ಚೆನ್ನೈ: ದೇಶದ ಕೆಲವು ರಾಜ್ಯಗಳಲ್ಲಿ ಮಕ್ಕಳ ಸರಣಿ ಸಾವಿಗೆ ಕಾರಣವಾಗಿರುವ ಕೆಮ್ಮಿನ ಸಿರಪ್ 'ಕೋಲ್ಡ್ರಿಫ್' (Coldrif) ತಯಾರಕ ಕಂಪನಿ, ತಮಿಳುನಾಡು ಮೂಲದ ಸ್ರೆಸನ್ ಫಾರ್ಮಾದ ಉತ್ಪಾದನಾ ಪರವಾನಗಿಯನ್ನು ರದ್ದುಮಾಡಲಾಗಿದೆ. ಕಂಪನಿಯನ್ನು ಬಂದ್ ಮಾಡುವಂತೆ ಆದೇಶಿಸಿರುವುದಾಗಿ ರಾಜ್ಯ ಸರ್ಕಾರ ಸೋಮವಾರ ತಿಳಿಸಿದೆ.

ಸಿರಪ್ನಲ್ಲಿ ವಿಷಕಾರಿ ರಾಸಾಯನಿಕ'ಡೈಥಿಲೀನ್ ಗ್ಲೈಕಾಲ್'(Diethylene glycol–DEG) ಪ್ರಮಾಣ ಶೇ 48.6 ರಷ್ಟಿದೆ ಎಂಬುದು ರಾಜ್ಯ ಔಷಧ ನಿಯಂತ್ರಕ ಅಧಿಕಾರಿಗಳ ತನಿಖೆ ವೇಳೆ ಬೆಳಕಿಗೆ ಬಂದಿದೆ. ಮಧ್ಯಪ್ರದೇಶದಲ್ಲಿ ಸಂಭವಿಸಿದ ಮಕ್ಕಳ ಸರಣಿ ಸಾವಿಗೆ ಈ ಔಷಧವೇ ಕಾರಣ ಎನ್ನಲಾಗಿದೆ.

ಕಂಪನಿ ಮಾಲೀಕ ಜಿ. ರಂಗನಾಥನ್ ಅವರನ್ನು ಮಧ್ಯಪ್ರದೇಶ ವಿಶೇಷ ತನಿಖಾ ತಂಡ ಇತ್ತೀಚೆಗೆ ಬಂಧಿಸಿದೆ.

ಸ್ರೆಸಾನ್ ಫಾರ್ಮಾದ ಆವರಣ ಮತ್ತು ಕೆಲವು ಅಧಿಕಾರಿಗಳಿಗೆ ಸೇರಿದ ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯದ (ಇ.ಡಿ) ತಂಡ ಹಣದ ಅಕ್ರಮ ವರ್ಗಾವಣೆ ತಡೆ (ಪಿಎಂಎಲ್ಎ) ಕಾಯ್ದೆ ಅಡಿಯಲ್ಲಿ ಇಂದು ಬೆಳಿಗ್ಗೆ ದಾಳಿ ಮಾಡಿದೆ.

ಮಧ್ಯಪ್ರದೇಶವೊಂದರಲ್ಲೇ ಕನಿಷ್ಠ 22 ಮಕ್ಕಳು 'ಕೋಲ್ಡ್ರಿಫ್' ಸೇವನೆ ಬಳಿಕ ಮೂತ್ರಪಿಂಡ ವೈಫಲ್ಯದಿಂದ ಸಾವಿಗೀಡಾಗಿವೆ. ಇನ್ನೂ ಕೆಲವು ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.