ನವದೆಹಲಿ: ಎಲೆಕ್ಟ್ರಿಕ್ ವಾಹನಗಳ ತಯಾರಿಕೆಯಲ್ಲಿ ಪ್ರಮುಖವಾಗಿ ಬೇಕಿರುವ ವಿರಳ ಲೋಹಗಳ ರಫ್ತಿನ ಮೇಲೆ ಚೀನಾ ನಿರ್ಬಂಧ ಹೇರಿರುವುದು ಭಾರತಕ್ಕೆ ಎಚ್ಚರಿಕೆಯ ಗಂಟೆಯಾಗಿ ಪರಿಣಮಿಸಿದೆ. ದೇಶದ ಕೈಗಾರಿಕೆಯ ಬೆಳವಣಿಗೆಗೆ ಬೇಕಿರುವ ಅಗತ್ಯ ವಸ್ತುಗಳಿಗೆ ಇತರ ದೇಶಗಳನ್ನು ಅವಲಂಬಿಸದೆ, ತನ್ನಲ್ಲೇ ಅವುಗಳ ಉತ್ಪಾದನೆಯನ್ನು ಹೆಚ್ಚಿಸಲು ಭಾರತ ತುರ್ತಾಗಿ ಗಮನಹರಿಸಬೇಕಿದೆ.

ಭಾರತದ ಆಟೊಮೊಬೈಲ್ ವಲಯವು ವಿರಳ ಲೋಹಗಳಿಗೆ ಚೀನಾವನ್ನು ಹೆಚ್ಚು ಅವಲಂಬಿಸಿದೆ. ಇದೀಗ ಚೀನಾ ರಫ್ತಿನ ಮೇಲೆ ನಿರ್ಬಂಧ ಹೇರಿರುವುದು ಈ ವಲಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ.

‘ವಾಹನ ತಯಾರಿಕಾ ವಲಯದಲ್ಲಿ ನಾವು ಅಂದುಕೊಂಡದ್ದಕ್ಕಿಂತಲೂ ಹೆಚ್ಚಿನ ಕಳವಳ ಉಂಟಾಗಿದೆ ಎಂದು ನಾನು ಹೇಳಬಲ್ಲೆ’ ಎಂಬುದು ಭಾರತೀಯ ಕೈಗಾರಿಕಾ ಒಕ್ಕೂಟದ (ಸಿಐಐ) ಅಧ್ಯಕ್ಷ ರಾಜೀವ್ ಮೆಮಾನಿ ಅವರ ನುಡಿ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸುಂಕ ಹೆಚ್ಚಿಸಿರುವುದಕ್ಕೆ ಪ್ರತಿಯಾಗಿ ಚೀನಾ ಏಪ್ರಿಲ್ನಿಂದ ವಿರಳ ಲೋಹಗಳು ಮತ್ತು ಅವುಗಳ ಮೌಲ್ಯವರ್ಧಿತ ಉತ್ಪನ್ನಗಳ ರಫ್ತಿನ ಮೇಲೆ ಕೆಲವು ನಿರ್ಬಂಧಗಳನ್ನು ಹೇರಿದೆ.

ವಿರಳ ಲೋಹಗಳ ಒಟ್ಟಾರೆ ಮಾರುಕಟ್ಟೆಯಲ್ಲಿ ಶೇ 90ರಷ್ಟು ಚೀನಾ ಹಿಡಿತದಲ್ಲಿದೆ. ಈ ಲೋಹಗಳು ವಾಹನ ತಯಾರಿಕೆಗೆ ಮಾತ್ರವಲ್ಲದೆ, ಶುದ್ಧ ಇಂಧನ ಮತ್ತು ಗೃಹೋಪಯೋಗಿ ಉಪಕರಣಗಳ ತಯಾರಿಕೆಗೂ ನಿರ್ಣಾಯಕವಾಗಿವೆ.

ವಿರಳ ಲೋಹಗಳ ಕೊರತೆಯ ಸಮಸ್ಯೆ ಬಗೆಹರಿಯದಿದ್ದರೆ ಆಟೊಮೊಬೈಲ್ ವಲಯದ ಹಲವು ಕಂಪನಿಗಳು ಉತ್ಪಾದನೆಯಲ್ಲಿ ಅಡಚಣೆ ಎದುರಿಸಬೇಕಾಗುತ್ತದೆ ಎಂದು ಉದ್ಯಮದ ಮೂಲಗಳು ತಿಳಿಸಿವೆ.

‘ಚೀನಾದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಪ್ರಸ್ತುತ ಬಿಕ್ಕಟ್ಟು ಭಾರತಕ್ಕೆ ಎಚ್ಚರಿಕೆಯ ಗಂಟೆಯಾಗಿ ಪರಿಣಮಿಸಬಹುದು ಎಂದು ಭಾವಿಸುತ್ತೇನೆ. ವಿರಳ ಲೋಹಗಳು ಮಾತ್ರವಲ್ಲ, ಇನ್ನಷ್ಟು ಉತ್ಪನ್ನಗಳಿಗೆ ನಾವು ಆ ದೇಶವನ್ನು ಅಲವಂಬಿಸಿದ್ದೇವೆ’ ಎಂದು ರಾಜೀವ್ ಮೆಮಾನಿ ಹೇಳಿದ್ದಾರೆ.

‘ಭಾರತವು ವ್ಯವಸ್ಥಿತ ಯೋಜನೆ ರೂಪಿಸಿದರೆ ಕಡಿಮೆ ಮತ್ತು ಮಧ್ಯಮ ತಂತ್ರಜ್ಞಾನದ ಕ್ಷೇತ್ರಗಳಲ್ಲಿ ಚೀನಾದ ಮೇಲಿನ ಅವಲಂಬನೆಯನ್ನು ತಪ್ಪಿಸಬಹುದು. ಆದರೆ ಉನ್ನತ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಚೀನಾದ ಮೇಲಿನ ಅವಲಂಬನೆ ಕಡಿಮೆ ಮಾಡಲು ದೀರ್ಘಾವಧಿಯ ಯೋಜನೆ ಅಗತ್ಯ’ ಎಂದು ಗ್ಲೋಬಲ್ ಟ್ರೇಡ್ ರಿಸರ್ಚ್ ಇನಿಷಿಯೇಟಿವ್ (ಜಿಟಿಆರ್ಐ) ಹೇಳಿದೆ.

‘ಸರ್ಕಾರ ಮಧ್ಯಪ್ರವೇಶಿಸಲಿ’

ವಿರಳ ಲೋಹಗಳ ಕೊರತೆಯಿಂದ ಎದುರಾಗಿರುವ ಬಿಕ್ಕಟ್ಟು ಬಗೆಹರಿಸಲು ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ಭಾರತೀಯ ವಾಹನ ಬಿಡಿಭಾಗಗಳ ತಯಾರಕರ ಒಕ್ಕೂಟ (ಎಸಿಎಂಎ) ಮತ್ತು ಭಾರತೀಯ ವಾಹನ ತಯಾರಕರ ಒಕ್ಕೂಟ (ಎಸ್ಐಎಎಂ) ಆಗ್ರಹಿಸಿವೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಭಾರತದ ಅಧಿಕಾರಿಗಳು ಚೀನಾದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಇತ್ತೀಚೆಗೆ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.