ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನೇತಾಜಿಯವರ ‘ಬೇಬಿ ಆಸ್ಟಿನ್‘ ಕಾರನ್ನು ಕಟಕ್‌ಗೆ ತರಲು ಮನವಿ

Last Updated 23 ಜನವರಿ 2023, 12:49 IST
ಅಕ್ಷರ ಗಾತ್ರ

ಭುವನೇಶ್ವರ: ಬಿಜು ಪಟ್ನಾಯಕ್ ಅವರ ಡಕೋಟಾ ವಿಮಾನವನ್ನು ವಿಮಾನ ನಿಲ್ದಾಣದಲ್ಲಿ ಜನರ ವೀಕ್ಷಣೆಗೆ ಇರಿಸಲು ಒಡಿಶಾ ಸರ್ಕಾರ ಸಿದ್ಧತೆ ನಡೆಸಿರುವ ಬೆನ್ನಲ್ಲೇ ಸುಭಾಶ್ ಚಂದ್ರ ಬೋಸ್ ಅವರ ಕಾರನ್ನೂ ಸಹ ತರಲು ಒತ್ತಡ ಹೆಚ್ಚಾಗಿದೆ.

ಕಟಕ್‌ನ ಒಡಿಯಾ ಬಜಾರ್‌ನಲ್ಲಿರುವ ಸುಭಾಶ್ ಚಂದ್ರ ಬೋಸ್ ಅವರ ಜನ್ಮಸ್ಥಳ ಜಾನಕಿನಾಥ ಭವನಕ್ಕೆ ಅವರು ಬಳಸುತ್ತಿದ್ದ ಬೇಬಿ ಆಸ್ಟಿನ್ ಕಾರನ್ನು ತರಬೇಕೆಂಬ ಒತ್ತಾಯ ಕೇಳಿಬಂದಿದೆ.

ಕಟಕ್ ಮೂಲದ ನೇತಾಜಿ ಫೌಂಡೇಶನ್ ಈ ಕುರಿತಂತೆ ಅಲ್ಲಿನ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ.

ಸ್ವಾತಂತ್ರ್ಯ ಹೋರಾಟಗಾರ ಸುಭಾಶ್ ಚಂದ್ರ ಬೋಸ್ ಅವರು, 1930ರಿಂದ 1941ರವರೆಗೆ ಈ ಕಾರನ್ನು ಬಳಸಿದ್ದರು. ಇದೇ ಕಾರಲ್ಲಿ ಕೋಲ್ಕತ್ತದಿಂದ ಬರ್ಮಾಗೂ(ಇವತ್ತಿನ ಮ್ಯಾನ್ಮಾರ್) ತೆರಳಿದ್ದರು. ಆದರೆ, ಈಗ ಆ ಕಾರು ಎಲ್ಲಿದೆ ಎಂಬ ಬಗ್ಗೆ ಮಾಹಿತಿ ಲಭ್ಯವಿಲ್ಲ.

ಧಾನ್‌ಬಾದ್‌ನ ಕೋಕ್ ಪ್ಲಾಂಟ್‌ನಲ್ಲಿ ಕಾರು ಇರುವ ಬಗ್ಗೆ 2014ರಲ್ಲಿ ವರದಿಯಾಗಿತ್ತು ಎಂದು ಮನವಿಯಲ್ಲಿ ತಿಳಿಸಲಾಗಿದೆ.

‘ಒಡಿಶಾ ಸರ್ಕಾರವು ಬಿಜು ಅವರ ಡಕೋಟ ವಿಮಾನವನ್ನು ಕೋಲ್ಕತ್ತದಿಂದ ಕಟಕ್‌ಗೆ ತಂದಿದೆ. ಅದೇ ರೀತಿ ಸರ್ಕಾರವು ನೇತಾಜಿ ಕಾರನ್ನೂ ತಂದು ಅವರ ಜನ್ಮಸ್ಥಳದಲ್ಲಿ ಸಾರ್ವಜನಿಕರ ವೀಕ್ಷಣೆಗೆ ಇಡಬೇಕು. ಇದು ಸ್ವಾತಂತ್ರ್ಯ ಹೋರಾಟಗಾರರಿಗೆ ಕೊಡುವ ದೊಡ್ಡ ಗೌರವವಾಗಿದೆ’ ಎಂದು ಫೌಂಡೇಶನ್‌ನ ಸಂಚಾಲಕರಾದ ಜಿನೇಶ್ ದಾಸ್ ಮತ್ತು ಬಿಕಿ ಚಕ್ರವರ್ತಿ ಹೇಳಿದ್ದಾರೆ.

ಇಂದು ನೇತಾಜಿ ಅವರ 126ನೇ ಜನ್ಮ ಜಯಂತಿಯಾಗಿದ್ದು, ಇದೇ ದಿನ ಅವರ ಕಾರನ್ನು ತರಬೇಕೆಂಬ ಒತ್ತಾಯ ಕೇಳಿಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT