ಮುಂಬೈ: ಅಹಮದಾಬಾದ್ – ಮುಂಬೈ ತಲುಪುವ ಅತೀ ವೇಗದ ಬುಲೆಟ್ ರೈಲಿನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ನಿಲ್ದಾಣದ ಕಾರ್ಯ ಪೂರ್ಣಗೊಂಡಿದೆ ಎಂದು ರಾಷ್ಟ್ರೀಯ ಹೈ-ಸ್ಪೀಡ್ ರೈಲು ನಿಗಮ ತಿಳಿಸಿದೆ.

ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ನಲ್ಲಿ 12 ನಿಲ್ದಾಣಗಳಿದ್ದು ಇದರಿಂದ ಮುಂಬೈನ ಜನರಿಗೆ ಅನುಕೂಲವಾಗಲಿದೆ ಎಂದು ನಿಗಮ ಹೇಳಿದೆ.

ರೈಲು ನಿಲ್ದಾಣ ನಿರ್ಮಾಣಕ್ಕಾಗಿ ನೆಲಮಟ್ಟದಿಂದ ಸುಮಾರು 106 ಅಡಿ ಆಳದವರೆಗೆ ಅಗೆಯಲಾಗಿದ್ದು, ಇದು 10 ಅಂತಸ್ತಿನ ಕಟ್ಟಡಕ್ಕೆ ಸಮನಾಗಿರುತ್ತದೆ ಎಂದು ಹೇಳಿದೆ.

ಶೇ 84 ರಷ್ಟು ನಿಲ್ದಾಣದ ಕಾರ್ಯ ಮುಗಿದಿದೆ. ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ಗೆ ವಿಶ್ವದ ಅತ್ಯುತ್ತಮ ಗುಣಮಟ್ಟದ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು ನಿಗಮ ಹೇಳಿದೆ.

ನೆಲಮಟ್ಟದಿಂದ 26 ಮೀಟರ್ ಆಳದಲ್ಲಿ ಪ್ಲಾಟ್ಫಾರ್ಮ್, ಕಾನ್ಕೋರ್ಸ್ ಮತ್ತು ಸರ್ವಿಸ್ ಫ್ಲೋರ್ ಸೇರಿದಂತೆ ಮೂರು ಮಹಡಿಗಳನ್ನು ನಿರ್ಮಿಸಲು ಯೋಜಿಸಲಾಗಿದೆ ಎಂದು ನಿಗಮ ಮಾಹಿತಿ ನೀಡಿದೆ.

ಪ್ರಯಾಣಿಕರ ಅನುಕೂಲಕ್ಕಾಗಿ, ಮೆಟ್ರೋ ಮಾರ್ಗ ಮತ್ತು ರಸ್ತೆಯೊಂದಿಗೆ ನಿಲ್ದಾಣದ ಸಂಪರ್ಕವನ್ನು ಒದಗಿಸಲು ಯೋಜಿಸಲಾಗಿದೆ. ಇದರಲ್ಲಿ ಎರಡು ಪ್ರವೇಶ/ನಿರ್ಗಮನ ದ್ವಾರಗಳನ್ನು ಒದಗಿಸಲಾಗುವುದು ನಿಗಮ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.