ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸುಂದರವಾಗಿರುವ ಯುವತಿಯರು ರೈತರ ಮಗನನ್ನು ಮದುವೆಯಾಗುವುದಿಲ್ಲ: ಶಾಸಕ ದೇವೇಂದ್ರ

Published : 2 ಅಕ್ಟೋಬರ್ 2024, 15:42 IST
Last Updated : 2 ಅಕ್ಟೋಬರ್ 2024, 15:42 IST
ಫಾಲೋ ಮಾಡಿ
Comments

ಅಮರಾವತಿ: ಸುಂದರವಾಗಿ ಕಾಣುವ ಹಾಗೂ ಉದ್ಯೋಗದಲ್ಲಿ ಇರುವ ಯುವತಿಯರು ರೈತರ ಮಗನನ್ನು ಮದುವೆಯಾಗಲು ಒಪ್ಪುವುದಿಲ್ಲ ಎಂದು ಮಹಾರಾಷ್ಟ್ರದ ಪಕ್ಷೇತರ ಶಾಸಕ ದೇವೇಂದ್ರ ಭುಯಾರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ವರುದ್ ತಹಸಿಲ್‌ನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸುಂದರ ಮತ್ತು ಉದ್ಯೋಗದಲ್ಲಿರುವ ಯುವತಿಯು ಗಂಡನನ್ನು ಆಯ್ಕೆ ಮಾಡುವಾಗ ನನ್ನ ಹಾಗೂ ನಿಮ್ಮಂತಹವರನ್ನು(ರೈತರ ಕುಟುಂಬದ ಮಗನನ್ನು) ಆರಿಸಿಕೊಳ್ಳುವುದಿಲ್ಲ ಎಂದಿದ್ದರು.

ಎರಡನೇ ಸ್ಥಾನದಲ್ಲಿರುವ ಯುವತಿಯರು ಕಿರಾಣಿ ಅಂಗಡಿ ಅಥವಾ ಇತರೆ ಅಂಗಡಿ ಹೊಂದಿರುವವರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಮೂರನೇ ಸ್ಥಾನದಲ್ಲಿರುವ ನೋಡಲು ಸುಂದರವಾಗಿಲ್ಲದ ಹಾಗೂ ಮನೆಯಲ್ಲಿರುವ ಯುವತಿಯರು ಮಾತ್ರವೇ ರೈತರ ಮಗನನ್ನು ಮದುವೆಯಾಗುತ್ತಾರೆ ಎಂದು ದೇವೇಂದ್ರ ಮಂಗಳವಾರ ಹೇಳಿದ್ದಾರೆ.

ದೇವೇಂದ್ರ ಭುಯಾರ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಚಿವೆ ಯಶೋಮತಿ ಠಾಕೂರ್, ‘ಹೆಣ್ಣು ಮಕ್ಕಳ ಬಗ್ಗೆ ಹಗುರವಾಗಿ ಮಾತನಾಡಿರುವುದು ಸ್ವೀಕಾರರ್ಹವಲ್ಲ. ಹೆಣ್ಣು ಮಕ್ಕಳ ಬಗ್ಗೆ ಮಾತನಾಡುವಾಗ ಭಾಷೆ ಮೇಲೆ ಹಿಡಿತವಿರಲಿ’ ಎಂದು ಕಿಡಿಕಾರಿದ್ದಾರೆ.

‘ಡಿಸಿಎಂ ಅಜಿತ್ ಪವಾರ್ ಅವರು ತಮ್ಮ ಶಾಸಕರನ್ನು ಹಿಡಿತದಲ್ಲಿ ಇಟ್ಟುಕೊಳ್ಳಬೇಕು. ಮಹಿಳೆಯರ ಇಂತಹ ವರ್ಗೀಕರಣವನ್ನು ಯಾರೂ ಸಹಿಸುವುದಿಲ್ಲ. ಸಮಾಜವು ನಿಮಗೆ ಪಾಠ ಕಲಿಸುತ್ತದೆ’ ಎಂದು ಠಾಕೂರ್ ವಾಗ್ದಾಳಿ ನಡೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT