ಚೆನ್ನೈ: ‘ಕರ್ನಾಟಕ ರಾಜ್ಯವು ಕೇಂದ್ರ ಸರ್ಕಾರದ ತೆರಿಗೆ ಆದಾಯದಲ್ಲಿ ವಾರ್ಷಿಕವಾಗಿ ₹ 4 ಲಕ್ಷ ಕೋಟಿ ಕೊಡುಗೆ ನೀಡುತ್ತಿದೆ. ಕರ್ನಾಟಕ ರಾಜ್ಯ ನೀಡುವ ಪ್ರತಿ ಒಂದು ರೂಪಾಯಿಗೆ ಕರ್ನಾಟಕ ರಾಜ್ಯಕ್ಕೆ ಮರಳಿ ಸಿಗುತ್ತಿರುವುದು ಕೇವಲ 13 ಪೈಸೆ ಮಾತ್ರ’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆತಂಕ ವ್ಯಕ್ತಪಡಿಸಿದರು.

ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆ ಕುರಿತು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಕರೆದಿದ್ದ ಜಂಟಿ ಕ್ರಿಯಾ ಸಮಿತಿಯ (ಜೆಎಸಿ) ಸಭೆಯಲ್ಲಿ ಶನಿವಾರ ಅವರು ಮಾತನಾಡಿದರು.

‘ತೆರಿಗೆ ಹಂಚಿಕೆಯಲ್ಲಿ ಕೇವಲ ₹ 45 ಸಾವಿರ ಕೋಟಿ ಹಾಗೂ ಅನುದಾನದ ಮೂಲಕ ₹ 15 ಸಾವಿರ ಕೋಟಿ ಮಾತ್ರ ಕೇಂದ್ರದಿಂದ ಸಿಗುತ್ತಿದೆ. . ಇದು ಕೇವಲ ಆರ್ಥಿಕ ಅನ್ಯಾಯ ಮಾತ್ರವಲ್ಲ, ನಮ್ಮ ಸಂಪನ್ಮೂಲದ ವ್ಯವಸ್ಥಿತ ಲೂಟಿ’ ಎಂದು ಆರೋಪಿಸಿದರು.

‘ಕರ್ನಾಟಕದ ಜನಸಂಖ್ಯೆಯು ದೇಶದ ಜನಸಂಖ್ಯೆಯ ಶೇ 5ರಷ್ಟು ಮಾತ್ರ ಇದೆ. ಆದರೆ ದೇಶದ ಜಿಡಿಪಿಯಲ್ಲಿ ಶೇ 8.4ರಷ್ಟು ಕೊಡುಗೆ ನೀಡುತ್ತಿದೆ. ಇಡೀ ದೇಶದಲ್ಲಿ ಅತಿ ಹೆಚ್ಚು ಜಿಎಸ್ಟಿ ಪಾವತಿಸುತ್ತಿರುವ ರಾಜ್ಯ ಕರ್ನಾಟಕ. ಇನ್ನು ದಕ್ಷಿಣದ ರಾಜ್ಯಗಳು ಭಾರತದ ಜಿಡಿಪಿಗೆ ಶೇ 35ರಷ್ಟು ಕೊಡುಗೆ ನೀಡುತ್ತಿದ್ದು, ಈ ರಾಜ್ಯಗಳನ್ನು ಉತ್ತರ ಭಾರತದ ರಾಜ್ಯಗಳ ಎಟಿಎಂ ಆಗಿ ನೋಡಲಾಗುತ್ತಿದೆ’ ಎಂದರು.

‘ಆದರೂ ಕೇಂದ್ರ ಸರ್ಕಾರದ ಅನುದಾನದಲ್ಲಿ ನಮಗೆ ಕಡಿಮೆ ಪಾಲು ದೊರೆಯುತ್ತಿದೆ. 15ನೇ ಹಣಕಾಸು ಆಯೋಗವು ಜನಸಂಖ್ಯೆ ಆಧಾರದ ಮೇಲೆ ಅನುದಾನ ಹಂಚಿಕೆ ಮಾಡಿರುವ ಕಾರಣಕ್ಕೆ ಕರ್ನಾಟಕ ರಾಜ್ಯಕ್ಕೆ ನಷ್ಟವಾಗಿದೆ. ಈಗ ಪ್ರಸ್ತಾಪಿಸಲಾಗಿರುವ ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ಮೂಲಕ ನಮ್ಮ ರಾಜಕೀಯ ಧ್ವನಿಯನ್ನು ಹತ್ತಿಕ್ಕಲಾಗುವುದು. ಜತೆಗೆ ಸಂಸತ್ತಿನಲ್ಲಿ ನಮ್ಮ ಹಕ್ಕನ್ನು ಪ್ರತಿಪಾದಿಸಲು ಅವಕಾಶವನ್ನು ಕಸಿಯುವ ಪ್ರಯತ್ನ ನಡೆಯುತ್ತಿದೆ‘ ಎಂದರು.
.LS ಕ್ಷೇತ್ರಗಳ ಮರುವಿಂಗಡನೆಯು ಪ್ರಗತಿಪರ ರಾಜ್ಯಗಳ ಧ್ವನಿ ಹತ್ತಿಕ್ಕುವ ಯತ್ನ: DKS.ಕ್ಷೇತ್ರ ಮರುವಿಂಗಡಣೆ ಬಿಜೆಪಿಯ ಕುತಂತ್ರ: ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ.
ಪ್ರಾದೇಶಿಕ ಭಾಷೆಗಳು ನಾಗರೀಕತೆಯ ಜೀವಾಳ

‘ಇದು ಕೇವಲ ಸಂಖ್ಯೆಗಳಿಗಾಗಿ ನಡೆಯುತ್ತಿರುವ ಹೋರಾಟವಲ್ಲ. ಇದು ನಮ್ಮ ಘನತೆ, ಸಂಸ್ಕೃತಿ ಹಾಗೂ ನಮ್ಮ ಪರಂಪರೆ ವಿಚಾರ. ಕರ್ನಾಟಕವು ಬಸವಣ್ಣನವರ ವಚನಗಳಿಂದ ಕುವೆಂಪು ಅವರವರೆಗೂ 1,500 ವರ್ಷಗಳ ಸಾಹಿತ್ಯದ ಪರಂಪರೆ ಹೊಂದಿದೆ. ತಮಿಳುನಾಡಿನ ಸಂಗಮ ಕಾವ್ಯ, ಕೇರಳದ ಸಾಂಪ್ರದಾಯಿಕ ಕಲೆಗಳು ಹಾಗೂ ಆಂಧ್ರ ಪ್ರದೇಶದ ತೆಲುಗು ಪರಂಪರೆ ಕೇವಲ ಪ್ರಾದೇಶಿಕ ಸಂಪತ್ತಲ್ಲ. ಇವೆಲ್ಲವೂ ಭಾರತದ ಆತ್ಮಗಳಾಗಿವೆ. ಆದರೂ ಕೇಂದ್ರ ಸರ್ಕಾರ ಒಂದು ದೇಶ, ಒಂದು ಭಾಷೆ ನೀತಿಯನ್ನು ಹೇರಲು ಮುಂದಾಗಿದೆ. ಆಮೂಲಕ ಭಾಷಾ ವೈವಿದ್ಯವನ್ನು ನಿರ್ಮೂಲನೆ ಮಾಡಲು ಹೊರಟಿದೆ’ ಎಂದು ಶಿವಕುಮಾರ್ ದೂರಿದರು.

