ನವದೆಹಲಿ: ಪೂರ್ವ ಲಡಾಖ್ನ ಪ್ಯಾಂಗೊಂಗ್ ಸರೋವರಕ್ಕೆ ಅಡ್ಡಲಾಗಿ ಚೀನಾ ಸೇತುವೆ ನಿರ್ಮಿಸುತ್ತಿರುವ ಪ್ರದೇಶವು ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಪ್ರದೇಶವಾಗಿದೆ ಎಂದು ಕೇಂದ್ರ ಸರ್ಕಾರವು ಸಂಸತ್ತಿಗೆ ತಿಳಿಸಿದೆ. ಭಾರತದ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಇತರ ದೇಶಗಳು ಗೌರವಿಸಬೇಕೆಂದು ಸರ್ಕಾರ ನಿರೀಕ್ಷಿಸುತ್ತದೆ ಎಂದು ಅದು ಹೇಳಿದೆ.

‘ಪ್ಯಾಂಗೊಂಗ್ ಸರೋವರದ ಮೇಲೆ ಚೀನಾ ನಿರ್ಮಿಸುತ್ತಿರುವ ಸೇತುವೆಯನ್ನು ಸರ್ಕಾರ ಗಮನಿಸಿದೆ. ಈ ಸೇತುವೆಯನ್ನು 1962ರಿಂದ ಚೀನಾವು ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಪ್ರದೇಶಗಳಲ್ಲಿ ನಿರ್ಮಿಸಲಾಗುತ್ತಿದೆ’ಎಂದು ಸರ್ಕಾರ ಲಿಖಿತ ಪ್ರತಿಕ್ರಿಯೆಯಲ್ಲಿ ಸಂಸತ್ತಿಗೆ ತಿಳಿಸಿದೆ ಎಂದು ಎನ್ಡಿಟಿವಿ ವರದಿ ಮಾಡಿದೆ.

‘ಭಾರತ ಸರ್ಕಾರವು ಚೀನಾದ ಭೂಕಬಳಿಕೆಯನ್ನು ಎಂದಿಗೂ ಒಪ್ಪಿಕೊಂಡಿಲ್ಲ. ಜಮ್ಮು ಮತ್ತು ಕಾಶ್ಮೀರ, ಲಡಾಖ್ ಕೇಂದ್ರಾಡಳಿತ ಪ್ರದೇಶಗಳು ಭಾರತದ ಅವಿಭಾಜ್ಯ ಅಂಗವಾಗಿವೆ. ಭಾರತದ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಇತರ ದೇಶಗಳು ಗೌರವಿಸಬೇಕು ಎಂದು ನಾವು ಹಲವಾರು ಸಂದರ್ಭಗಳಲ್ಲಿ ಸ್ಪಷ್ಟಪಡಿಸಿದ್ದೇವೆ’ಎಂದು ಸರ್ಕಾರ ಹೇಳಿದೆ.

8 ಮೀಟರ್ ಅಗಲವಿರುವ ಈ ಸೇತುವೆಯು ಪ್ಯಾಂಗೊಂಗ್ ಸರೋವರಕ್ಕೆ ಉತ್ತರ ಭಾಗದ ದಡದ ಚೀನಾದ ಸೇನಾ ನೆಲೆಯ ದಕ್ಷಿಣಕ್ಕೆ ಇದೆ. 2020 ರಲ್ಲಿ ಭಾರತ ಮತ್ತು ಚೀನೀ ಸೈನಿಕರ ನಡುವಿನ ಘರ್ಷಣೆಯ ಸಮಯದಲ್ಲಿ ಇಲ್ಲಿ ಚೀನಾದ ಆಸ್ಪತ್ರೆಗಳು ಮತ್ತು ಸೈನಿಕ ವಸತಿಗಳು ಇದ್ದವು.

2020 ರಿಂದ ಮತ್ತು ವಿಶೇಷವಾಗಿ ಗಾಲ್ವಾನ್ ಪ್ರದೇಶದಲ್ಲಿ ಹಿಂಸಾತ್ಮಕ ಮುಖಾಮುಖಿಯಲ್ಲಿ 20 ಭಾರತೀಯ ಸೈನಿಕರು ಹುತಾತ್ಮರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.