ನವದಹೆಲಿ: ‘ನಿನ್ನೆಯ ಶಸ್ತ್ರಾಸ್ತ್ರಗಳನ್ನಿಟ್ಟುಕೊಂಡು ಇಂದಿನ ಯುದ್ಧವನ್ನು ಗೆಲ್ಲಲಾಗದು. ಇಂದು ನಾವು ಗೆಲ್ಲಬೇಕೆಂದರೆ ನಾಳಿನ ತಂತ್ರಜ್ಞಾನದ ಶಸ್ತ್ರಾಸ್ತ್ರಗಳು ನಮ್ಮ ಬತ್ತಳಿಕೆಯಲ್ಲಿರಬೇಕು’ ಎಂದು ಸೇನಾಪಡೆಗಳ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್ ಹೇಳಿದ್ದಾರೆ.

ಸ್ವದೇಶಿ ನಿರ್ಮಿತ ಮಾನವ ರಹಿತ ವೈಮಾನಿಕ ಸಾಧನಗಳು (UAV) ಮತ್ತು ಇವುಗಳನ್ನು ಎದುರಿಸುವ C-UAVಗಳ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಆಪರೇಷನ್ ಸಿಂಧೂರ ಕುರಿತು ಮಾತನಾಡಿದ ಅವರು, ‘ಪಾಕಿಸ್ತಾನದ ಸಿಡಿತಲೆ ಹೊತ್ತ ಡ್ರೋನ್ಗಳ ದಾಳಿಯಲ್ಲಿ ಭಾರತೀಯ ಸೇನೆ ಅಥವಾ ನಾಗರಿಕರ ಮೂಲಸೌಕರ್ಯಗಳಿಗೆ ಯಾವುದೇ ಹಾನಿಯಾಗಿಲ್ಲ. ಆದರೆ ಭವಿಷ್ಯದಲ್ಲಿ ಎದುರಾಗಬಹುದಾದ ಯಾವುದೇ ಸವಾಲುಗಳನ್ನು ಎದುರಿಸಲು ಮುಂದಿನ ತಲೆಮಾರಿನ ಶಸ್ತ್ರಾಸ್ತ್ರಗಳನ್ನು ಹೊಂದುವುದು ಸದ್ಯದ ಜರೂರಾಗಿದೆ’ ಎಂದು ಅಭಿಪ್ರಾಯಪಟ್ಟರು.

‘ಇಂದಿನ ದಿನಮಾನಗಳಲ್ಲಿ ನಡೆಯುತ್ತಿರುವ ಯುದ್ಧಕ್ಕೆ ಅತ್ಯಾಧುನಿಕ ತಂತ್ರಜ್ಞಾನದ ಶಸ್ತ್ರಾಸ್ತ್ರಗಳು ಅಗತ್ಯ. ನಿನ್ನೆಯ ಅಸ್ತ್ರಗಳು ಇಂದಿನ ಯುದ್ಧಕ್ಕೆ ಎಂದಿಗೂ ಸರಿಸಮಾನವಲ್ಲ. ಜತೆಗೆ, ವಿದೇಶಿ ನಿರ್ಮಿತ ಶಸ್ತ್ರಾಸ್ತ್ರಗಳನ್ನು ಅವಲಂಬಿಸುವ ಬದಲು, ಭಾರತವು ಸ್ವದೇಶಿ ನಿರ್ಮಿತ ಶಸ್ತ್ರಗಳನ್ನು ಅಭಿವೃದ್ಧಿಪಡಿಸುವುದು ಅತಿ ಮುಖ್ಯ’ ಎಂದು ಅನಿಲ್ ಚೌಹಾಣ್ ಹೇಳಿದ್ದಾರೆ.

‘ವಿದೇಶಿ ನಿರ್ಮಿತ ಶಸ್ತ್ರಾಸ್ತ್ರಗಳ ಮೇಲೆ ಅತಿಯಾದ ಅವಲಂಬನೆ ನಮ್ಮ ಯುದ್ಧದ ಸಿದ್ಧತೆ ಮೇಲೆ ನಕಾರಾತ್ಮಕ ಪರಿಣಾಮಗಳನ್ನು ಬೀರುತ್ತಿದೆ. ಇತ್ತೀಚಿನ ಯುದ್ಧದಲ್ಲಿ ಪಾಕಿಸ್ತಾನವು ಶಸ್ತ್ರಸ್ತ್ರವಿಲ್ಲದ ಡ್ರೋನ್ಗಳು ಮತ್ತು ಗಡಿಯುದ್ಧಕ್ಕೂ ಶಸ್ತ್ರಾಸ್ತ್ರಗಳನ್ನು ತುಂಬಿದ ವಾಹನಗಳನ್ನು ನಿಯೋಜಿಸಿತ್ತು. ಇವೆಲ್ಲವನ್ನೂ ಭಾರತೀಯ ಸೇನೆ ನಿಷ್ಕ್ರಿಯಗೊಳಿಸಿದೆ. ಹೀಗಾಗಿ ಪಾಕಿಸ್ತಾನದ ದಾಳಿಯು ಭಾರತಕ್ಕೆ ಯಾವುದೇ ಹಾನಿ ಮಾಡಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

ಆಧುನಿಕ ಯುದ್ಧ ಪದ್ಧತಿಯಲ್ಲಿ ಡ್ರೋನ್ಗಳ ಬಳಕೆ ಕುರಿತು ಮಾತನಾಡಿದ ಜನರಲ್ ಅನಿಲ್, ‘ಇತ್ತೀಚಿನ ಕೆಲ ಯುದ್ಧಗಳನ್ನು ಗಮನಿಸಿದಾಗ ಯುದ್ಧ ತಂತ್ರಗಳನ್ನು ಡ್ರೋನ್ಗಳು ಹೇಗೆ ಅಸಮಾನ್ಯವಾಗಿ ಬದಲಿಸಿವೆ ಎಂಬುದು ತಿಳಿಯುತ್ತದೆ. ಡ್ರೋನ್ಗಳ ಬಳಕೆ ಸಾಧ್ಯತೆ ಮಾತ್ರವಲ್ಲ, ಬದಲಿಗೆ ವಾಸ್ತವವಾಗಿ ಬದಲಾಗಿದೆ. ಇದನ್ನು ಸಮರ್ಥವಾಗಿ ಎದುರಿಸಲು ಚಲನ ಹಾಗೂ ಸ್ಥಿರ ಪ್ರತಿಕ್ರಮ ರಕ್ಷಣಾ ವ್ಯವಸ್ಥೆಯ ಅಗತ್ಯವಿದೆ. ಡ್ರೋನ್ ಮತ್ತು ಶತ್ರುಗಳ ಡ್ರೋನ್ ಹೊಡೆದುರುಳಿಸಬಲ್ಲ ತಂತ್ರಜ್ಞಾನ ಭಾರತದಲ್ಲಿ ನಿರ್ಮಾಣವಾಗುವಂತಿರಬೇಕು’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.