ವಿರುಧುನಗರ/ತಮಿಳುನಾಡು: ಶಿವಕಾಶಿಯ ಪಟಾಕಿ ತಯಾರಿಕಾ ಘಟಕವೊಂದರಲ್ಲಿ ಮಂಗಳವಾರ ಬೆಳಿಗ್ಗೆ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ 8 ಮಂದಿ ಮೃತಪಟ್ಟು, ಅನೇಕರು ಗಾಯಗೊಂಡಿದ್ದಾರೆ.

ಆರ್. ರಾಮಲಿಂಗಂ, ಸಿ.ಚೆಲ್ಲಪಾಂಡಿಯನ್, ಕೆ.ಲಕ್ಷ್ಮಿ, ಆರ್.ರಾಮಮೂರ್ತಿ, ಆರ್.ಪುಣ್ಯಮೂರ್ತಿ, ಕೆ. ರಾಮಜಯಂ, ಎಂ. ನಾಗಪಾಂಡಿ ಮತ್ತು ಜಿ. ವೀರಮಣಿ ಮೃತಪಟ್ಟವರು.

ಕಾರ್ಮಿಕರು ಘಟಕದಲ್ಲಿ ಕೆಲಸ ಮಾಡುತ್ತಿದ್ದಾಗ ದಿಢೀರ್ ಸ್ಫೋಟ ಸಂಭವಿಸಿದೆ. ಕಟ್ಟಡದಿಂದ ಎದ್ದ ದಟ್ಟ ಹೊಗೆ ಬಹು ದೂರದವರೆಗೆ ಕಾಣಿಸುತ್ತಿತ್ತು. ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಘಟನೆಯಲ್ಲಿ ಮೃತಪಟ್ಟ ವ್ಯಕ್ತಿಗಳ ಕುಟುಂಬಕ್ಕೆ ತಲಾ ₹4 ಲಕ್ಷ, ಗಂಭೀರವಾಗಿ ಗಾಯಗೊಂಡವರಿಗೆ ತಲಾ ₹1 ಲಕ್ಷ ಮತ್ತು ಇತರೆ ಗಾಯಾಳುಗಳಿಗೆ ₹50 ಸಾವಿರ ಪರಿಹಾರವನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಘೋಷಿಸಿದ್ದಾರೆ. ಪಟಾಕಿ ತಯಾರಿಕಾ ಘಟಕವು, ಶಿವಕಾಶಿ ಸಮೀಪದ ಚಿನ್ನಕಮನಪಟ್ಟಿಯಲ್ಲಿದ್ದು, ಅಧಿಕಾರಿಗಳು ಪರಿಶೀಲನೆ ನಡೆಸಿದರು.
.Bengaluru Stampede: IPS ಅಧಿಕಾರಿ ವಿಕಾಸ್ ಕುಮಾರ್ ಅಮಾನತು ರದ್ದುಪಡಿಸಿದ ಸಿಎಟಿ.ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆ, ಪ್ರವಾಹ | ವ್ಯಕ್ತಿ ಸಾವು: 12 ಮಂದಿ ನಾಪತ್ತೆ.ದೊಡ್ಡಬಳ್ಳಾಪುರ | ಇನ್ನೋವಾ ಕಾರು ಅಪಘಾತ: ಐವರು ಸ್ಥಳದಲ್ಲೇ ಸಾವು.Doctor's Day | ವೈದ್ಯರಿಗೆ ಶುಭಾಶಯ ಕೋರಿದ ಪ್ರಧಾನಿ ಮೋದಿ, ಸಿಎಂ ಸಿದ್ದರಾಮಯ್ಯ.ತಮಿಳುನಾಡು ಲಾಕಪ್ ಡೆತ್ ಪ್ರಕರಣ: ನ್ಯಾಯಾಂಗ ತನಿಖೆಗೆ ಹೈಕೋರ್ಟ್ ಆದೇಶ.ಉತ್ತರ ಪ್ರದೇಶ | BSF ಯೋಧನ ಪತ್ನಿ ಮೇಲೆ ಮೈದುನರಿಂದ ಅತ್ಯಾಚಾರ, ಹಲ್ಲೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.