ನಾಗ್ಪುರ: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರ ನಾಗ್ಪುರದ ನಿವಾಸಕ್ಕೆ ಬಾಂಬ್ ಬೆದರಿಕೆ ಹಾಕಿದ್ದ ವ್ಯಕ್ತಿಯನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ಬಂಧಿತನನ್ನು ನಾಗ್ಪುರ ನಗರದ ತುಳಸಿ ಬಾಗ್ ರಸ್ತೆಯ ನಿವಾಸಿ ಉಮೇಶ್ ವಿಷ್ಣು ರಾವತ್ ಎಂದು ಗುರುತಿಸಲಾಗಿದೆ.
.ಆಂಧ್ರಪ್ರದೇಶ | ಗ್ರಾನೈಟ್ ಕ್ವಾರಿಯಲ್ಲಿ ಬಂಡೆ ಕುಸಿತ; ಆರು ಮಂದಿ ಸಾವು.ಯೋಗಿ, ಭಾಗವತ್, ರವಿಶಂಕರ್ ಹೆಸರು ಹೇಳುವಂತೆ ಚಿತ್ರಹಿಂಸೆ: ರಮೇಶ್ ಉಪಾಧ್ಯಾಯ.
ನಗರ ಪೊಲೀಸ್ ಠಾಣೆಯ ತುರ್ತು ಸಹಾಯವಾಣಿ ಸಂಖ್ಯೆ 112ಕ್ಕೆ ರಾವತ್ ಬೆಳಿಗ್ಗೆ ಕರೆ ಮಾಡಿ, ಗಡ್ಕರಿ ಅವರ ನಾಗ್ಪುರದ ನಿವಾಸದಲ್ಲಿ ಬಾಂಬ್ ಇರುವುದಾಗಿ ಬೆದರಿಕೆ ಹಾಕಿದ್ದ. ಪೊಲೀಸರು ತನಿಖೆ ನಡೆಸಿದಾಗ ಇದು ಹುಸಿ ಬೆದರಿಕೆ ಎಂಬುದು ತಿಳಿದುಬಂದಿದೆ.

ಕರೆ ಬಂದಿದ್ದ ಸಂಖ್ಯೆಯನ್ನು ಪರಿಶೀಲಿಸಿದಾಗ ರಾವತ್ ವಿಳಾಸ ಪತ್ತೆಹಚ್ಚಿದ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಈ ರೀತಿಯ ಕೃತ್ಯ ಎಸಗಲು ಕಾರಣವೇನು? ಉದ್ದೇಶವೇನು? ಈ ಹಿಂದೆಯೂ ಇಂಥ ಕೃತ್ಯಗಳಲ್ಲಿ ರಾವತ್ ಭಾಗಿಯಾಗಿದ್ದನೆ ಎಂದು ತನಿಖೆ ನಡೆಸುತ್ತಿರುವುದಾಗಿ ಹೇಳಿದ್ದಾರೆ.

ಈ ಸಂಬಂಧ ಆರೋಪಿಯ ವಿರುದ್ದ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
.ಒಡಿಶಾ-ಜಾರ್ಖಂಡ್ ಗಡಿಯಲ್ಲಿ ಐಇಡಿ ಸ್ಫೋಟ: ರೈಲ್ವೆ ಸಿಬ್ಬಂದಿ ಸ್ಥಳದಲ್ಲೇ ಸಾವು.ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆ: 307 ರಸ್ತೆಗಳು ಬಂದ್, ‘ಆರೆಂಜ್ ಅಲರ್ಟ್’ ಘೋಷಣೆ.ರಾಷ್ಟ್ರಪತಿ ದ್ರೌಪದಿ ಮುರ್ಮುರನ್ನು ಭೇಟಿ ಮಾಡಿದ ಪ್ರಧಾನಿ ಮೋದಿ.ಸೇನಾಧಿಕಾರಿಯಿಂದ ದಾಳಿ: ಸ್ಪೈಸ್ಜೆಟ್ ಸಿಬ್ಬಂದಿಗೆ ದವಡೆ, ಬೆನ್ನುಮೂಳೆ ಮುರಿತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.