ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್ ಯುವತಿಗೆ ಹೃದಯ ಕಸಿ ಶಸ್ತ್ರಚಿಕಿತ್ಸೆ: ಹೊಸ ಜೀವನ ಕೊಟ್ಟ ಚೆನ್ನೈ ವೈದ್ಯರು!

Published 28 ಏಪ್ರಿಲ್ 2024, 10:35 IST
Last Updated 28 ಏಪ್ರಿಲ್ 2024, 10:35 IST
ಅಕ್ಷರ ಗಾತ್ರ

ಕರಾಚಿ: ಪಾಕಿಸ್ತಾನದ 19 ವರ್ಷದ ಯುವತಿಗೆ ಯಶಸ್ವಿ ಹೃದಯ ಕಸಿ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಚೆನ್ನೈನ ಎಂಜಿಎಂ ಆಸ್ಪತ್ರೆಯು ಹೊಸ ಜೀವನ ನೀಡಿದೆ.

ಬ್ರೈನ್ ಡೆಡ್ ಆಗಿದ್ದ ವ್ಯಕ್ತಿಯ ಹೃದಯ ತಮಗೆ ಸರಿ ಹೊಂದುತ್ತದೆ ಎಂಬ ಮಾಹಿತಿ ಮೇರೆಗೆ ಭಾರತಕ್ಕೆ ಬಂದ ಆಯೆಶಾ ರಶಾನ್ ಹೊಸ ಜೀವನ ಪಡೆದಿದ್ದಾರೆ. ಜನವರಿಯಲ್ಲೇ ಶಸ್ತ್ರಚಿಕಿತ್ಸೆ ನಡೆದಿದ್ದು, ಈ ತಿಂಗಳು ಬಿಡುಗಡೆ ಆಗಿದ್ದಾರೆ.

2014ರಲ್ಲಿ ಆಯೆಶಾ ಮೊದಲ ಬಾರಿಗೆ ಭಾರತಕ್ಕೆ ಬಂದಿದ್ದರು. ಅವರ ಹೃದಯ ಅತ್ಯಂತ ಕಳಪೆ ಕಾರ್ಯನಿರ್ವಹಣೆಯ ಸ್ಥಿತಿಯಲ್ಲಿತ್ತು ಎಂದು ಹೃದಯ ವಿಜ್ಞಾನ ಮತ್ತು ಶ್ವಾಸಕೋಶ ಕಸಿ ಹಾಗೂ ಮೆಕಾನಿಕ್ ಸರ್ಕ್ಯುಲೇಟರಿ ಸಪೋರ್ಟ್ ಸಂಸ್ಥೆಯ ನಿರ್ದೇಶಕ ಡಾ.ಕೆ.ಆರ್. ಬಾಲಕೃಷ್ಣನ್ ಹೇಳಿದ್ದಾರೆ.

'ಯುವತಿ ಇಲ್ಲಿಗೆ ಬಂದಾಗ ಹೃದಯಾಘಾತದಿಂದ ತೀವ್ರ ಅಸ್ವಸ್ಥರಾಗಿದ್ದರು. ಸಿಪಿಆರ್ ಮೂಲಕ ಪುನಶ್ಚೇತನಗೊಳಿಸಬೇಕಿತ್ತು. ರಕ್ತದ ಪರಿಚಲನೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ತಾಂತ್ರಿಕ ವ್ಯವಸ್ಥೆ ಮಾಡಲಾಗಿತ್ತು. ತಾತ್ಕಾಲಿಕ ಹೃದಯದ ಪಂಪ್ ಅನ್ನು ಅಳವಡಿಸಿದ್ದೆವು. ಬಳಿಕ ಆಕೆ ಚೇತರಿಸಿಕೊಂಡು ವಾಪಸ್ ತೆರಳಿದ್ದರು. ಕೆಲ ವರ್ಷಗಳ ಬಳಿಕ ಅವರ ಆರೋಗ್ಯ ಮತ್ತೆ ಹದಗೆಟ್ಟಿದೆ. ಆಕೆಯ ಹೃದಯದ ಒಂದು ಕವಾಟದಲ್ಲಿ ರಂಧ್ರವಾಗಿದ್ದು, ಹೃದಯಾಘಾತವಾಗಿತ್ತು. ಬಳಿಕ, ಸೋಂಕು ತಗುಲಿ ಅವರ ದೇಶದಲ್ಲಿ ಚಿಕಿತ್ಸೆ ಪಡೆಯುವುದು ಕಷ್ಟಕರವಾಗಿತ್ತು’ ಎಂದೂ ಅವರು ತಿಳಿಸಿದ್ದಾರೆ,.

‘ವೀಸಾ ಪಡೆಯುವುದೂ ಬಹಳ ಕಷ್ಟವಾಯಿತು. ಆಕೆಗೆ ತಾಯಿ ಮಾತ್ರವಿದ್ದು, ಪುನರಾವರ್ತಿತ ಆಸ್ಪತ್ರೆ ದಾಖಲಾತಿ ಸೇರಿದಂತೆ ಎಲ್ಲ ಖರ್ಚನ್ನು ನಾವೇ ನೋಡಿಕೊಳ್ಳಬೇಕಾಯಿತು’ ಎಂದು ಬಾಲಕೃಷ್ಣನ್ ಹೇಳಿದ್ದಾರೆ.

ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದರಿಂದ ಹಣ ಹೊಂದಿಸುವುದೇ ಸವಾಲಾಗಿತ್ತು. ಟ್ರಸ್ಟ್‌, ದಾನಿಗಳ ಸಹಾಯ, ನಮ್ಮ ಕೈಲಿದ್ದ ಹಣವನ್ನೂ ಹಾಕಿದೆವು. ಇದೊಂದು ಅತ್ಯಂತ ಸೂಕ್ಷ್ಮ ಶಸ್ತ್ರಚಿಕಿತ್ಸೆ ಆಗಿದ್ದರಿಂದ ಏನು ಬೇಕಾದರೂ ಆಗಬಹುದಿತ್ತು’ ಎಂದಿದ್ದಾರೆ.

ಫ್ಯಾಶನ್ ಡಿಸೈನರ್ ಆಗುವ ಕನಸು ಹೊತ್ತಿರುವ ಆಯೆಶಾ, ವೀಸಾ ಕೊಟ್ಟು ಚಿಕಿತ್ಸೆಗೆ ಸ್ಪಂದಿಸಿದ ಭಾರತ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದ್ದಾರೆ.

ಪಾಕಿಸ್ತಾನದಲ್ಲಿ ಚಿಕಿತ್ಸೆಗೆ ಬೇಕಾದ ವ್ಯವಸ್ಥೆ ಇಲ್ಲ. ಹಾಗಾಗಿ, ಭಾರತದಲ್ಲಿ ಚಿಕಿತ್ಸೆ ಪಡೆಯಬೇಕಾಯಿತು ಎಂದು ಆಯೆಶಾ ತಾಯಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT