ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಣಿಪುರ: ಅಪಾರ ಪ್ರಮಾಣದ ಶಸ್ತ್ರಾಸ್ತ್ರ, ಸ್ಫೋಟಕ ಜಪ್ತಿ

Published : 28 ಸೆಪ್ಟೆಂಬರ್ 2024, 16:10 IST
Last Updated : 28 ಸೆಪ್ಟೆಂಬರ್ 2024, 16:10 IST
ಫಾಲೋ ಮಾಡಿ
Comments

ಇಂಫಾಲ್‌: ಮಣಿಪುರದ ಮೂರು ಜಿಲ್ಲೆಗಳಲ್ಲಿ ಕಾರ್ಯಾಚರಣೆ ನಡೆಸಿದ ಭದ್ರತಾ ಪಡೆಗಳು ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಸ್ಫೋಟಕಗಳನ್ನು ಜಪ್ತಿ ಮಾಡಿವೆ.

ಮಣಿಪುರ ಪೋಲಿಸರು ಮತ್ತು ಅಸ್ಸಾಂ ರೈಫಲ್ಸ್‌ನ ಜಂಟಿ ತಂಡವು ಕಾಂಗ್ಪೋಕ್ಪಿ ಜಿಲ್ಲೆಯಲ್ಲಿ ಕಾರ್ಯಾಚರಣೆ ನಡೆಸಿ ಎರಡು ರೈಫಲ್, ಮದ್ದುಗುಂಡುಗಳಿದ್ದ ಒಂದು ಪಿಸ್ತೂಲ್, ನಾಲ್ಕು ಗ್ರೆನೇಡ್‌ಗಳು, ಎರಡು ಡಿಟೊನೇಟರ್‌ಗಳು ಮತ್ತು ಒಂದು ದೇಸಿ ಫಿರಂಗಿ ಮತ್ತು ಇನ್ನೊಂದು ಅತ್ಯಾಧುನಿಕ ಫಿರಂಗಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್‌ ಪ್ರಕಟಣೆ ತಿಳಿಸಿದೆ.

ಚುರಚಾಂದಪುರದ ಗೋಥೋಲ್ ಗ್ರಾಮದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸ್‌ ಇಲಾಖೆ, ಗಡಿ ಭದ್ರತಾ ಪಡೆ(ಬಿಎಸ್‌ಎಫ್‌) ಮತ್ತು ಕೇಂದ್ರ ಮೀಸಲು ಪೊಲೀಸ್‌ ಪಡೆಗಳು(ಸಿಆರ್‌ಪಿಎಫ್‌) ಎರಡು ಅತ್ಯಾಧುನಿಕ ಫಿರಂಗಿಗಳನ್ನು ವಶಪಡಿಸಿಕೊಂಡಿವೆ. 

ಥೌಬಾಲ್ ಜಿಲ್ಲೆಯಲ್ಲಿ 2 ಗ್ರೆನೇಡ್‌, 2 ಶೆಲ್‌, 3 ಡಿಟೊನೇಟರ್, ‌ಎರಡು ಬೇರೆ ಬೇರೆ ಮಾದರಿಯ ಗ್ರೆನೇಡ್‌ ಮತ್ತು ಒಂದು ಗ್ಯಾಸ್‌ ಶೆಲ್‌ ಅನ್ನು ಜಪ್ತಿ ಮಾಡಲಾಗಿದೆ. ಕಾರ್ಯಾಚರಣೆ ವೇಳೆ ಯಾರನ್ನೂ ಬಂಧಿಸಲಾಗಿಲ್ಲ.

ಜಿರಿಬಾಮ್: ಗುಂಡಿನ ದಾಳಿ

ಮಣಿಪುರದ ಜಿರಿಬಾಮ್ ಜಿಲ್ಲೆಯಲ್ಲಿ ಶಂಕಿತ ಬಂಡುಕೋರರು ಶನಿವಾರ ಗುಂಡಿನ ದಾಳಿ ನಡೆಸಿದ್ದಾರೆ. ಸಮೀಪದ ಗುಡ್ಡ ಮತ್ತು ಅರಣ್ಯಗಳಲ್ಲಿ ಅವಿತಿದ್ದ ಶಸ್ತ್ರಾಸ್ತ್ರಧಾರಿಗಳು ಮೋಂಗ್‌ಬಂಗ್‌ ಮೈತೇಯಿ ಗ್ರಾಮದ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಮಹಿಳೆಯರು ಮಕ್ಕಳು ಮತ್ತು ವೃದ್ಧರನ್ನು ಸುರಕ್ಷಿತ ಸ್ಥಳಗಳಿಗೆ ಕಳುಹಿಸಲಾಗಿದ್ದು ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ ಜೂನ್‌ ತಿಂಗಳಿನಲ್ಲಿ ಜಿರಿಬಾಮ್‌ನಲ್ಲಿ ಹಿಂಸಾಚಾರ ಆರಂಭಗೊಂಡ ಬಳಿಕ ಮೋಂಗ್‌ಬಂಗ್‌ ಮೈತೇಯಿ ಗ್ರಾಮದ ಮೇಲೆ ಹಲವು ಬಾರಿ ಗುಂಡಿನ ದಾಳಿ ನಡೆದಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT