ಲಖನೌ: ಹಲವು ಮಕ್ಕಳ ಸಾವಿಗೆ ಕಾರಣವಾಗಿರುವ ‘ಕೋಲ್ಡ್ರಿಫ್’ ಎಂಬ ಕೆಮ್ಮಿನ ಸಿರಪ್ನ ಕಲಬೆರಕೆಗೆ ಸಂಬಂಧಿಸಿದಂತೆ ವಜಾಗೊಂಡಿರುವ ಪೊಲೀಸ್ ಕಾನ್ಸ್ಟೆಬಲ್ಗೆ ಸೇರಿದ ಆಸ್ತಿಗಳ ಮೇಲೆ ದಾಳಿ ನಡೆಸಿದ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಐಷರಾಮಿ ಬಂಗಲೆಯ ವೈಭವ ಕಂಡು ದಿಗ್ಭ್ರಮೆಗೊಂಡಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ವಿಶೇಷ ಟಾಸ್ಕ್ಪೋರ್ಸ್ ತಂಡವು ಕಾನ್ಸ್ಟೆಬಲ್ ಅಲೋಕ್ ಪ್ರತಾಪ್ ಸಿಂಗ್ ಕಳೆದ ತಿಂಗಳು ಬಂಧಿಸಿತ್ತು. ಡಿಸೆಂಬರ್ 2ರಂದು ಅವರನ್ನು ಹುದ್ದೆಯಿಂದ ವಜಾಗೊಳಿಸಲಾಗಿತ್ತು.

‘ಲಖನೌ– ಸುಲ್ತಾನ್ಪುರ ಹೆದ್ದಾರಿ ಅಹಮೌನಲ್ಲಿ 7 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ಈ ಬಂಗಲೆಯಿದ್ದು, ಯುರೋಪಿಯನ್ ಶೈಲಿಯ ಒಳಾಂಗಣ, ಸುರುಳಿಯಾಕಾರಾದ ಮೆಟ್ಟಿಲುಗಳು, ವಿಂಟೇಜ್ ದೀಪ ಹಾಗೂ ಲಕ್ಸುರಿ ವಸ್ತುಗಳು ಸಿಕ್ಕಿವೆ. ಮನೆ ನಿರ್ಮಾಣಕ್ಕೆ ಸುಮಾರು ₹5 ಕೋಟಿ ವೆಚ್ಚವಾಗಿರುವ ಸಾಧ್ಯತೆಯಿದ್ದು, ಒಳಾಂಗಣದ ವಿನ್ಯಾಸಕ್ಕೆ ₹1.5 ಕೋಟಿಯಿಂದ ₹2 ಕೋಟಿ ಖರ್ಚು ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ನಿವೇಶನ ಮೌಲ್ಯವು ಇದರಲ್ಲಿ ಸೇರಿಲ್ಲ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಇದಲ್ಲದೇ, ಪ್ರದಾ, ಗುಸ್ಸಿ ಕಂಪನಿಗಳ ದುಬಾರಿ ಹ್ಯಾಂಡ್ಬ್ಯಾಗ್ಗಳು, ರ್ಯಾಡೊ ವಾಚ್, ದುಬಾರಿ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಹೇಳಿದ್ದಾರೆ. ಮಧ್ಯಪ್ರದೇಶದಲ್ಲಿ ಕಲಬೆರಕೆ ಕೆಮ್ಮಿನ ಸಿರಪ್ ಸೇವಿಸಿ 24 ಮಕ್ಕಳು ಮೃತಪಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.