ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದೂ ಮಹಾಸಾಗರಕ್ಕೆ ಬಿದ್ದ ರಾಕೆಟ್‌ನ ಮಾಹಿತಿ ಮುಚ್ಚಿಡುತ್ತಿರುವ ಚೀನಾ: ನಾಸಾ

Last Updated 31 ಜುಲೈ 2022, 5:47 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಚೀನಾದ ರಾಕೆಟ್ ಶನಿವಾರ ಹಿಂದೂ ಮಹಾಸಾಗರಕ್ಕೆ ಬಿದ್ದಿದೆ. ಆದರೆ ಅವಶೇಷಗಳು ಎಲ್ಲಿ ಬಿದ್ದಿವೆ ಎಂಬ ನಿರ್ದಿಷ್ಟ ಮಾಹಿತಿಯನ್ನು ಚೀನಾ ಹಂಚಿಕೊಂಡಿಲ್ಲ ಎಂದು ನಾಸಾ ಹೇಳಿದೆ.

‘ಲಾಂಗ್‌ ಮಾರ್ಚ್‌ 5ಬಿ’ ಹೆಸರಿನ ರಾಕೆಟ್ ಶನಿವಾರ ಮಧ್ಯಾಹ್ನ ಸುಮಾರು 12:45 ಕ್ಕೆ ಹಿಂದೂ ಮಹಾಸಾಗರದ ಮೇಲೆ ಪತನಗೊಂಡಿದೆ ಎಂದು ಅಮೆರಿಕದ ಬಾಹ್ಯಾಕಾಶ ನಿಗಾ ಸಂಸ್ಥೆ ಹೇಳಿದೆ.

ಚೀನಾದ ಟಿಯಾಂಗಾಂಗ್ ಬಾಹ್ಯಾಕಾಶ ನಿಲ್ದಾಣಕ್ಕೆ ಲ್ಯಾಬ್ ಪರಿಕರಗಳನ್ನು ತಲುಪಿಸಲು ಜುಲೈ 24 ರಂದು ಈ ರಾಕೆಟ್‌ ಅನ್ನು ಉಡಾಯಿಸಲಾಗಿತ್ತು ಎಂದು ವರದಿಯಾಗಿದೆ.

‘ಬಾಹ್ಯಾಕಾಶ ಅಧ್ಯಯನದಲ್ಲಿ ತೊಡಗುವ ರಾಷ್ಟ್ರಗಳು ಸ್ಥಾಪಿತವಾದ ಉತ್ತಮ ನಡವಳಿಗಳನ್ನು ಅನುಸರಿಸಬೇಕು ಮತ್ತು ಸಂಭಾವ್ಯ ಅಪಾಯದ ವಿಶ್ವಾಸಾರ್ಹ ಮುನ್ಸೂಚನೆಗಳನ್ನು ಮುಂಚಿತವಾಗಿ ಹಂಚಿಕೊಳ್ಳಬೇಕು‘ ಎಂದು ನಾಸಾದ ನಿರ್ವಾಹಕ ಬಿಲ್ ನೆಲ್ಸನ್ ಹೇಳಿದ್ದಾರೆ. ‘ಬಾಹ್ಯಾಕಾಶದ ಜವಾಬ್ದಾರಿಯುತ ಬಳಕೆ ಮತ್ತು ಭೂಮಿಯ ಮೇಲಿನ ಜನರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಉತ್ತಮ ನಡವಳಿಕೆಗಳು ನಿರ್ಣಾಯಕವಾಗಿರಲಿವೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಮಲೇಷ್ಯಾದ ಸಾಮಾಜಿಕ ಮಾಧ್ಯಮ ಬಳಕೆದಾರರು ರಾಕೆಟ್ ಅವಶೇಷಗಳ ವಿಡಿಯೊವನ್ನು ಪೋಸ್ಟ್ ಮಾಡಿದ್ದಾರೆ.

22.5 ಟನ್‌ಗಳಷ್ಟು (ಸುಮಾರು 48,500 ಪೌಂಡ್) ತೂಕದ ರಾಕೆಟ್‌ನ ಮುಖ್ಯ ಭಾಗ ಅನಿಯಂತ್ರಿತವಾಗಿ ಭೂಮಿಗೆ ಬೀಳುವಂತೆ ಮಾಡಿರುವುದು ಅಜಾಗರೂಕ ನಡೆ ಎಂದು ಲಾಸ್ ಏಂಜಲೀಸ್ ಬಳಿಯ ಸರ್ಕಾರಿ ಅನುದಾನಿತ ಸಂಶೋಧನಾ ಕೇಂದ್ರ ಏರೋಸ್ಪೇಸ್ ಕಾರ್ಪ್ ಹೇಳಿದೆ.

ವಾಷಿಂಗ್ಟನ್‌ನಲ್ಲಿರುವ ಚೀನಾ ರಾಯಭಾರ ಕಚೇರಿ ಈ ಬಗ್ಗೆ ತಕ್ಷಣಕ್ಕೆ ಪ್ರತಿಕ್ರಿಯಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT