ಶ್ರೀನಗರ: ಲೆಬನಾನ್‌ನಲ್ಲಿ ಇಸ್ರೇಲ್ ದಾಳಿಯಲ್ಲಿ ಹಿಜ್ಬುಲ್ಲಾ ಮುಖ್ಯಸ್ಥ ಸಯ್ಯದ್ ಹಸನ್ ನಸ್ರಲ್ಲಾ ಹತ್ಯೆಯಾಗಿರುವ ಬೆನ್ನಲ್ಲೇ ಜಮ್ಮು ಕಾಶ್ಮೀರದಲ್ಲಿ ಹಲವೆಡೆ ಪ್ರತಿಭಟನೆ ಭುಗಿಲೆದ್ದಿತ್ತು.
ಈ ನಡುವೆ ಕಣಿವೆ ರಾಜ್ಯದಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಕೋಮು ಅಥವಾ ಉದ್ವಿಗ್ನ ಸಂದೇಶ ಹರಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಕಾಶ್ಮೀರದ ಸೈಬರ್ ಪೊಲೀಸ್ ಎಚ್ಚರಿಕೆ ನೀಡಿದೆ.
'ಸಾಮಾಜಿಕ ಮಾಧ್ಯಮಗಳಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ತರುವ ಪ್ರಚೋದನಕಾರಿ ಮತ್ತು ಮತೀಯ ಪೋಸ್ಟ್‌ಗಳನ್ನು ಹರಡುತ್ತಿರುವುದು ನಮ್ಮ ಗಮನಕ್ಕ ಬಂದಿದೆ. ಇಂತಹ ಆಕ್ಷೇಪಾರ್ಹ ಪೋಸ್ಟ್‌ಗಳನ್ನು ಮಾಡದಂತೆ ಮನವಿ ಮಾಡುತ್ತಿದ್ದೇವೆ' ಎಂದು ಕಾಶ್ಮೀರದ ಸೈಬರ್ ಪೊಲೀಸ್ 'ಎಕ್ಸ್'ನಲ್ಲಿ ತಿಳಿಸಿದೆ.
ಶಾಂತಿ ಕದಡಲು, ಯಾವುದೇ ರೀತಿಯ ಪ್ರಚೋದನಕಾರಿ ವಿಷಯವನ್ನು ಹರಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
'ಜಮ್ಮು ಕಾಶ್ಮೀರದ ಏಕತೆ ಮತ್ತು ಶಾಂತಿಯನ್ನು ಎಲ್ಲರೂ ಒಗ್ಗಟ್ಟಾಗಿ ಕಾಪಾಡೋಣ' ಎಂದು ಹೇಳಿದೆ.
ಶ್ರೀನಗರ ಮತ್ತು ಬುಡ್ಗಾಮ್ ಜಿಲ್ಲೆಗಳ ಶಿಯಾ ಪ್ರಾಬಲ್ಯದ ಪ್ರದೇಶಗಳಲ್ಲಿ ನಸ್ರಲ್ಲಾ ಕೊಲೆ ಖಂಡಿಸಿ ವ್ಯಾಪಕ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು.
ಈವರೆಗೆ ಪ್ರತಿಭಟನೆ ಶಾಂತಿಯುತವಾಗಿ ನಡೆದಿದೆ. ಆದರೆ ಕೆಲವು ಸಾಮಾಜಿಕ ಬಳಕೆದಾರರು ಆನ್‌ಲೈನ್‌ನಲ್ಲಿ ಪ್ರಚೋದನಕಾರಿ ಪೋಸ್ಟ್ ಹರಡುತ್ತಿರುವ ಬಗ್ಗೆ ವರದಿಯಾಗಿವೆ.
1/2 Advisory:
— Cyber Police Kashmir (@Cyberpolicekmr) September 29, 2024
We’ve noticed inflammatory and sectarian posts being shared on social media, threatening communal harmony. We urge everyone to refrain from posting or engaging in such divisive content. @JmuKmrPolice @KashmirPolice @DIGCKRSGR @SrinagarPolice @IftkharTalib
2/2. Any individual found posting or sharing sectarian, inflammatory, or provocative content aimed at disturbing peace will face strict legal action under the relevant sections of law. Let’s work together to maintain the unity and tranquility of Kashmir. #StayResponsible #Peace
— Cyber Police Kashmir (@Cyberpolicekmr) September 29, 2024
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.