ನವದೆಹಲಿ: ಇಂಡಿಗೊ ವಿಮಾನಯಾನ ಸಂಸ್ಥೆಯಿಂದ ನೂರಾರು ವಿಮಾನಗಳ ರದ್ದತಿಗೆ ಸಂಬಂಧಿಸಿದಂತೆ ಪ್ರಯಾಣಿಕರಿಗೆ ಆಗಿರುವ ತೊಂದರೆಯನ್ನು ಗಮನಿಸಿ ತುರ್ತಾಗಿ ಮಧ್ಯಪ್ರವೇಶಿಸುವಂತೆ ಕೋರಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ತಿರಸ್ಕರಿಸಿದೆ.

ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಹಾಗೂ ನ್ಯಾ. ಜಾಯ್ ಮಾಲ್ಯ ಬಾಗ್ಚಿ ಅವರಿದ್ದ ಪೀಠವು ಅರ್ಜಿಯ ವಿಚಾರಣೆ ನಡೆಸಿತು.
.IndiGo crisis: ಕಾರಿರುಳಲ್ಲಿ ಪರದಾಟ; ಚಾರ್ಜಿಂಗ್, ಪ್ಯಾಡ್ಗೂ ತತ್ವಾರ.IndiGo Crisis: ಇಂಡಿಗೊ ಸಿಇಒ, ವ್ಯವಸ್ಥಾಪಕರಿಗೆ ಶೋಕಾಸ್ ನೋಟಿಸ್.
‘ದೇಶದ ಹಲವು ವಿಮಾನ ನಿಲ್ದಾಣಗಳಲ್ಲಿ ಲಕ್ಷಾಂತರ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಿದ್ದಾರೆ. ಕೇಂದ್ರ ಸರ್ಕಾರವು ಪರಿಸ್ಥಿತಿಯನ್ನು ಗಮನಿಸಿ ಸಕಾಲದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಂಡಿದೆ’ ಎಂದು ಪೀಠವು ಅಭಿಪ್ರಾಯಪಟ್ಟಿತು.

‘ಇದೊಂದು ಗಂಭೀರ ವಿಷಯ. ಪ್ರಯಾಣಿಕರಲ್ಲಿ ಹಲವರಿಗೆ ಆರೋಗ್ಯ ಸಮಸ್ಯೆ ಇತ್ತು ಮತ್ತು ಇನ್ನೂ ಹಲವರು ಬಹುಮುಖ್ಯ ಕಾರಣಗಳಿಗಾಗಿ ವಿಮಾನ ಯಾನವನ್ನು ಆಯ್ಕೆ ಮಾಡಿಕೊಂಡಿದ್ದರು. ಆದರೆ ಇಂಡಿಗೊ ಸಂಸ್ಥೆ ವಿಮಾನಗಳ ಹಾರಾಟವನ್ನು ಕೊನೆ ಗಳಿಗೆಯಲ್ಲಿ ರದ್ದುಪಡಿಸಿದ್ದರಿಂದ ಪ್ರಯಾಣಿಕರು ಪರದಾಡುವಂತಾಯಿತು. ವಿಮಾನ ಹಾರಾಟ ರದ್ದುಗೊಳಿಸಿದ್ದರ ಮಾಹಿತಿ ಪ್ರಯಾಣಿಕರಿಗೆ ಮೊದಲು ನೀಡಿರಲಿಲ್ಲ’ ಎಂದು ಅರ್ಜಿದಾರರ ಪರ ವಕೀಲರು ಪೀಠದ ಗಮನ ಸೆಳೆದರು.

