ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆ ಕಣ ರಂಗೇರಿದೆ. ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಆಡಳಿತ ಹಾಗೂ ವಿರೋಧ ಪಕ್ಷಗಳು ಪರಸ್ಪರ ಟೀಕಾ ಪ್ರಹಾರವನ್ನು ತೀವ್ರಗೊಳಿಸಿವೆ. ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕ ಹಾಗೂ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು, ಕೊಳಗೇರಿ ನಿವಾಸಿಗಳು ಹಾಗೂ ಆರ್ಥಿಕವಾಗಿ ಹಿಂದುಳಿದ ಸಮುದಾಯದವರ ಹಕ್ಕುಗಳನ್ನು ಕಸಿದುಕೊಳ್ಳುವ ದೊಡ್ಡ ಸಂಚು ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.

ವಿಡಿಯೊ ಸಂದೇಶ ಹಂಚಿಕೊಂಡಿರುವ ಕೇಜ್ರಿವಾಲ್, ಪ್ರತಿಪಕ್ಷಗಳಿಗೆ ಸಂಬಂಧಿಸಿದ ವ್ಯಕ್ತಿಗಳು ₹ 3,000 ನೀಡುವ ಆಮಿಷ ಒಡ್ಡಿರುವುದಾಗಿ ಹಲವರು ತಮಗೆ ಕರೆ ಮಾಡಿ ಹೇಳಿದ್ದಾರೆ ಎಂದಿದ್ದಾರೆ.

'ಸರ್ವೆಂಟ್ ಕ್ವಾರ್ಟರ್ಸ್, ಧೋಬಿ ಘಾಟ್ ಮತ್ತು ಎಲ್ಲ ಕಡೆಗಳಿಂದ ಕರೆಗಳು ಬಂದಿವೆ. ವಿರೋಧ ಪಕ್ಷಗಳಿಗೆ ಸಂಬಂಧಿಸಿದವರು ಮನೆ ಮನೆಗಳಿಗೆ ತೆರಳಿ ಮಾತುಕತೆ ನಡೆಸಿದ್ದಾರೆ. ಜನರಿಗೆ ₹ 3,000 ನೀಡುವುದಾಗಿ ಆಮಿಷ ಒಡ್ಡಿದ್ದಾರೆ. ಹಾಗೆಯೇ, ಮತ ಹಾಕಿಸಿಕೊಳ್ಳಲು ಚುನಾವಣಾ ಆಯೋಗದವರೇ ನಿಮ್ಮ ಮನೆಗೆ ಬರಲಿದ್ದಾರೆ. ನಿಮ್ಮ ಬೆರಳಿಗೆ ಶಾಹಿ ಹಾಕುತ್ತಾರೆ ಎಂದು ಹೇಳಿದ್ದಾರೆ. ಇದನ್ನು ಕೇಳಿ ಚಕಿತನಾದೆ. ಇದು ಜನರ ವಿರುದ್ಧ ನಡೆಸುತ್ತಿರುವ ದೊಡ್ಡ ಸಂಚು' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿಮಗೆ ಗೊತ್ತಿಲ್ಲದೆ ಇಂತಹ ಕೃತ್ಯಗಳಲ್ಲಿ ಪಾಲ್ಗೊಂಡರೂ, ಕಾನೂನು ಕ್ರಮ ಎದುರಿಸಬೇಕಾದೀತು ಎಂದು ಜನರನ್ನು ಎಚ್ಚರಿಸಿದ್ದಾರೆ.

'ಒಂದು ವೇಳೆ ನೀವೇನಾದರೂ ಅರಿವಿಲ್ಲದೆ, ಹಣ ಪಡೆದು ಅದಕ್ಕೆ ಪ್ರತಿಯಾಗಿ ಬೆರಳಿಗೆ ಶಾಹಿ ಹಾಕಿಸಿಕೊಂಡರೆ ನಕಲಿ ಮತದಾನದಲ್ಲಿ ಪಾಲ್ಗೊಂಡ ಆರೋಪದಲ್ಲಿ ನಿಮ್ಮ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ನೀವು ಬಂಧನಕ್ಕೊಳಗಾಗಹುದು. ಇಂತಹ ಅಪರಾಧ ಕೃತ್ಯಗಳಲ್ಲಿ ಭಾಗಿಯಾದವರು 8–10 ವರ್ಷ ಜೈಲ ಶಿಕ್ಷೆ ಅನುಭವಿಸಿದ್ದಾರೆ' ಎಂದು ಎಚ್ಚರಿಕೆ ನೀಡಿದ್ದಾರೆ.
.Delhi Polls | ‘ಎಕ್ಸ್’ನಲ್ಲಿ #AmitShahKiGoondagardi ಅಭಿಯಾನ ಆರಂಭಿಸಿದ AAP.ಕೋಟ್ಯಧಿಪತಿಗಳ ಸಾಲ ಮನ್ನಾ ನಿಷೇಧಿಸುವ ಕಾನೂನು ರೂಪಿಸಿ: ಮೋದಿಗೆ ಕೇಜ್ರಿವಾಲ್ ಪತ್ರ.
ಇಂತಹ ಬಲೆಯಲ್ಲಿ ಬೀಳದಿರಿ ಎಂದು ಕರೆ ನೀಡಿರುವ ಕೇಜ್ರಿವಾಲ್, ಹಲವು ಪ್ರದೇಶಗಳಲ್ಲಿ ಇಂತಹ ಅಕ್ರಮ ಚಟುವಟಿಕೆಗಳು ನಡೆಯುವುದನ್ನು ಮಾಧ್ಯಮಗಳು ಬೆಳಕಿಗೆ ತರಬಹುದು ಎಂದು ಹೇಳಿದ್ದಾರೆ.

'ಅವರು (ವಿರೋಧ ಪಕ್ಷದವರು) ನಿಮಗೆ ಉಚಿತವಾಗಿ ಹಣ ಕೊಟ್ಟರೆ ತೆಗೆದುಕೊಳ್ಳಿ. ಆದರೆ, ನಿಮ್ಮ ಬೆರಳುಗಳಿಗೆ ಶಾಯಿ ಹಾಕಲು ಬಿಡಬೇಡಿ. ಅದರಿಂದ ನಿಮಗೆ ಜೀವನದುದ್ದಕ್ಕೂ ತೊಂದರೆಯಾಗಬಹುದು' ಎಂದಿದ್ದಾರೆ. ನಿರ್ದಿಷ್ಟವಾಗಿ ಯಾವುದೇ ಪಕ್ಷದ ಹೆಸರನ್ನು ಉಲ್ಲೇಖಿಸದ ಕೇಜ್ರಿವಾಲ್, ತಪ್ಪಿತಸ್ಥರು ಕಾನೂನು ಕ್ರಮ ಎದುರಿಸಲಿದ್ದಾರೆ ಎಂದು ಒತ್ತಿ ಹೇಳಿದ್ದಾರೆ.

ಬಳಿಕ ಬಿಜೆಪಿ ವಿರುದ್ಧ ನೇರ ಆರೋಪ ಮಾಡಿದ ಕೇಜ್ರಿವಾಲ್, 'ಬಿಜೆಪಿ ಅಧಿಕಾರಕ್ಕೇರಿದರೆ ನಿಮ್ಮ ಕೊಳಗೇರಿಗಳು ಉಳಿಯುವುದಿಲ್ಲ. ಅವನ್ನೆಲ್ಲ ನಾಶ ಮಾಡಿ, ತನ್ನ ಶ್ರೀಮಂತ ಮಿತ್ರರಿಗೆ ಹಂಚಲಿದೆ. ಅದರ ಬದಲು ನೀವು ನನ್ನ ಕೈಗಳನ್ನು ಬಲಪಡಿಸಿದರೆ, ಎಎಪಿ ಸರ್ಕಾರ ರಚನೆಯಾದರೆ, ಕೊಳಗೇರಿಗಳನ್ನು ನಾಶ ಮಾಡಲು ಯಾರಿಗೂ ಬಿಡುವುದಿಲ್ಲ' ಎಂದು ಭರವಸೆ ನೀಡಿದ್ದಾರೆ.

ಎಎಪಿಯು ರಾಷ್ಟ್ರ ರಾಜಧಾನಿಯಲ್ಲಿ ಸತತ ಮೂರನೇ ಅವಧಿಗೆ ಸರ್ಕಾರ ರಚಿಸುವ ಹುಮ್ಮಸ್ಸಿನಲ್ಲಿದೆ. 70 ಸದಸ್ಯ ಬಲದ ದೆಹಲಿ ವಿಧಾನಸಭೆಗೆ ಫೆಬ್ರುವರಿ 5ರಂದು ಮತದಾನ ನಡೆದು, 8ರಂದು ಫಲಿತಾಂಶ ಪ್ರಕಟವಾಗಲಿದೆ. 699 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
.ಹೃದಯವಂತ ದೆಹಲಿ ಜನರಿಗೆ ಬಿಜೆಪಿ ಸರ್ಕಾರ ಬೇಕು: ಹೊಸ ಪ್ರಚಾರ ಗೀತೆ ಬಿಡುಗಡೆ.ದೆಹಲಿಯ ಯಾವುದೇ ಕೊಳಗೇರಿ ಕೆಡವಲ್ಲ, ಕಲ್ಯಾಣ ಕಾರ್ಯಕ್ರಮ ನಿಲ್ಲಿಸಲ್ಲ: ಮೋದಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.