ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ಸಿಗರು ‘ಬೇಹುಗಾರಿಕೆಯ ಜೇಮ್ಸ್‌ಬಾಂಡ್‌ಗಳು’: ಕೇಂದ್ರ ಸಚಿವ ನಖ್ವಿ  

Last Updated 1 ಆಗಸ್ಟ್ 2021, 8:23 IST
ಅಕ್ಷರ ಗಾತ್ರ

ನವದೆಹಲಿ: ಪೆಗಾಸಸ್ ಗೂಢಚರ್ಯೆ ಆರೋಪಗಳ ಕುರಿತ ಚರ್ಚೆಗೆ ಆಗ್ರಹಿಸಿ ಸಂಸತ್ತಿನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿರುವ ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ, ‘ಕಾಂಗ್ರೆಸ್‌ ಪಕ್ಷವು ಅಧಿಕಾರದಲ್ಲಿದ್ದಾಗ ‘ಬೇಹುಗಾರಿಕೆಯ ಜೇಮ್ಸ್ ಬಾಂಡ್’ನಂತೆ ವರ್ತಿಸಿದೆ. ಆದರೆ, ಈಗ ಸುಳ್ಳುಗಳ ಮೂಲಕ ಸಂಸತ್ತಿನ ಸಮಯ ಹಾಳು ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ.

ರಾಜ್ಯಸಭಾ ಉಪನಾಯಕರೂ ಆಗಿರುವ ನಖ್ವಿ, ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳ ನಡೆಯನ್ನು ಆಕ್ಷೇಪಿಸಿದ್ದಾರೆ.

ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ನಖ್ವಿ, ‘ಜನರಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸರ್ಕಾರ ಸಿದ್ಧವಾಗಿದೆ,’ ಎಂದು ಹೇಳಿದ್ದಾರೆ. ಅಲ್ಲದೆ, ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಸರ್ಕಾರ ಮತ್ತು ವಿರೋಧ ಪಕ್ಷಗಳ ನಡುವಿನ ಬಿಕ್ಕಟ್ಟು ಬಗೆಹರಿದು ಕಲಾಪ ಸುಗಮವಾಗಿ ನಡೆಯುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.

ಸಂದರ್ಶನದಲ್ಲಿ ಕಾಂಗ್ರೆಸ್‌ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ನಖ್ವಿ, ‘ಈ ಜನ (ಕಾಂಗ್ರೆಸ್) ಬೇಹುಗಾರಿಕೆಯ ಜೇಮ್ಸ್ ಬಾಂಡ್’ ಆಗಿದ್ದವರು(ಅಧಿಕಾರದಲ್ಲಿದ್ದಾಗ). ಅವರು ಸರ್ಕಾರದಲ್ಲಿದ್ದಾಗ ಗೂಢಚರ್ಯೆ ನಡೆಸುತ್ತಾರೆ. ಅಧಿಕಾರವಿಲ್ಲದಾಗ ಗೂಢಚರ್ಯೆಯ ಆರೋಪ ಮಾಡುತ್ತಾರೆ,‘ ಎಂದಿದ್ದಾರೆ.

‘ಅವರು ಮೊದಲು ಕೊರೊನಾ ಬಗ್ಗೆ ಚರ್ಚೆ ಆಗಬೇಕು ಎಂದು ಹೇಳಿದರು. ಆದರೆ ಅದನ್ನು ಒಪ್ಪಲಿಲ್ಲ. ನಮಗೆ ರೈತರ ಬಗ್ಗೆ ಚರ್ಚೆ ಆಗಬೇಕು ಎಂದು ಹೇಳಿದರು. ನಂತರ ಅದನ್ನೂ ಒಪ್ಪಲಿಲ್ಲ. ದೇಶದ ವಿವಿಧ ಭಾಗಗಳಲ್ಲಿ ಪ್ರವಾಹದ ಸಮಸ್ಯೆ ಉಂಟಾಗಿದೆ ಅದರ ಬಗ್ಗೆ ಅವರು ಮಾತನಾಡಲಿಲ್ಲ. ಅವರೇ ಆರೋಪಿಸುವ ಬೆಲೆ ಏರಿಕೆಯ ಬಗ್ಗೆಯೂ ಅವರು ಮಾತನಾಡುತ್ತಿಲ್ಲ,‘ ಎಂದು ಕಾಂಗ್ರೆಸ್‌ನ ನಡೆಯನ್ನು ವಿಮರ್ಶೆಗೊಳಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT