ನವದೆಹಲಿ: ಆಮ್ ಆದ್ಮಿ ಪಕ್ಷವು ಕೇಂದ್ರದ ಎನ್ಡಿಎ ಸರ್ಕಾರದ ವಿರುದ್ಧ ಗಟ್ಟಿ ಧ್ವನಿಯಾಗಿದೆ. ಹೀಗಾಗಿಯೇ ಎಎಪಿ ನಾಯಕ ಸೌರಭ್ ಭಾರದ್ವಾಜ್ ಮನೆ ಮೇಲೆ ಜಾರಿ ನಿರ್ದೇಶನಾಲಯದ(ಇ.ಡಿ) ದಾಳಿ ನಡೆದಿದೆ ಎಂದು ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಆರೋಪಿಸಿದ್ದಾರೆ.

ಸೌರಭ್ ಭಾರದ್ವಾಜ್ ಮನೆ ಮೇಲಿನ ಇ.ಡಿ ದಾಳಿಯು ಕೇಂದ್ರ ಸರ್ಕಾರವು ತನಿಖಾ ಸಂಸ್ಥೆಯನ್ನು ದುರುಪಯೋಗಪಡಿಸಿಕೊಂಡ ಮತ್ತೊಂದು ಪ್ರಕರಣ ಎಂದು ದೂರಿದ್ದಾರೆ. ಈ ಹಿಂದೆ ಯಾವುದೇ ಪಕ್ಷ ಬಿಜೆಪಿ ರೀತಿ ಎಎಪಿಯನ್ನು ಟಾರ್ಗೆಟ್ ಮಾಡಿರಲಿಲ್ಲ ಎಂದಿದ್ದಾರೆ.

ಕೇಂದ್ರದ ಮೋದಿ ಸರ್ಕಾರದ ತಪ್ಪು ನೀತಿಗಳು ಮತ್ತು ಭ್ರಷ್ಟಾಚಾರದ ವಿರುದ್ಧ ಎಎಪಿ ಗಟ್ಟಿ ಧ್ವನಿಯಾಗಿದೆ. ನಮ್ಮ ಧ್ವನಿ ನಿಗ್ರಹಿಸಲು ಬಿಜೆಪಿ ಯತ್ನಿಸುತ್ತಿದೆ. ಆದರೆ, ಅದು ಸಾಧ್ಯವಿಲ್ಲ ಎಂದಿದ್ದಾರೆ.

ಬಿಜೆಪಿ ದಾಳಿಗಳಿಗೆ ಎಎಪಿ ಭಯಪಡುವುದಿಲ್ಲ. ಈ ಹಿಂದಿನಂತೆಯೇ ಕೇಂದ್ರದ ತಪ್ಪು ನೀತಿಗಳು ಮತ್ತು ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತುವುದನ್ನು ಮುಂದುವರಿಸುತ್ತೇವೆ ಎಂದು ಕೇಜ್ರಿವಾಲ್ ಗುಡುಗಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ ಪದವಿ ನಕಲಿ ಎಂಬ ಕುರಿತು ಸೋಮವಾರ ದೊಡ್ಡ ಸುದ್ದಿ ಹೊರಬಂದ ಹಿನ್ನೆಲೆಯಲ್ಲಿ ಗಮನ ಬೇರೆಡೆ ಸೆಳೆಯಲು ಈ ದಾಳಿ ನಡೆಯುತ್ತಿದೆ. ಮೋದಿಯವರು ಪಡೆದಿದ್ದಾರೆನ್ನಲಾದ ಪದವಿ ನಕಲಿ. ಅವರು ದೇಶದ ಜನತೆಗೆ ಸುಳ್ಳು ಹೇಳಿದ್ದಾರೆ ಎಂದು ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾ ಆರೋಪಿಸಿದ್ದಾರೆ.
.ಹಣ ಅಕ್ರಮ ವರ್ಗಾವಣೆ: ಮಾಜಿ ಸಚಿವ ಸೌರಭ್ಗೆ ಸಂಬಂಧಿಸಿದ ಸ್ಥಳಗಳ ಮೇಲೆ ED ದಾಳಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.