ಜಮ್ಮು: ಉಗ್ರರ ವಿರುದ್ಧ ಕಾರ್ಯಾಚರಣೆ ವೇಳೆ ಕಿರಿಯ ನಿಯೋಜಿತ ಅಧಿಕಾರಿ (ಜೂನಿಯರ್ ಕಮಿಷನ್ಡ್ ಆಫೀಸರ್) ಸೇರಿ ಐವರು ಸೇನಾ ಸಿಬ್ಬಂದಿ ಸಾವಿಗೀಡಾಗಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಸೋಮವಾರ ಗುಂಡಿನ ಚಕಮಕಿ ನಡೆದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಗಡಿ ನಿಯಂತ್ರಣ ರೇಖೆಯಿಂದ (ಎಲ್‌ಒಸಿ) ದೇಶದ ಗಡಿಯೊಳಗೆ ಉಗ್ರರು ನುಸುಳಿರುವ ಕುರಿತು ಗುಪ್ತಚರ ಮಾಹಿತಿಯನ್ನು ಆಧರಿಸಿ ಸೂರನ್‌ಕೋಟ್‌ನ ಡೇರಾ ಕಿ ಗಲಿಗೆ (ಡಿಕೆಜಿ) ಸಮೀಪದ ಗ್ರಾಮದಲ್ಲಿ ಸೇನೆ ಕಾರ್ಯಾಚರಣೆ ನಡೆಸಿತ್ತು.
ಅಡಗಿದ್ದ ಉಗ್ರರು ಸೇನೆಯ ಮೇಲೆ ತೀವ್ರ ಗುಂಡಿನ ದಾಳಿ ನಡೆಸಿದ್ದರಿಂದ ಜೂನಿಯರ್ ಕಮಿಷನ್ಡ್ ಆಫೀಸರ್ ಸೇರಿ ನಾಲ್ವರು ಯೋಧರು ಗಾಯಗೊಂಡರು. ಅವರನ್ನು ಸೇನಾ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಐವರೂ ಮೃತಪಟ್ಟರು ಎಂದು ರಕ್ಷಣಾ ಇಲಾಖೆಯ ವಕ್ತಾರರು ಹೇಳಿದ್ದಾರೆ.
Sep Saraj Singh and Sep Vaisakh H also lost their lives during an ongoing operation in Shahadra, Thanamandi, Rajouri (J&K): White Knight Corps, Indian Army pic.twitter.com/KinA2Qd8O1
ಎಲ್‌ಒಸಿಯಿಂದ ನುಸುಳಿರುವ ಉಗ್ರರ ಗುಂಪುಬೃಹತ್ ಪ್ರಮಾಣದಶಸ್ತ್ರಾಸ್ತ್ರ ಸಂಗ್ರಹದೊಂದಿಗೆಅರಣ್ಯದಲ್ಲಿ ಅಡಗಿರುವ ಬಗ್ಗೆ ಮಾಹಿತಿ ಇರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ಉಗ್ರರ ನಿಗ್ರಹ ಕಾರ್ಯಾಚರಣೆ ಮುಂದುವರಿದ್ದು, ಮತ್ತಷ್ಟು ವಿವರ ನಿರೀಕ್ಷಿಸಲಾಗಿದೆ. ಇತ್ತೀಚೆಗೆ ಶಾಲೆಯ ಶಿಕ್ಷಕರು, ಒಬ್ಬರು ಕಾಶ್ಮೀರಿ ಪಂಡಿತ್ ವ್ಯಾಪಾರಿ ಸೇರಿದಂತೆ ಹಲವು ನಾಗರಿಕರನ್ನು ಉಗ್ರರು ಹತ್ಯೆಗೈದಿದ್ದರು.