ಪಟ್ನಾ: ಹೆಚ್ಚಿನ ಸಂಖ್ಯೆಯ ಕಾಂಗ್ರೆಸ್ ಶಾಸಕರು ಪಕ್ಷಾಂತರಕ್ಕೆ ಯೋಜಿಸುತ್ತಿದ್ದಾರೆ ಎಂಬ ಊಹಾಪೋಹಾಗಳಿಗೆ ಸಂಬಂಧಪಟ್ಟಂತೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಸೋಮವಾರ ಪ್ರತಿಕ್ರಿಯಿಸಿದೆ.

ಒಟ್ಟು 19 ಮಂದಿ ಶಾಸಕರನ್ನು ಹೊಂದಿರುವ ಕಾಂಗ್ರೆಸ್ಸಿನ ಕನಿಷ್ಠ 13 ಶಾಸಕರು ಜೆಡಿಯುಗೆ ಸೇರ್ಪಡೆಯಾಗಲು ಯೋಜಿಸುತ್ತಿದ್ದಾರೆ ಎಂಬ ಮಾಧ್ಯಮಗಳ ವರದಿ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಜೆಡಿಯು ರಾಷ್ಟ್ರೀಯ ಅಧ್ಯಕ್ಷ ಆರ್‌ಸಿಪಿ ಸಿಂಗ್, ಕಾಂಗ್ರೆಸ್ ಮುಳುಗುತ್ತಿರುವ ಹಡಗಿನಂತಾಗಿದ್ದು, ಹಿಂದಿನಂತೆಯೇ ಪಕ್ಷ ಬಿಟ್ಟು ತೆರಳುವವರ ಸಂಖ್ಯೆ ಮುಂದುವರಿಯುತ್ತಿರಬಹುದು ಎಂದು ಟೀಕಿಸಿದ್ದಾರೆ.

ಮೂರು ವರ್ಷಗಳ ಹಿಂದೆ ಪಕ್ಷದ ಮಾಜಿ ಅಧ್ಯಕ್ಷ ಅಶೋಕ್ ಚೌಧರಿ ಅವರು ಇತರ ಕೆಲವು ಶಾಸಕರೊಂದಿಗೆ ಜೆಡಿಯುಗೆ ತೆರಳಿದಾಗಲೂ ಪಕ್ಷವು ಹಿನ್ನಡೆಯನ್ನು ಅನುಭವಿಸಿತು. ಬಳಿಕ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಪಕ್ಷದ ರಾಜ್ಯ ಅಧ್ಯಕ್ಷರಾಗಿ ಜೆಡಿಯುನಲ್ಲಿ ಪ್ರಾಮುಖ್ಯತೆ ಪಡೆದಿರುವ ಚೌಧರಿ ಇದೀಗ ಮುಖ್ಯಮಂತ್ರಿ ಅವರ ವಿಶ್ವಾಸಾರ್ಹ ಕ್ಯಾಬಿನೆಟ್ ಸಹೋದ್ಯೋಗಿಗಳಲ್ಲಿ ಒಬ್ಬರಾಗಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಪಕ್ಷದ ಕಾರ್ಯವೈಖರಿಯನ್ನು ನೋಡಿ. ಕಾಂಗ್ರೆಸ್ ರಾಜ್ಯವನ್ನು ಆಳಲು ಬಯಸುತ್ತಿತ್ತು. ಆದರೆ ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ನೆಲಕಚ್ಚಿತು. ಹಳೆಯ ನಿಷ್ಠಾವಂತರಾದ ಜ್ಯೋತಿರಾದಿತ್ಯ ಸಿಂಧ್ಯಾ ಮತ್ತು ಜಿತಿನ್ ಪ್ರಸಾದ ಅವರು ಪಕ್ಷ ತೊರೆಯುವುದನ್ನು ಆಯ್ಕೆ ಮಾಡಿಕೊಂಡಿರುವುದರಲ್ಲಿ ಆಶ್ಚರ್ಯವಿಲ್ಲ ಎಂದು ಸಿಂಗ್ ಟೀಕಿಸಿದರು.

ನೆಹರೂ-ಗಾಂಧಿ ಕುಟುಂಬಕ್ಕೆ ಬದ್ಧರಾಗಿದ್ದ ತನ್ನ ಕಾರ್ಯಕರ್ತರನ್ನು ಗೌರವಿಸುವುದನ್ನೇ ಕಾಂಗ್ರೆಸ್ ಬಿಟ್ಟುಕೊಟ್ಟಿದೆ ಎಂದು ಆರೋಪಿಸಿದರು. ಭವಿಷ್ಯದಲ್ಲಿ ಬಿಹಾರದಲ್ಲಿ ಕಾಂಗ್ರೆಸ್ ಶಾಸಕರು ಪಕ್ಷವನ್ನು ಬದಲಾಯಿಸುವ ಸಾಧ್ಯತೆಯ ಬಗ್ಗೆ ಕೇಳಿದಾಗ, ಆಗ ನಾವು ಕೂಡ ಗೆರೆಯನ್ನು ದಾಟುತ್ತೇವೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.