‘ರೈಲ್ವೆ ಚಿಹ್ನೆಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳ ವರೆಗೂ ಹಿಂದಿ ಹೇರಿಕೆ ಮಾಡುತ್ತಿರುವುದು ನಮ್ಮ ಭಾಷಾ ಹಾಗೂ ಸಾಂಸ್ಕೃತಿಕ ಏಕತೆಗೆ ಧಕ್ಕೆ ತಂದಿದೆ. ಕನ್ನಡ, ತಮಿಳು, ತೆಲುಗು, ಮಲೆಯಾಳ ಹಾಗೂ ಇತರ ಪ್ರಾದೇಶಿಕ ಭಾಷೆಗಳು ಕೇವಲ ಆಡುಭಾಷೆ ಮಾತ್ರವಲ್ಲ, ಇವು ನಮ್ಮ ನಾಗರೀಕತೆಯ ಜೀವವಾಗಿದೆ ಎಂಬುದನ್ನು ಸ್ಪಷ್ಟಪಡಿಸಲು ಬಯಸುತ್ತೇನೆ’ ಎಂದು ಹೇಳಿದರು.
.ನ್ಯಾಯಯುತ ಕ್ಷೇತ್ರ ಪುನರ್ ವಿಂಗಡನೆಗೆ ಆಗ್ರಹ; ಹೈದರಾಬಾದ್ನಲ್ಲಿ JAC ಮುಂದಿನ ಸಭೆ.LS ಕ್ಷೇತ್ರಗಳ ಪುನರ್ ವಿಂಗಡಣೆ ಕುರಿತ JAC ಸಭೆ:DMK ಆಹ್ವಾನ ತಿರಸ್ಕರಿಸಿದ ಜನಸೇನಾ.
ನಮ್ಮ ದೇಶದ ಶಕ್ತಿ ವೈವಿಧ್ಯತೆಯೇ ಹೊರತು ಏಕರೂಪತೆಯಲ್ಲ

‘ಸಾಮಾಜಿಕ ನ್ಯಾಯ, ಸಮಾನತೆ ಹಾಗೂ ಭಾಷಾ ಹಕ್ಕಿಗೆ ಹೋರಾಟ ಮಾಡಿದ ನಮ್ಮ ರಾಜ್ಯಗಳ ಮಹಾನ್ ನಾಯಕರಾದ ಪೆರಿಯಾರ್, ಅಂಬೇಡ್ಕರ್, ಬಸವಣ್ಣ, ಅಣ್ಣಾದುರೈ ಹಾಗೂ ನಾರಾಯಣ ಗುರುಗಳಿಂದ ನಾವು ಪ್ರೇರಣೆ ಪಡೆಯಬೇಕು. ಅವರ ಪರಂಪರೆಯು ವೈವಿದ್ಯತೆ ನಮ್ಮ ದೇಶದ ಶಕ್ತಿಯಾಗಿದ್ದು, ಏಕರೂಪತೆಯಲ್ಲ ಎಂಬುದನ್ನು ಸ್ಮರಿಸುತ್ತದೆ’ ಎಂದು ಶಿವಕುಮಾರ್ ಹೇಳಿದರು.

‘ಕ್ಷೇತ್ರ ಮರುವಿಂಗಡಣೆ ಕೇವಲ ಲೋಕಸಭಾ ಕ್ಷೇತ್ರಗಳಿಗೆ ಸೀಮಿತವಲ್ಲ, ಇದು ಭಾರತದ ಒಕ್ಕೂಟ ವ್ಯವಸ್ಥೆಯ ಭವಿಷ್ಯದ ವಿಚಾರ. ಕೇಂದ್ರ ಸರ್ಕಾರ ಈ ಅವೈಜ್ಞಾನಿಕ ಸೂತ್ರದ ಮೇಲೆ ಕ್ಷೇತ್ರ ಮರು ವಿಂಗಡಣೆಗೆ ಮುಂದಾದರೆ, ಒಕ್ಕೂಟ ವ್ಯವವಸ್ಥೆಯ ಸಮತೋಲನವನ್ನೇ ಅಲುಗಾಡಿಸುತ್ತದೆ. ಅಲ್ಲದೆ ಜನಸಂಖ್ಯೆ ನಿಯಂತ್ರಣ ಮಾಡುವಲ್ಲಿ ವಿಫಲವಾದ ರಾಜ್ಯಗಳಿಗೆ ಹೆಚ್ಚಿನ ಶಕ್ತಿ ದೊರೆತಂತಾಗುತ್ತದೆ. ಆಮೂಲಕ ದಕ್ಷಿಣ ರಾಜ್ಯಗಳನ್ನು ಮೂಲೆಗುಂಪು ಮಾಡುವುದಷ್ಟೇ ಅಲ್ಲ, ನಮ್ಮ ಸಂವಿಧಾನದ ಮುಖ್ಯ ಉದ್ದೇಶ ಸಹಕಾರ ಒಕ್ಕೂಟ ವ್ಯವಸ್ಥೆಯ ತತ್ವಕ್ಕೆ ವಿರುದ್ಧವಾಗಿದೆ’ ಎಂದರು.

‘ಈ ಹಿನ್ನೆಲೆಯಲ್ಲಿ ನೂತನ ಜನಸಂಖ್ಯೆ ಆಧಾರದ ಮೇಲೆ ಕ್ಷೇತ್ರ ಮರುವಿಂಗಡಣೆ ಪ್ರಸ್ತಾವವನ್ನು ಕರ್ನಾಟಕ ವಿಧಾನಸಭೆಯು ಅವಿರೋಧವಾಗಿ ತಿರಸ್ಕರಿಸುವ ನಿರ್ಣಯ ಹೊರಡಿಸಿದೆ. ಅಲ್ಲದೆ 1971ರ ಜನಸಂಖ್ಯೆ ಆಧಾರದ ಮೇಲೆ ಕ್ಷೇತ್ರಗಳ ಪುನರ್ ವಿಂಗಡಣೆ ನಡೆಯಬೇಕು. ಆಗ ಮಾತ್ರ ಜನಸಂಖ್ಯೆ ನಿಯಂತ್ರಣ ಹಾಗೂ ಸುಸ್ಥಿರ ಅಭಿವೃದ್ಧಿ ಮಾಡಿರುವ ರಾಜ್ಯಗಳಿಗೆ ಸೂಕ್ತ ಮಾನ್ಯತೆ ಸಿಕ್ಕಂತಾಗುತ್ತದೆ’ ಎಂದು ಪ್ರತಿಪಾದಿಸಿದರು.
.ಈಗಿನ ಜನಸಂಖ್ಯೆ ಆಧರಿಸಿ ಕ್ಷೇತ್ರ ಮರುವಿಂಗಡನೆ ಬೇಡ: ಎಂ.ಕೆ ಸ್ಟಾಲಿನ್ ಆಗ್ರಹ.ವಿಶ್ಲೇಷಣೆ | ಕ್ಷೇತ್ರ ಮರುವಿಂಗಡಣೆಯ ಅಪಾಯ.
‘ಇದು ಉತ್ತರ ಹಾಗೂ ದಕ್ಷಿಣ ನಡುವಣ ಹೋರಾಟವಲ್ಲ. ಭಾರತದಲ್ಲಿ ಸಮಾನ ರಾಜ್ಯಗಳ ಒಕ್ಕೂಟ ವ್ಯವಸ್ಥೆಗಾಗಿ ನಡೆಯುತ್ತಿರುವ ಹೋರಾಟ. ಹೀಗಾಗಿ ನಮ್ಮ ಬೇಡಿಕೆಗಳಿಗೆ ಆಗ್ರಹಿಸುತ್ತೇವೆ’ ಎಂದರು.

ಕ್ಷೇತ್ರ ಮರುವಿಂಗಡಣೆ ನ್ಯಾಯ: ಮಾನವ ಅಭಿವೃದ್ಧಿ ಸೂಚ್ಯಂಕಗಳು, ತೆರಿಗೆ ಪಾಲು ಹಾಗೂ ಜನಸಂಖ್ಯೆ ನಿಯಂತ್ರಣ, ಪ್ರತಿನಿಧಿತ್ವ, ಗುಣಮಟ್ಟದ ಆಡಳಿತಗಳನ್ನು ಒಳಗೊಂಡ ಸೂತ್ರದ ಮೇಲೆ ಕ್ಷೇತ್ರ ಮರುವಿಂಗಡಣೆಯಾಗಬೇಕೇ ಹೊರತು, ಕೇವಲ ಜನಸಂಖ್ಯೆ ಆಧಾರದ ಮೇಲೆ ಅಲ್ಲ.

ದ್ವಿಸದಸ್ಯ ಸಮತೋಲನ: ರಾಜ್ಯಸಭೆಯನ್ನು ಬಲವರ್ದಿಸಿ, ಲೋಕಸಭೆಗೆ ಸಮತೋಲನವಾಗುವಂತೆ ಮಾಡಬೇಕು. ರಾಜ್ಯಸಭೆಗೂ ಹೆಚ್ಚಿನ ಶಾಸನದ ಅಧಿಕಾರ ನೀಡಿ ಆರ್ಥಿಕ ನಿರ್ಧಾರ ಕೈಗೊಳ್ಳುವಾಗ ಇವರ ಪಾತ್ರವೂ ಇರುವಂತೆ ಮಾಡಬೇಕು. ಆಮೂಲಕ ಪ್ರಗತಿಯ ರಾಜ್ಯಗಳನ್ನು ಮೂಲೆಗುಂಪು ಮಾಡುವುದನ್ನು ತಪ್ಪಿಸಬೇಕು.

ವಿತ್ತೀಯ ನೀತಿ: ನ್ಯಾಯಯುತ ತೆರಿಗೆ ಪಾಲು ಹಂಚಿಕೆ, ಸಂಪನ್ಮೂಲ ಹಂಚಿಕೆಗೆ ನೂತನ ಆರ್ಥಿಕ ಒಕ್ಕೂಟ ಒಪ್ಪಂದ ಅಗತ್ಯವಿದೆ. 16ನೇ ಹಣಕಾಸು ಆಯೋಗವು ಸಮಾನತೆ, ದಕ್ಷತೆ ಹಾಗೂ ಪ್ರದರ್ಶನಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಸಂಪನ್ಮೂಲ ಹಂಚಿಕೆಯಲ್ಲಿ ಆರ್ಥಿಕ ಹಾಗೂ ಸಾಮಾಜಿಕ ಸೂಚ್ಯಂಕಗಳನ್ನು ಪರಿಚಯಿಸಬೇಕು. ಕೇಂದ್ರದ ಅನುದಾನ ಹಂಚಿಕೆಯು ಆರ್ಥಿಕ ಪ್ರಗತಿಯ ಮೇಲೆ, ವಿತ್ತೀಯ ಶಿಸ್ತಿ ಹಾಗೂ ಗುಣಮಟ್ಟದ ಆಡಳಿತದ ಮೇಲೆ ಪರಿಣಾಮಕಾರಿಯಾಗಿರಬೇಕು.

ಸಾಂಸ್ಕೃತಿಕ ಸಾರ್ವಭೌಮತ್ವ: ರಾಷ್ಟ್ರೀಯ ಭಾಷಾ ಹಕ್ಕು ಆಯೋಗವನ್ನು ಸ್ಥಾಪಿಸಿ, ಎಲ್ಲಾ ಶೆಡ್ಯುಲ್ ಭಾಷೆಗಳಿಗೂ ಸಮಾನ ಅವಕಾಶ ನೀಡಬೇಕು. ಬ್ಯಾಂಕ್, ರೈಲ್ವೇ ಹಾಗೂ ಸ್ಪರ್ಧಾತ್ಮಕ ಪರೀಕ್ಷೆ ಸೇರಿದಂತೆ ಕೇಂದ್ರೀಯ ಸಂಸ್ಥೆಗಳಲ್ಲಿ ಸ್ಥಳೀಯ ಭಾಷೆ ಕಡ್ಡಾಯಗೊಳಿಸುವ ನಿರ್ಣಯ ಜಾರಿಗೊಳಿಸಬೇಕು.

ಸಹಯೋಗದ ಮೂಲಕ ಏಕತೆ: ಜೆಎಸಿ (Joint Action Committee) ಬಲವರ್ಧಿಸಿ, ಕಾನೂನು, ಶಾಸನಗಳ ಮಧ್ಯೆ ಸಹಯೋಗ ರೂಪಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.