ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರು ನವೆಂಬರ್ನಲ್ಲಿ ನಡೆಯಲಿರುವ ಚುನಾವಣೆಗೆ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿ ತಮ್ಮ ಹೆಸರನ್ನು ಅನುಮೋದಿಸಿರುವುದಕ್ಕೆ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಹರ್ಷ ವ್ಯಕ್ತಪಡಿಸಿದ್ದಾರೆ.

ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿ ಅಧಿಕೃತ ನಾಮನಿರ್ದೇಶನ ಗಳಿಸಲು ಎಲ್ಲ ಪ್ರಯತ್ನ ಮಾಡುವುದಾಗಿ ಹೇಳಿದ್ದಾರೆ. ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಅವರನ್ನು ಸೋಲಿಸಲಿಕ್ಕಾಗಿ ದೇಶವನ್ನು ಒಗ್ಗೂಡಿಸಲು ‘ತನ್ನೆಲ್ಲಾ ಶಕ್ತಿಯನ್ನು ಬಳಸುವೆ’ ಎಂದು ಘೋಷಿಸಿದ್ದಾರೆ.

ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ಮರು ಆಯ್ಕೆ ಬಯಸಿದ್ದ ಬೈಡನ್, ಭಾನುವಾರ ಸ್ಪರ್ಧೆಯಿಂದ ಏಕಾಏಕಿ ಹಿಂದೆ ಸರಿದಿದ್ದಾರೆ. ಬೈಡನ್ ಸ್ಪರ್ಧೆಗೆ ಡೆಮಾಕ್ರಟಿಕ್ ಪಕ್ಷದಲ್ಲೇ ಅಪಸ್ವರ ಕೇಳಿಬಂದಿತ್ತು.

‘ಪಕ್ಷ ಮತ್ತು ದೇಶದ ಹಿತವನ್ನು ಬಯಸಿ ಈ ತೀರ್ಮಾನ ಕೈಗೊಂಡಿದ್ದೇನೆ. ಅಧಿಕಾರ ಅವಧಿ ಪೂರ್ಣಗೊಳ್ಳುವವರೆಗೆ (ಜನವರಿ 2025ರವರೆಗೆ) ಅಧ್ಯಕ್ಷನಾಗಿ ಮುಂದುವರಿಯುವೆ’ ಎಂದಿದ್ದ ಅವರು ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಲು 59 ವರ್ಷದ ಕಮಲಾ ಹ್ಯಾರಿಸ್ ಅವರ ಹೆಸರನ್ನು ಸೂಚಿಸಿದ್ದರು.

ಹ್ಯಾರಿಸ್ ಅವರು ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗುವರೇ ಅಥವಾ ಡೆಮಾಕ್ರಟಿಕ್ ಪಕ್ಷವು ಪರ್ಯಾಯ ಅಭ್ಯರ್ಥಿಯನ್ನು ಆಯ್ಕೆ ಮಾಡಲಿದೆಯೇ ಎಂಬುದು ಇನ್ನೂ ಖಚಿತವಾಗಿಲ್ಲ.

ಡೆಮಾಕ್ರಟಿಕ್ ಪಕ್ಷದ ರಾಷ್ಟ್ರೀಯ ಸಮಿತಿ ಮುಖ್ಯಸ್ಥರಾದ ಜೇಮಿ ಹ್ಯಾರಿಸನ್ ಅವರು, ‘ಡೊನಾಲ್ಡ್ ಟ್ರಂಪ್ ಅವರನ್ನು ಸೋಲಿಸುವ ಸಾಮರ್ಥ್ಯ ಹೊಂದಿರುವ ಅಭ್ಯರ್ಥಿಯ ಆಯ್ಕೆ ಪ್ರಕ್ರಿಯೆಯನ್ನು ಪಕ್ಷವು ಪಾರದರ್ಶಕ ಮತ್ತು ಕ್ರಮಬದ್ಧ ರೀತಿಯಲ್ಲಿ ನಡೆಸಲಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೈಡನ್ ಅವರ ಅನುಮೋದನೆ ಇರುವುದರಿಂದ ಹ್ಯಾರಿಸ್, ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯಾಗುವುದು ಬಹುತೇಕ ನಿಚ್ಚಳ ಎಂದು ವಿಶ್ಲೇಷಿಸಲಾಗಿದೆ. ಆದರೂ ಮುಂದಿನ ತಿಂಗಳು ಷಿಕಾಗೊದಲ್ಲಿ ನಡೆಯಲಿರುವ ಡೆಮಾಕ್ರಟಿಕ್ ಪಕ್ಷದ ರಾಷ್ಟ್ರೀಯ ಸಮಾವೇಶದಲ್ಲಿ ಅಧಿಕೃತ ತೀರ್ಮಾನ ಹೊರಬೀಳಲಿದೆ.

2021ರಿಂದಲೂ ಅಮೆರಿಕದ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಕಮಲಾ ಹ್ಯಾರಿಸ್ ಅವರು ಈ ಸ್ಥಾನಕ್ಕೇರಿದ ಮೊದಲ ಮಹಿಳೆ, ಮೊದಲ ಕಪ್ಪುವರ್ಣೀಯರು ಹಾಗೂ ದಕ್ಷಿಣ ಏಷ್ಯಾ ಮೂಲದ ಮೊದಲ ವ್ಯಕ್ತಿ ಎನಿಸಿಕೊಂಡಿದ್ದಾರೆ.

‘ಅಧ್ಯಕ್ಷರಾಗಿ ಮತ್ತು ರಾಜಕಾರಣಿಯಾಗಿ ದಶಕಗಳ ಕಾಲ ದೇಶಕ್ಕೆ ಸಲ್ಲಿಸಿದ ಸೇವೆಗಾಗಿ ಬೈಡನ್ ಅವರಿಗೆ ಅಮೆರಿಕದ ಜನರ ಪರವಾಗಿ ಧನ್ಯವಾದ ಸಲ್ಲಿಸುತ್ತೇನೆ’ ಎಂದು ಹ್ಯಾರಿಸ್ ಹೇಳಿದ್ದಾರೆ.

ಬೈಡನ್ ತಮ್ಮ ವೃತ್ತಿಜೀವನದುದ್ದಕ್ಕೂ ಮಾಡಿದಂತೆ ಅಮೆರಿಕದ ಜನರ ಹಿತಾಸಕ್ತಿಯನ್ನು ಪರಿಗಣಿಸಿ ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ ಎಂಬುದು ನನಗೆ ತಿಳಿದಿದೆ

-ಕಿಯರ್ ಸ್ಟಾರ್ಮರ್ ಬ್ರಿಟನ್ ಪ್ರಧಾನಿ

ಬೈಡನ್ ಅವರನ್ನು ಹಲವು ವರ್ಷಗಳಿಂದ ಬಲ್ಲೆ. ಅವರೊಬ್ಬ ಒಳ್ಳೆಯ ವ್ಯಕ್ತಿ. ಒಬ್ಬ ಅಧ್ಯಕ್ಷರಾಗಿ ಅವರು ಕೆನಡಾದ ನಿಜವಾದ ಪಾಲುದಾರ ಮತ್ತು ಉತ್ತಮ ಸ್ನೇಹಿತರೂ ಹೌದು

-ಜಸ್ಟಿನ್ ಟ್ರೂಡೊ ಕೆನಡಾ ಪ್ರಧಾನಿ

ಸ್ವಾತಂತ್ರ್ಯಕ್ಕಾಗಿ ನಡೆಯುತ್ತಿರುವ ಹೋರಾಟದಲ್ಲಿ ಅಮೆರಿಕವು ನೀಡಿರುವ ‘ಅಚಲ ಬೆಂಬಲ’ಕ್ಕಾಗಿ ಉಕ್ರೇನ್ ದೇಶವು ಬೈಡನ್ ಅವರಿಗೆ ಕೃತಜ್ಞತೆ ಸಲ್ಲಿಸುತ್ತದೆ

-ವೊಲೊಡಿಮಿರ್ ಝೆಲೆನ್ಸ್ಕಿ ಉಕ್ರೇನ್ ಅಧ್ಯಕ್ಷ

ಕಪ್ಪುವರ್ಣೀಯ ಮಹಿಳೆಯರ ಬೆಂಬಲ

ಅಧ್ಯಕ್ಷ ಸ್ಥಾನದ ಸಂಭಾವ್ಯ ಅಭ್ಯರ್ಥಿಯಾಗಿರುವ ಕಮಲಾ ಹ್ಯಾರಿಸ್ ಅವರನ್ನು ಬೆಂಬಲಿಸಲು ಅಮೆರಿಕದಾದ್ಯಂತವಿರುವ ಕಪ್ಪುವರ್ಣೀಯ ಮಹಿಳೆಯರು ಅಭಿಯಾನ ಆರಂಭಿಸಿದ್ದಾರೆ. ಸಾವಿರಾರು ಮಹಿಳೆಯರು ಭಾನುವಾರ ಆನ್ಲೈನ್ ಮೂಲಕ ಚರ್ಚಿಸಿದ್ದಾರೆ. ಬೈಡನ್ ಹಿಂದೆ ಸರಿದರೆ ಹ್ಯಾರಿಸ್ ಅವರನ್ನು ಅಭ್ಯರ್ಥಿಯಾಗಿ ಬಿಂಬಿಸುವುದಕ್ಕೆ ಸಂಬಂಧಿಸಿದಂತೆ ಡೆಮಾಕ್ರಟಿಕ್ ಪಕ್ಷದಲ್ಲಿರುವ ಕಪ್ಪುವರ್ಣೀಯ ಮಹಿಳಾ ಮುಖಂಡರು ಈ ಹಿಂದೆಯೇ ಸಿದ್ಧತೆ ನಡೆಸಿದ್ದರು. ಬೈಡನ್ ಅವರ ನಿರ್ಧಾರ ಹೊರಬಿದ್ದ ಬೆನ್ನಲ್ಲೇ ಅವರು ಭಾನುವಾರ ಸಂಜೆ ‘ಝೂಮ್ ಕಾಲ್’ ಮೂಲಕ ಮಾತುಕತೆ ನಡೆಸಿ ಮುಂದಿನ ನಡೆ ಬಗ್ಗೆ ಚರ್ಚಿಸಿದ್ದಾರೆ. ಕಮಲಾ ಹ್ಯಾರಿಸ್ ಪರವಾಗಿ ಬೆಂಬಲ ಗಿಟ್ಟಿಸುವ ಕೆಲಸವನ್ನು ಈಗಾಗಲೇ ಆರಂಭಿಸಿದ್ದೇನೆ ಎಂದು ಸುದೀರ್ಘ ಅವಧಿಯಿಂದ ಡೆಮಾಕ್ರಟಿಕ್ ಪಕ್ಷದ ಕಾರ್ಯತಂತ್ರ ನಿಪುಣರಾಗಿ ಕೆಲಸ ಮಾಡುತ್ತಿರುವ ಡೋನಾ ಬ್ರೆಜಿಲ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.