ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಹಮದಾಬಾದ್‌ | ತೇಲುವ ರೆಸ್ಟೋರೆಂಟ್‌ ಉದ್ಘಾಟಿಸಿದ ಅಮಿತ್‌ ಶಾ

Published 2 ಜುಲೈ 2023, 8:54 IST
Last Updated 2 ಜುಲೈ 2023, 8:54 IST
ಅಕ್ಷರ ಗಾತ್ರ

ಅಹಮದಾಬಾದ್‌: ಸಬರಮತಿ ನದಿಯಲ್ಲಿ 'ಅಕ್ಷರಾ ರಿವರ್‌ ಕ್ರೂಸ್‌' ತೇಲುವ ರೆಸ್ಟೋರೆಂಟ್‌ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ವರ್ಚುವಲ್‌ ಆಗಿ ಉದ್ಘಾಟನೆ ಮಾಡಿದರು.

‘ಸಬರಮತಿ ನದಿ ತೀರವು ವಿವಿಧ ಚಟುವಟಿಕೆಗಳ ಕೇಂದ್ರವಾಗಿದೆ. ಹಿರಿಯ ನಾಗರಿಕರಿಂದ ಹಿಡಿದು ಮಕ್ಕಳನ್ನು ಈ ನದಿ ತೀರ ಆರ್ಕಷಿಸುತ್ತಿದೆ. ಈ ನದಿಯು ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಆತ್ಮವಾಗಿದೆ. ಅಕ್ಷರಾ ರಿವರ್‌ ಕ್ರೂಸ್ ನದಿ ತೀರಕ್ಕೆ ಮತ್ತೊಂದು ಆಕರ್ಷಣೆ ಆಗಿದೆ‘ ಎಂದು ಅಮಿತ್‌ ಶಾ ಹೇಳಿದರು.

‘ಸಾಬರಮತಿ ನದಿ ತೀರವನ್ನು ಅಭಿವೃದ್ದಿ ಪಡಿಸಲಾಗಿದ್ದು, ಇದೀಗ ನದಿಯಲ್ಲಿ ತೇಲುವ ರೆಸ್ಟೋರೆಂಟ್‌ ಮಾಡುವ ಕನಸು ನನಸಾಗಿದೆ. ಅಹಮದಾಬಾದ್‌ ಜನರು ಮನರಂಜನೆಗಾಗಿ ಬೇರೆಡೆಗೆ ಹೋಗುವುದನ್ನು ತಪ್ಪಿಸಲು ಈ ಕ್ರೂಸ್‌ ನಿರ್ಮಾಣ ಮಾಡಲಾಗಿದೆ. ಸಾರ್ವಜನಿಕ–ಖಾಸಗಿ ಸಹಭಾಗಿತ್ವದಲ್ಲಿ ಕ್ರೂಸ್‌ ಕಾರ್ಯನಿರ್ವಹಿಸಲಿದೆ‘ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಹಿತೇಶ್ ಬರೋಟ್ ಹೇಳಿದರು.

‘ಕ್ರೂಸ್‌ ಅನ್ನು ವಿಭಿನ್ನವಾಗಿ ರಚಿಸಲಾಗಿದೆ. ಮೇಲ್ಫಾಗದಲ್ಲಿ ಕುಳಿತು ಜನರು ಇಡೀ ಸಬರಮತಿ ನದಿಯ ಸೌಂದರ್ಯವನ್ನು ಸವಿಯಬಹುದಾಗಿದೆ. ಮಳೆಗಾಲ, ಚಳಿಗಾಲದಲ್ಲಿಯೂ ಜನರಿಗೆ ಅನುಕೂಲವಾಗುವಂತೆ ವ್ಯವಸ್ಥೆ ಮಾಡಲಾಗಿದೆ‘ ಎಂದು ಹೇಳಿದರು.

'ಸಬರಮತಿ ರಿವರ್‌ಫ್ರಂಟ್ ಡೆವಲಪ್‌ಮೆಂಟ್ ಲಿಮಿಟೆಡ್' (SRFDCL) ಅಕ್ಷರಾ ರಿವರ್‌ ಕ್ರೂಸ್‌ ಯೋಜನೆಯನ್ನು ಆರಂಭಿಸಿದ್ದು, ನದಿ ತೀರಕ್ಕೆ ಪ್ರವಾಸಿಗರನ್ನು ಸೆಳೆಯುವ ಗುರಿ ಹೊಂದಿದೆ. ಸುಮಾರು ₹10 ಕೋಟಿ ವೆಚ್ಚದಲ್ಲಿ ಈ ಕ್ರೂಸ್‌ಅನ್ನು ನಿರ್ಮಾಣ ಮಾಡಲಾಗಿದ್ದು, ಕ್ರೂಸ್‌ ನಿರ್ಮಾಣಕ್ಕೆ ಮೂರು ತಿಂಗಳು ತೆಗೆದುಕೊಳ್ಳಲಾಗಿದೆ.

ತೇಲುವ ರೆಸ್ಟೋರೆಂಟ್‌ನ ವಿಶೇಷತೆ:

  • ಎರಡು ಅಂತಸ್ತಿನ ಕ್ರೂಸ್-ಕಮ್-ಫ್ಲೋಟಿಂಗ್ ರೆಸ್ಟೋರೆಂಟ್

  • ಎಸಿ ಕ್ಯಾಬಿನ್‌ಗಳ ಜೊತೆಗೆ ಮೇಲಿನ ಮಹಡಿಯಲ್ಲಿ ತೆರೆದ ಜಾಗ

  • ಏಕಕಾಲದಲ್ಲಿ 125 ರಿಂದ 150 ಜನರಿಗೆ ಅವಕಾಶ ಕಲ್ಪಿಸುವ ಸಾಮರ್ಥ್ಯ

  • ಲೈವ್ ಶೋಗಳು, ಮ್ಯೂಸಿಕ್ ಪಾರ್ಟಿಗಳು, ಹುಟ್ಟುಹಬ್ಬದ ಪಾರ್ಟಿಗಳು ಸೇರಿದಂತೆ ಮನರಂಜನಾ ಕಾರ್ಯಕ್ರಮಗಳಿಗೆ ಅವಕಾಶ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT