ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಶತಾಯಗತಾಯ ಗೆಲ್ಲಲೇಬೇಕೆಂದು ಪಣ ತೊಟ್ಟಿರುವ ಕಾಂಗ್ರೆಸ್ ಪಕ್ಷ, ಆಡಳಿತಾರೂಢ ಎಎಪಿಯ ಪ್ರಮುಖ ನಾಯಕರಾದ ಅರವಿಂದ ಕೇಜ್ರಿವಾಲ್, ಆತಿಶಿ, ಮನೀಶ್ ಸಿಸೋಡಿಯಾ ಅವರನ್ನು ಹಣಿಯಲು ಘಟಾನುಘಟಿ ನಾಯಕರನ್ನು ಕಣಕ್ಕಿಳಿಸಿದೆ. ಆದರೆ, ಇವರ ಕ್ಷೇತ್ರಗಳಲ್ಲಿ 2013ರಿಂದ ಈಚೆಗೆ ನಡೆದ ಮೂರು ಚುನಾವಣೆಗಳಲ್ಲಿ ಅತ್ಯಂತ ಕಡಿಮೆ ಮತಗಳನ್ನು ಗಳಿಸಿರುವುದು, ಕಾಂಗ್ರೆಸ್ನಲ್ಲಿ ಆತ್ಮವಿಶ್ವಾಸದ ಕೊರತೆ ಉಂಟುಮಾಡಿದೆ.

ಮಾಜಿ ಮುಖ್ಯಮಂತ್ರಿ, ಎಎಪಿ ಮುಖ್ಯಸ್ಥರೂ ಆಗಿರುವ ಕೇಜ್ರಿವಾಲ್, ನವದೆಹಲಿ ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದಾರೆ. ಸಿಎಂ ಆತಿಶಿ ಕಲ್ಕಾಜಿಯಲ್ಲಿ ಹಾಗೂ ಸಿಸೋಡಿಯಾ ಅವರು ಜಂಗ್ಪುರದಲ್ಲಿ ಸ್ಪರ್ಧಿಸಿದ್ದಾರೆ. ಈ ಕ್ಷೇತ್ರಗಳಲ್ಲಿ ಎಎಪಿಗೆ ತೀರಾ ಸಮೀಪದ ಸ್ಪರ್ಧಿ ಎನಿಸಿರುವ ಬಿಜೆಪಿ, ತನ್ನ ಮತ ಗಳಿಕೆಯನ್ನು ಹೆಚ್ಚಿಸಿಕೊಳ್ಳುತ್ತಾ ಸಾಗಿದೆ. ಆದರೆ, ಕಾಂಗ್ರೆಸ್ ಕುಸಿಯುತ್ತಾ ಬಂದಿದೆ.

ನವದೆಹಲಿಯಲ್ಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರ ಪುತ್ರ ಹಾಗೂ ಮಾಜಿ ಸಂಸದ ಸಂದೀಪ್ ದೀಕ್ಷಿತ್ ಅವರನ್ನು ಕಣಕ್ಕಿಳಿಸಿರುವ ಕಾಂಗ್ರೆಸ್, ಕಲ್ಕಾಜಿಯಲ್ಲಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಲ್ಕಾ ಲಾಂಬಾ ಹಾಗೂ ಜಂಗ್ಪುರ ಮಾಜಿ ಮೇಯರ್ ಪರ್ಹಾಸ್ ಸೂರಿ ಅವರನ್ನು ಕಣಕ್ಕಿಳಿಸಿದೆ. ಈ ಕ್ಷೇತ್ರಗಳಲ್ಲಿ ಕ್ರಮವಾಗಿ ಪರ್ವೇಶ್ ವರ್ಮಾ, ರಮೇಶ್ ಬಿಧೂಢಿ ಮತ್ತು ತರ್ವಿಂದರ್ ಸಿಂಗ್ ಮರ್ವಾ ಅವರನ್ನು ಬಿಜೆಪಿ ಸ್ಪರ್ಧೆಗೆ ನಿಲ್ಲಿಸಿದೆ.
.Delhi Elections | ಎಎಪಿ ಪ್ರಮುಖರ ವಿರುದ್ಧ ಕಾಂಗ್ರೆಸ್ನ ಘಟಾನುಘಟಿಗಳ ಸ್ಪರ್ಧೆ.Delhi Assembly Election | ಫೆ. 5ರಂದು ಮತದಾನ; ಫೆ. 8ಕ್ಕೆ ಮತ ಎಣಿಕೆ: CEC.
2013ರಿಂದ ಈಚೆಗೆ ನಡೆದಿರುವ ಮೂರು ಚುನಾವಣೆಗಳಲ್ಲಿ ಮೇಲಿನ ಯಾವುದೇ ಕ್ಷೇತ್ರದಲ್ಲಿ ಕಾಂಗ್ರೆಸ್ ಒಮ್ಮೆಯೂ ಗೆದ್ದಿಲ್ಲ. 'ನಾವು ಕಳೆದುಕೊಂಡಿರುವ ಕ್ಷೇತ್ರಗಳನ್ನು ಮರಳಿ ಪಡೆಯಲು, ಎಎಪಿಯನ್ನು ಎದುರಿಸಬೇಕಿದೆ' ಎಂದು ಕಾಂಗ್ರೆಸ್ನ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.

ನವದೆಹಲಿಯಲ್ಲಿ ಬಲಾಬಲ
2013ರಲ್ಲಿ ಶೀಲಾ ದೀಕ್ಷಿತ್ ಅವರ ಎದುರು ನವದೆಹಲಿ ಕ್ಷೇತ್ರದಿಂದ ಗೆಲುವು ಸಾಧಿಸಿದ್ದ ಕೇಜ್ರಿವಾಲ್, ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದರು. ಇದೀಗ ಅವರ ವಿರುದ್ಧ ಶೀಲಾ ಪುತ್ರ ಸಂದೀಪ್ ದೀಕ್ಷಿತ್ ಕಾಂಗ್ರೆಸ್ನಿಂದ ಕಣದಲ್ಲಿದ್ದಾರೆ.

2008ರಲ್ಲಿ ಈ ಕ್ಷೇತ್ರದಲ್ಲಿ ಗೆದ್ದಿದ್ದ ಶೀಲಾ, 39,778 ಮತಗಳನ್ನು ಗಳಿಸಿದ್ದರು. ಬಿಜೆಪಿ ಅಭ್ಯರ್ಥಿ 25,796 ಮತಗಳನ್ನು ಗಳಿಸಿ ಎರಡನೇ ಸ್ಥಾನ ಪಡೆದಿದ್ದರು. ಆದರೆ, 2013ರಲ್ಲಿ ಶೀಲಾ ಅವರ ಮತ ಗಳಿಕೆ ಕೇವಲ 18,405ಕ್ಕೆ ಕುಸಿದಿತ್ತು. ಆಗ ಕೇಜ್ರಿವಾಲ್ 44,629 ಮತಗಳೊಂದಿಗೆ ವಿಧಾನಸಭೆ ಪ್ರವೇಶಿಸಿದ್ದರು. ಬಿಜೆಪಿಗೆ 17,952 ಮತಗಳು ದಕ್ಕಿದ್ದವು.

2013ರ ಚುನಾವಣೆಯಲ್ಲಿ ಮೊದಲ ಸಲ ಸ್ಪರ್ಧಿಸಿದ್ದ ಎಎಪಿ 28 ಸ್ಥಾನಗಳನ್ನು ಜಯಿಸಿತ್ತು. 32 ಕ್ಷೇತ್ರಗಳನ್ನು ಗೆದ್ದು ದೊಡ್ಡ ಪಕ್ಷ ಎನಿಸಿದ್ದ ಬಿಜೆಪಿ, ಮೈತ್ರಿ ಸರ್ಕಾರ ರಚನೆಗೆ ಒಪ್ಪಿರಲಿಲ್ಲ. 8 ಶಾಸಕರನ್ನು ಹೊಂದಿದ್ದ ಕಾಂಗ್ರೆಸ್ ಬೆಂಬಲದೊಂದಿಗೆ ಎಎಪಿ ಸರ್ಕಾರ ರಚಿಸಿತ್ತು. ಕೇಜ್ರಿವಾಲ್ ಮುಖ್ಯಮಂತ್ರಿಯಾಗಿದ್ದರು.

ಜನಲೋಕಪಾಲ ಮಸೂದೆ ಜಾರಿಗೆ ವಿಧಾನಸಭೆಯಲ್ಲಿ ಬೆಂಬಲ ಸಿಗದ ಕಾರಣ, ಕೇಜ್ರಿವಾಲ್ ಅವರು 2014ರಲ್ಲಿ ರಾಜೀನಾಮೆ ನೀಡಿದ್ದರು. ಹೀಗಾಗಿ, ಅವಧಿಗೂ ಮುನ್ನವೇ (2015ರಲ್ಲಿ) ವಿಧಾನಸಭೆಗೆ ಮರುಚುನಾವಣೆ ನಡೆದಿತ್ತು.

2015 ಹಾಗೂ 2020ರಲ್ಲಿ ಮತ್ತೆರಡು ಸಲ ಗೆದ್ದ ಕೇಜ್ರಿವಾಲ್, ಕ್ರಮವಾಗಿ 57,123 ಹಾಗೂ 46,578 ಮತಗಳನ್ನು ಗಳಿಸಿಕೊಂಡಿದ್ದರು. ಆದರೆ, 2015ರ ಹೊತ್ತಿಗೆ ಮತ್ತಷ್ಟು ಕುಸಿದ ಕಾಂಗ್ರೆಸ್ಗೆ ದಕ್ಕಿದ್ದು 4,781 ಮತಗಳಷ್ಟೇ. ಹಿಂದಿನ ಚುನಾವಣೆಯಲ್ಲಿ 3,220 ಮತಗಳನ್ನಷ್ಟೇ ಪಡೆದಿದೆ. ಹೀಗಾಗಿ, ದೀಕ್ಷಿತ್ ಎದುರು ಬೆಟ್ಟದಂತಹ ಸವಾಲು ಇದೆ.

ಸತತವಾಗಿ ಸೋಲು ಕಂಡರೂ, ಬಿಜೆಪಿಯ ಮತಗಳಿಕೆ ತೀರಾ ಎನ್ನುವಷ್ಟು ಕುಸಿದಿಲ್ಲ. 2015ರಲ್ಲಿ 25,630 ಮತಗಳನ್ನು ಪಡೆದಿದ್ದ ಕೇಸರಿ ಪಕ್ಷ, 2020ರಲ್ಲಿ 25,061 ಮತ ಗಳಿಸಿತ್ತು. ಈ ಬಾರಿ ಕೇಜ್ರಿವಾಲ್ ಕಾಲೆಳೆದು ಮೇಲೇರುವ ನಿಟ್ಟಿನಲ್ಲಿ ರಣತಂತ್ರ ರೂಪಿಸುತ್ತಿದೆ.
.Delhi Elections| ₹25 ಲಕ್ಷದವರೆಗೆ ಉಚಿತ ಆರೋಗ್ಯ ವಿಮೆ: ಕಾಂಗ್ರೆಸ್ ಗ್ಯಾರಂಟಿ.Delhi Elections 2025 | ಬಿಜೆಪಿಯಿಂದ 29 ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ.
ಜಂಗ್ಪುರದ ಅಂಕಿ–ಅಂಶ ಹೇಗಿದೆ?
ಹಣದ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿರುವ ಸಿಸೋಡಿಯಾ ಅವರಿಗೆ ಈ ಚುನಾವಣೆ ಪ್ರತಿಷ್ಠೆಯಾಗಿದೆ. ಕಳೆದ ಚುನಾವಣೆಗಳಲ್ಲಿ ಪತ್ಪಾರ್ಗಂಜ್ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಅವರು ಈ ಸಲ ಜಂಗ್ಪುರಕ್ಕೆ ಬಂದಿದ್ದಾರೆ.

1998ರಿಂದ ಸತತ ಮೂರು ಬಾರಿ ಕಾಂಗ್ರೆಸ್ನಿಂದ ಗೆದ್ದಿದ್ದ ತರ್ವಿಂದರ್ ಸಿಂಗ್ ಮರ್ವಾ ಅವರು ಈ ಬಾರಿ ಬಿಜೆಪಿಯಿಂದ ಸ್ಪರ್ಧಿಸಿದ್ದಾರೆ.

