ಪಟ್ನಾ: ಬಿಹಾರ ಚುನಾವಣೆಯಲ್ಲಿ ಬಳಕೆ ಮಾಡಲಾದ ಪ್ರತಿ ವಿದ್ಯುನ್ಮಾನ ಮತಯಂತ್ರಗಳಲ್ಲಿ (ಇವಿಎಂ) ಮತದಾನಕ್ಕೂ ಮುಂಚಿತವಾಗಿ 25 ಸಾವಿರ ಮತಗಳನ್ನು ಹೊಂದಲಾಗಿತ್ತು ಎಂಬ ಆರ್ಜೆಡಿ ನಾಯಕ ಜನದಾನಂದ್ ಸಿಂಗ್ ಆರೋಪವನ್ನು ಚುನಾವಣಾ ಆಯೋಗವು ತಳ್ಳಿ ಹಾಕಿದೆ.

ಈ ಆರೋಪ ನಿರಾಧಾರವಾಗಿದ್ದು, ತಾಂತ್ರಿಕವಾಗಿ ಅಸಾಧ್ಯ ಎಂದು ಸ್ಪಷ್ಟನೆ ನೀಡಿದೆ.

'ಇವಿಎಂಗಳಲ್ಲಿ ವೈಫೈ, ಬ್ಲೂಟೂತ್, ಇಂಟರ್ನೆಟ್ ಅಥವಾ ಯಾವುದೇ ಬಾಹ್ಯ ಸಂಪರ್ಕಗಳಿಲ್ಲ. ಹಾಗಾಗಿ ರಿಮೋಟ್ ಅಥವಾ ಡಿಜಿಟಲ್ ಟ್ಯಾಂಪರಿಂಗ್ ಅಸಾಧ್ಯ. ಮತದಾನ ಆರಂಭಕ್ಕೂ ಮುನ್ನ ಪ್ರತಿ ಅಭ್ಯರ್ಥಿಗೆ 'ಶೂನ್ಯ' ಮತಗಳನ್ನು ಪ್ರದರ್ಶಿಸುತ್ತದೆ. ರಾಜಕೀಯ ಪಕ್ಷಗಳ ಏಜೆಂಟ್ಗಳ ಸಮ್ಮುಖದಲ್ಲಿ ಅಣಕು ನಡೆಸಲಾಗುತ್ತದೆ. ಬಳಿಕ ಜಂಟಿ ಸಹಿ ಹಾಕಲಾಗುತ್ತದೆ' ಎಂದು ಆಯೋಗ ಸ್ಪಷ್ಟನೆ ನೀಡಿದೆ.

ಮತದಾನಕ್ಕೂ ಮುನ್ನ ಪ್ರತಿಯೊಂದು ಇವಿಎಂಗಳಲ್ಲಿ 25 ಸಾವಿರ ಮತಗಳನ್ನು ಮುಂಚಿತವಾಗಿ ತೋರಿಸುತ್ತಿತ್ತು ಎಂದು ಜಗದಾನಂದ್ ಸಿಂಗ್ ಆರೋಪ ಮಾಡಿದ್ದರು.

ಚುನಾವಣೆಯಲ್ಲಿ ವ್ಯಾಪಕವಾಗಿ ಅಕ್ರಮ ನಡೆದಿದೆ. ಫಲಿತಾಂಶವು ಜನರ ಜನಾದೇಶವನ್ನು ಪ್ರತಿಬಿಂಬಿಸುವುದಿಲ್ಲ. ಇದರ ವಿರುದ್ಧ ಪಕ್ಷವು ನ್ಯಾಯಾಲಯದ ಮೊರೆ ಹೋಗಬೇಕು ಎಂದು ಜನದಾನಂದ್ ಆಗ್ರಹಿಸಿದ್ದರು.

ಇತ್ತೀಚೆಗೆ ನಡೆದ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಪ್ರದರ್ಶನ ನೀಡಿದ ಆರ್ಜೆಡಿ 25 ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸಿತ್ತು.
.Bihar Result 2025 | ಮಹಿಳೆಯರ ಬೆಂಬಲ: ನಿತೀಶ್ಗೆ ಬಿ‘ಹಾರ’; ಪ್ರಮುಖ ಅಂಶಗಳು.Bihar Election Results: ಮತ್ತೆ ಎನ್ಡಿಎಗೆ ಬಿ‘ಹಾರ’?ಮತ ಎಣಿಕೆಯ ಪ್ರಮುಖಾಂಶಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.