ಸಂಸತ್ತಿನ ಒಳಗೆ ರಾಹುಲ್ ದೈಹಿಕ ಶಕ್ತಿಯನ್ನು ಬಳಸುತ್ತಿದ್ದಾರೆ. ನೀವು ಸಂಸತ್ತಿನಲ್ಲಿ ದೈಹಿಕ ಸಾಮರ್ಥ್ಯ ಪರೀಕ್ಷೆ ಮಾಡಲಿದ್ದೀರಾ? ಆಗ ಕುಸ್ತಿಪಟುಗಳು, ಗೂಂಡಾಗಳು ಸೇರುತ್ತಾರೆ. ಸಂಸತ್ತನ್ನು ಕಾಂಗ್ರೆಸ್ ಎಲ್ಲಿಗೆ ಕೊಂಡೊಯ್ಯುತ್ತಿದೆ? ಘಟನೆ ಬಗ್ಗೆ ವಿಪಕ್ಷ ನಾಯಕ ಕ್ಷಮೆಯಾಚಿಸುವ ವಿಶ್ವಾಸ ಇದೆ.
–ಶಿವರಾಜ ಸಿಂಗ್ ಚೌಹಾಣ್, ಕೇಂದ್ರ ಕೃಷಿ ಸಚಿವ
‘ಖರ್ಗೆ ತಳ್ಳಿದ ಬಿಜೆಪಿ ಸಂಸದರು’
‘ಉದ್ಯಮಿ ಗೌತಮ್ ಅದಾನಿ ಲಂಚ ಪ್ರಕರಣದ ವಿರುದ್ಧ ಅಧಿವೇಶನದ ಮೊದಲ ದಿನದಿಂದಲೂ ನಾವು ಪ್ರತಿಭಟನೆ ನಡೆಸುತ್ತಿದ್ದೆವು. ಇಂದಿನ ಬೆಳವಣಿಗೆ ಅದಾನಿ ವಿಷಯದ ಚರ್ಚೆಯನ್ನು ದಿಕ್ಕು ತಪ್ಪಿಸುವ ಪ್ರಯತ್ನ. ಪ್ರಧಾನಿ ಮೋದಿ ಅವರ ಸ್ನೇಹಿತನ ವಿರುದ್ಧದ ಪ್ರಕರಣದಿಂದ ಗಮನವನ್ನು ಬೇರೆಡೆಗೆ ಸೆಳೆಯಲು ಬಿಜೆಪಿ ಹೊಸ ಗೊಂದಲ ಸೃಷ್ಟಿಸುತ್ತಿದೆ.