ಕಳೆದ ಚುನಾವಣೆಯಲ್ಲಿ ಕ್ರಮವಾಗಿ 27,977; 22,620 ಹಾಗೂ 13,565 ಮತಗಳು ಕಾಂಗ್ರೆಸ್ಗೆ ಸಿಕ್ಕಿದ್ದವು. ಎಎಪಿ ಮತಗಳಿಕೆಯು 2013ರಲ್ಲಿ 29,701 ರಷ್ಟು ಇದ್ದದ್ದು 2020ರ ಹೊತ್ತಿಗೆ 45,086ಕ್ಕೆ ಏರಿಕೆಯಾಗಿದೆ. ಬಿಜೆಪಿಯೂ ಅಲ್ಪ ಏರಿಕೆಯೊಂದಿಗೆ ಪ್ರತಿ ಸಲವೂ ಧನಾತ್ಮಕ ಫಲಿತಾಂಶವನ್ನು ಕಂಡು ಸಮಾಧಾನ ಪಟ್ಟುಕೊಂಡಿದೆ. ಈ ಪಕ್ಷ 2013ರಲ್ಲಿ 18,978; 2015ರಲ್ಲಿ 23,477 ಮತ್ತು 2020ರಲ್ಲಿ 29,070 ಮತಗಳನ್ನು ಬುಟ್ಟಿಗೆ ಹಾಕಿಕೊಂಡಿದೆ.

ಕಲ್ಕಾಜಿಯಲ್ಲಿ ಭಾರಿ ಕುಸಿತ ಕಂಡ ಕಾಂಗ್ರೆಸ್
ವಿಧಾನಸಭೆಗೆ ಪ್ರವೇಶಿಸಿದ ಮೊದಲ ಅವಧಿಯಲ್ಲೇ ಮುಖ್ಯಮಂತ್ರಿಯಾದವರು ಆತಿಶಿ. ಅವರು 2020ರಲ್ಲಿ ಕಲ್ಕಾಜಿಯಲ್ಲಿ ಗೆದ್ದಾಗ ಗಳಿಸಿದ ಮತಗಳ ಸಂಖ್ಯೆ 55,897. ಎರಡನೇ ಸ್ಥಾನ ಪಡೆದ ಬಿಜೆಪಿ ಅಭ್ಯರ್ಥಿ ಧರಮ್ಭೀರ್ ಅವರು 44,504 ಮತಗಳನ್ನು ಪಡೆದಿದ್ದರು.

ಎಎಪಿಯಿಂದ 2013ರಲ್ಲಿ ಸ್ಪರ್ಧಿಸಿದ್ದ ಧರ್ಮೇಂದ್ರ ಸಿಂಗ್ ಅವರು 28,639 ಮತ ಗಳಿಸಿದ್ದರು. ಆದರೆ, ಆ ಬಾರಿ ಎಸ್ಎಡಿ ಪಕ್ಷದ ಹರ್ಮೀತ್ ಸಿಂಗ್ ಕಲ್ಕಾ ಅವರು 30,683 ಮತ ಗಳಿಸಿ ಗೆಲುವು ಸಾಧಿಸಿದ್ದರು.

2015ರಲ್ಲಿ ಅವತಾರ್ ಸಿಂಗ್ ಅವರು 55,104 ಮತಗಳನ್ನು ಪಡೆಯುವ ಮೂಲಕ ಎಎಪಿಗೆ ಜಯ ತಂದುಕೊಟ್ಟಿದ್ದರು. ಬಿಜೆಪಿಯಿಂದ ಕಣದಲ್ಲಿದ್ದ ಹರ್ಮೀತ್ ಅವರು 35,335 ಮತ ಗಳಿಸಿ ಎರಡನೇ ಸ್ಥಾನಕ್ಕೆ ಕುಸಿದಿದ್ದರು.

2013ರಲ್ಲಿ 25,787 ಮತ ಪಡೆದಿದ್ದ ಕಾಂಗ್ರೆಸ್, 2015ರ ಹೊತ್ತಿಗೆ 13,552 ಮತಗಳಿಗೆ ಮತ್ತು 2020ರ ವೇಳೆಗೆ 4,965ಕ್ಕೆ ಕುಸಿದಿದೆ. ಈ ಅಂಕಿ–ಅಂಶವು 2025ರ ಚುನಾವಣೆಗೂ ಮುನ್ನ ಆ ಪಕ್ಷವನ್ನು ಎದೆಗುಂದುವಂತೆ ಮಾಡಿದೆ.
.ಕೊಳೆಗೇರಿ ನಿವಾಸಿಗಳ ಸಂಕಷ್ಟ ಪರಿಹರಿಸುವಲ್ಲಿ ಎಎಪಿ ವಿಫಲ: ವೀರೇಂದ್ರ ಸಚ್ದೇವ.ಕೇಜ್ರಿವಾಲ್ರಿಂದ ಕೊಳಗೇರಿಗಳ ಬಗ್ಗೆ ಸುಳ್ಳು ಹೇಳಿಕೆ: ವಿ.ಕೆ ಸಕ್ಸೇನಾ ಕಿಡಿ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.