‘ಸುಮಾರು 2,500 ವಿಮಾನಗಳ ಹಾರಾಟ ರದ್ದಾಯಿತು. ಇದರಿಂದ ದೇಶದ 95 ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರು ತೀವ್ರವಾಗಿ ಪರದಾಡಿದರು’ ಎಂದು ಹೇಳಿದರು.
.DGCA ಮಣಿಸಲು ಕಡೆಗೂ IndiGo ಬ್ಲ್ಯಾಕ್ಮೇಲ್ ಕೆಲಸ ಮಾಡಿದೆ: ನೆಟ್ಟಿಗರ ಆಕ್ರೋಶ.IndiGo Crisis: ಇವತ್ತು ದೆಹಲಿಯಿಂದ ಅಬುಧಾಬಿಗೆ ಹೋಗದೆ ಚೆನ್ನೈಗೆ ಬರುವಂತಿಲ್ಲ!.
ಇಂಡಿಗೊ ವಿಮಾನಗಳ ರದ್ದು: 7ನೇ ದಿನಕ್ಕೆ

ಇಂಡಿಗೊ ವಿಮಾನಗಳ ಹಾರಾಟದಲ್ಲಿನ ವ್ಯತ್ಯಯ ಸತತ ಏಳನೇ ದಿನವಾದ ಸೋಮವಾರವೂ ಮುಂದುವರಿಯಿತು. ದೆಹಲಿ ಹಾಗೂ ಬೆಂಗಳೂರು ವಿಮಾನ ನಿಲ್ದಾಣಗಳಿಂದ ಕಾರ್ಯಾಚರಣೆ ನಡೆಸಬೇಕಿದ್ದ 250 ವಿಮಾನಗಳು ರದ್ದಾಗಿವೆ ಎಂದು ವರದಿಯಾಗಿದೆ.

ದೆಹಲಿಯ ಇಂದಿರಾ ಗಾಂಧಿ ವಿಮಾನ ನಿಲ್ದಾಣದಿಂದ 75 ನಿರ್ಗಮನ ಹಾಗೂ 59 ಆಗಮನ ಒಳಗೊಂಡು 134 ವಿಮಾನಗಳ ಹಾರಾಟವನ್ನು ಇಂಡಿಗೊ ರದ್ದುಗೊಳಿಸಿದೆ. ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ 65 ಆಗಮನ ಹಾಗೂ 62 ನಿರ್ಗಮನ ಸೇರಿ 117 ಇಂಡಿಗೊ ವಿಮಾನಗಳ ಹಾರಾಟ ಸೋಮವಾರ ರದ್ದಾಗಿದೆ.

ಇಂಡಿಗೊ ವಿಮಾನಯಾನ ಸಂಸ್ಥೆಯು ಸರ್ಕಾರ ಕ್ರಮ ಮತ್ತು ಪ್ರಯಾಣಿಕರ ಆಕ್ರೋಶವನ್ನು ಏಕಕಾಲಕ್ಕೆ ಎದುರಿಸುತ್ತಿದೆ. ಪೈಲೆಟ್ಗಳ ದುಡಿಮೆ ಹಾಗೂ ವಿಶ್ರಾಂತಿ ಸಮಯಕ್ಕೆ ಸಂಬಂಧಿಸಿದಂತೆ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಯಲದ ನೂತನ ನಿಯಮದಿಂದ ಡಿ. 2ರಿಂದ ಆರಂಭವಾದ ಈ ಸಮಸ್ಯೆ ಮುಂದುವರಿದಿದೆ. ಇದರಿಂದ ಪ್ರಯಾಣಿಕರು ತೀವ್ರ ಪರದಾಡುವಂತಾಗಿದೆ. ಈ ಸಮಸ್ಯೆ ಮತ್ತು ಜನರ ಆಕ್ರೋಶದಿಂದಾಗಿ ಷೇರು ಪೇಟೆಯಲ್ಲೂ ಇಂಡಿಗೊ ಷೇರು ಬೆಲೆಗಳು ಸೋಮವಾರ ಕುಸಿತ ದಾಖಲಿಸಿದೆ.
.IndiGo: ಬೆಂಗಳೂರಿನಿಂದ ಇಂಡಿಗೊ ಮೂಲಕ ಪ್ರಯಾಣಿಸುತ್ತಿರುವ ಪ್ರಯಾಣಿಕರ ಗಮನಕ್ಕೆ...IndiGo Crisis: ಪೈಲಟ್ಗಳ ರಜಾ ನಿಯಮ ಸಡಿಲಿಸಿದ ಡಿಜಿಸಿಎ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.