ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀದಿ ಹೊಡೆದರೆ ಅದನ್ನು ಆಶೀರ್ವಾದ ಎಂಬಂತೆ ಸ್ವೀಕರಿಸುವೆ: ನರೇಂದ್ರ ಮೋದಿ  

Last Updated 9 ಮೇ 2019, 9:01 IST
ಅಕ್ಷರ ಗಾತ್ರ

ಪುರುಲಿಯ: ನಾನು ಅವರನ್ನುದೀದಿ ಎಂದು ಕರೆದು ಗೌರವಿಸುತ್ತೇನೆ.ಆಕೆ ಹೊಡೆದರೆ ಅದು ನನಗೆ ಆಶೀರ್ವಾದ ಮಾಡಿದಂತೆ. ಆಕೆಯ ಹೊಡೆತ ತಿನ್ನಲು ನಾನು ಸಿದ್ಧಎಂದು ನರೇಂದ್ರ ಮೋದಿ ಹೇಳಿದ್ದಾರೆ.

ಪಶ್ಚಿಮ ಬಂಗಾಳದ ಪುರುಲಿಯದಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಮೋದಿ, ಚಿಟ್‌ಫಂಡ್ ಹೆಸರಿನಲ್ಲಿ ಜನರನ್ನು ಲೂಟಿ ಮಾಡಿದವರಿಗೆ ಹೊಡೆಯುವ ಧೈರ್ಯವನ್ನು ಮಮತಾ ತೋರಿಸಿದ್ದರೆ ಆಕೆ ಇಷ್ಟೊಂದು ಹೆದರುತ್ತಿರಲ್ಲಿಲ್ಲ.ಮಮತಾ ದೀದಿ ಮಾ, ಮಾಟಿ, ಮನುಷ್ಯ (ತಾಯಿ,ಮಣ್ಣು, ಮನುಷ್ಯ)ರ ಹೆಸರಿನಲ್ಲಿ ಮತ ಪಡೆದರು.ಆದರೆ ಪಶ್ಚಿಮ ಬಂಗಾಳದ ಈಗಿನ ಸ್ಥಿತಿ ಹೇಗಿದೆ? ಅಮ್ಮ ಇಲ್ಲಿನ ಮಕ್ಕಳ ರಕ್ಷಣೆಯ ಬಗ್ಗೆ ಚಿಂತಿತಳಾಗಿದ್ದಾಳೆ.ಪ್ರಜಾಪ್ರಭುತ್ವವನ್ನು ಪ್ರೀತಿಸುವ ಜನರ ರಕ್ತದಿಂದ ಇಲ್ಲಿನ ಮಣ್ಣು ಕೆಂಪಾಗಿದೆ.ಜನರು ಭಯಭೀತರಾಗಿದ್ದಾರೆ.
ಭಯವಿಲ್ಲದೆ ಬದುಕುವ ಭಾರತವನ್ನು ಗುರುದೇವ್ ರವೀಂದ್ರನಾಥ್ ಬಯಸಿದ್ದರು. ಆದರೆ ಮೊದಲು ಕಾಂಗ್ರೆಸ್ಆನಂತರ ಕಮ್ಯೂನಿಸ್ಟ್ ಪಕ್ಷ ಅವರ ಪಾಠಗಳನ್ನು ಹರಿದು ಹಾಕಿದವು. ಇಲ್ಲಿ ಮತದಾನ ಮಾಡುವುದಕ್ಕಿಂತ ಮೊದಲು ಮತದಾರರು ಎರಡು ಬಾರಿ ಯೋಚಿಸಬೇಕು.ರಾಜಕೀಯ ಕಾರ್ಯಕರ್ತರನ್ನು ಇಲ್ಲಿ ಹತ್ಯೆ ಮಾಡಲಾಗುತ್ತದೆ.

ಪುರುಲಿಯದಲ್ಲಿ ಅಧಿಕ ಸಂಪನ್ಮೂಲವಿದೆ.ಆದರೆ ಇಲ್ಲಿನ ಸರ್ಕಾರ ಕಲ್ಲಿದ್ದಲು ಮಾಫಿಯಾ ಮಾಡಿದೆ.ಮಾಫಿಯಾ ತೃಣಮೂಲದ ಭಾಗವೇ ಆಗಿಬಿಟ್ಟಿದೆ. ಮಾಫಿಯಾ ವಿರುದ್ಧ ಹೋರಾಡಿದವರು ಪ್ರಜಾಪ್ರಭುತ್ವಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗಮಾಡಿದ್ದಾರೆ. ಅವರ ಬಲಿದಾನ ವ್ಯರ್ಥವಾಗಬಾರದು ಎಂದಿದ್ದಾರೆ ಮೋದಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT