ನವದೆಹಲಿ: ಡಾಲರ್ ಎದುರು ರೂಪಾಯಿ ₹90ಕ್ಕೆ ಕುಸಿದ ಬೆನ್ನಲ್ಲೇ ಬಿಜೆಪಿ ವಿರುದ್ಧ ಹರಿಹಾಯ್ದಿರುವ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ‘ಡಾ. ಮನಮೋಹನ ಸಿಂಗ್ ಅವರ ಕಾಲದಲ್ಲಿ ಅಬ್ಬರಿಸುತ್ತಿದ್ದವರು ಈಗೇನು ಹೇಳುತ್ತಾರೆ’ ಎಂದಿದ್ದಾರೆ.

ಗುರುವಾರವೂ ರೂಪಾಯಿ ಮೌಲ್ಯ ಮತ್ತೆ 28 ಪೈಸೆ ಕುಸಿದಿದೆ. ಆ ಮೂಲಕ ಸರ್ವಕಾಲಿಕ ಕುಸಿತ ₹90.43 ದಾಖಲಿಸಿದೆ.

ಈ ಕುರಿತು ಸಂಸತ್ ಭವನ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಾಂಕಾ, ‘ಕೆಲ ವರ್ಷಗಳ ಹಿಂದೆ ಡಾ. ಮನಮೋಹನ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಡಾಲರ್ ಎದುರು ರೂಪಾಯಿ ಕುಸಿದಿತ್ತು. ಆಗ ಇದೇ ಜನ ಏನಂದಿದ್ದರು? ಅವರ ಉತ್ತರ ಈಗ ಏನು? ರೂಪಾಯಿ ಬೆಲೆ ಏಕೆ ಕುಸಿಯುತ್ತಿದೆ ಎಂದು ಆಡಳಿತದಲ್ಲಿರುವ ಬಿಜೆಪಿಯವರನ್ನು ಕೇಳಿ. ನನ್ನನ್ನೇನು ಕೇಳುತ್ತೀರಿ?‘ ಎಂದಿದ್ದಾರೆ.

ಹಣಕಾಸು ನೀತಿ ಸಮಿತಿ (MPC) ನಿರ್ಧಾರಕ್ಕೂ ಮೊದಲೇ ಕೇಂದ್ರೀಯ ಬ್ಯಾಂಕ್ ಮಧ್ಯಪ್ರವೇಶಕ್ಕೆ ಒಲವು ತೋರದ ಕಾರಣ ವಿದೇಶಿ ವಿನಿಮಯ ವ್ಯಾಪಾರಿಗಳಿಂದ, ಆಮದುದಾರರಿಂದ ಡಾಲರ್ಗೆ ಬೇಡಿಕೆ ಹೆಚ್ಚಳವಾಗಿದೆ. ಇದರಿಂದ ಸ್ಥಳೀಯ ಕರೆನ್ಸಿ ಮೇಲೆ ಒತ್ತಡ ಹೆಚ್ಚಾಗಿದೆ.
.Rupee vs Dollar: ತೂರಾಡುತ್ತ ‘ನೈಂಟಿಗೆ’ ಕುಸಿದ ರೂಪಾಯಿ!.ರೂಪಾಯಿ ಮೌಲ್ಯ ಇಳಿಕೆ: ಸರ್ಕಾರಕ್ಕೆ ನಿದ್ದೆಗೆಡುವ ಸ್ಥಿತಿ ಉಂಟಾಗಿಲ್ಲ: ಸಿಇಎ.ಆರ್ಥಿಕತೆ ಏರುತ್ತಿದ್ದರೂ ರೂಪಾಯಿ ಮುಗ್ಗರಿಸುತ್ತಲೇ ಇದೆ; ಏಕೆ? ಇಲ್ಲಿದೆ ಕಾರಣ....ಷೇರುಪೇಟೆ ಸೂಚ್ಯಂಕಗಳ ಇಳಿಕೆ: ಅಮೆರಿಕ ಡಾಲರ್ ಎದುರು ರೂಪಾಯಿ ಮೌಲ್ಯವೂ ಕುಸಿತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.