತವಾಗಿದೆ ಎಂದಿದ್ದಾರೆ.

ಸ್ಫೋಟದಿಂದ ಹಳಿಗಳು ಹಾನಿಗೀಡಾಗಿದ್ದು, ಬೆಳಿಗಿನ ಜಾವ 5.25ಕ್ಕೆ ಅವುಗಳನ್ನು ಸರಿಪಡಿಸಿ, ರೈಲುಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಪ್ರಕರಣದ ತನಿಖೆಯನ್ನು ಆರ್ಪಿಎಫ್ ಮತ್ತು ಗುಪ್ತಚರ ಅಧಿಕಾರಿಗಳು ನಡೆಸುತ್ತಿದ್ದಾರೆ ಎಂದೂ ತಿಳಿಸಿದ್ದಾರೆ.

ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಘಟನೆಯನ್ನು ಖಂಡಿಸಿದ್ದಾರೆ. ಜತೆಗೆ ದಾಳಿಯ ಹಿಂದಿರುವ ಶಂಕಿತ ವ್ಯಕ್ತಿಯನ್ನು ಗುರುತಿಸಲಾಗಿದೆ ಆತನನ್ನು ಬಂಧಿಸುವ ಪ್ರಯತ್ನ ನಡೆಯುತ್ತಿದೆ ಎಂದಿದ್ದಾರೆ.

ಹಿಂಸಾಚಾರದ ಭೀತಿ:

ಬೊಡೊಲ್ಯಾಂಡ್ ಪ್ರಾಂತ್ಯದಲ್ಲಿ ಆಗಾಗ ನಡೆಯುತ್ತಲೇ ಇದ್ದ ಸಂಘರ್ಷಕ್ಕೆ 2020ರಲ್ಲಿ ಹೊಸದಾಗಿ ಬೊಡೊಲ್ಯಾಂಡ್ ಮಂಡಳಿ ಸೃಷ್ಟಿಸುವ ಮೂಲಕ ಅಂತ್ಯ ಹಾಡಲಾಗಿತ್ತು.

ಪ್ರದೇಶದಲ್ಲಿನ ಬಂಡುಕೋರರು ಕೂಡ ಶಸ್ತ್ರ ತ್ಯಜಿಸಿ ಮುಖ್ಯವಾಹಿನಿಗೆ ಸೇರಿದ್ದರು. ಆದರೆ, ಇದೀಗ ಗುರುವಾರ ನಡೆದಿರುವ ಸ್ಫೋಟವು ಬಿಟಿಆರ್ನಲ್ಲಿ ಹೊಸ ಸಂಘರ್ಷಕ್ಕೆ ನಾಂದಿ ಹಾಡುವುದೇ ಎಂಬ ಭೀತಿ ಶುರುವಾಗಿದೆ.

ಈ ಕೃತ್ಯದ ಮೂಲಕ ಪ್ರಾಂತ್ಯದ ಶಾಂತಿ ಕದಡಲು ಯತ್ನಿಸಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ಪಕ್ಷಗಳು ಆಗ್ರಹಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.