ಶುಕ್ರವಾರ, 1 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾವನಾತ್ಮಕ ಪೋಸ್ಟ್ ಹಂಚಿಕೊಂಡ ಹೇಮಂತ್ ಸೊರೇನ್ ಪತ್ನಿ ಕಲ್ಪನಾ

Published 7 ಫೆಬ್ರುವರಿ 2024, 8:07 IST
Last Updated 7 ಫೆಬ್ರುವರಿ 2024, 8:07 IST
ಅಕ್ಷರ ಗಾತ್ರ

ರಾಂಚಿ: ಭೂ ಹಗರಣಕ್ಕೆ ಸಂಬಂಧಿಸಿದಂತೆ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರನ್ನು ಇತ್ತೀಚೆಗೆ ಇ.ಡಿ ಬಂಧಿಸಿತ್ತು. ಇದೇ ವೇಳೆ ವಿವಾಹದ 18ನೇ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿರುವ ಹೇಮಂತ್‌ ಸೊರೇನ್‌ ಪತ್ನಿ ಕಲ್ಪನಾ ಅವರು ಎಕ್ಸ್‌ನಲ್ಲಿ ಭಾವನಾತ್ಮಕ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.

‘ಇಂದು ನಮ್ಮ 18ನೇ ವಿವಾಹ ವಾರ್ಷಿಕೋತ್ಸವ. ಈ ವೇಳೆ ನನ್ನ ಪತಿ ನನ್ನ ಕುಟುಂಬದೊಂದಿಗೆ ಇಲ್ಲ. ಎಲ್ಲ ಷಡ್ಯಂತ್ರಗಳನ್ನು ನನ್ನ ಪತಿ ಜಯಿಸಿ ಬರುತ್ತಾರೆ ಎಂಬ ನಂಬಿಕೆ ನನಗಿದೆ. ನಾನು ಹೋರಾಟಗಾರನ ಪತ್ನಿ, ಆತನ ಹಿಂದಿರುವ ಶಕ್ತಿ ನಾನು’ ಎಂದು ಹೇಳಿದ್ದಾರೆ.

‘ಜಾರ್ಖಂಡ್‌ನ ಜನರಿಗಾಗಿ ನನ್ನ ಪತಿ ಯಾರ ಮುಂದೆಯು ತಲೆಬಾಗಲಿಲ್ಲ. ಬದಲಾಗಿ ಷಡ್ಯಂತ್ರದ ವಿರುದ್ಧ ತಾವೇ ಹೋರಾಡಲು ಮುಂದಾಗಿದ್ದಾರೆ. ನಾನು ಹೋರಾಟಗಾರರನ ಪತ್ನಿ. ಇಂತಹ ವಿಷಯಗಳಿಗೆ ನಾನು ಭಾವುಕಳಾಗುವುದಿಲ್ಲ. ಹೇಮಂತ್‌ ಅವರಂತೆ ನಾನು ಕಷ್ಟದ ಸಂದರ್ಭದಲ್ಲಿ ನಗುತ್ತೇನೆ. ಅವರು ಧೈರ್ಯ, ಹೋರಾಟಕ್ಕೆ ಶಕ್ತಿಯಾಗಿರುತ್ತೇನೆ’ ಎಂದರು.

‘ಬಿಜೆಪಿ ಮತ್ತು ಕೇಂದ್ರ ಸರ್ಕಾರದ ಷಡ್ಯಂತ್ರಗಳನ್ನು ಸೋಲಿಸಿ ನಮ್ಮೊಂದಿಗೆ ಜೊತೆಯಾಗುವವರೆಗೆ ಹೇಮಂತ್ ಸೊರೇನ್‌ ಖಾತೆಯನ್ನು ನಾನು ನಿರ್ವಹಿಸುತ್ತೇನೆ. ಕೆಚ್ಚೆದೆಯ ನಮ್ಮ ಪೂರ್ವಜರು ಅನ್ಯಾಯ ಮತ್ತು ದಬ್ಬಾಳಿಕೆಯ ವಿರುದ್ಧ ಹೋರಾಡಿದರು. ಇದೀಗ ಮತ್ತೆ ಆ ಸಮಯ ಬಂದಿದೆ. ನಿಮ್ಮ ಪ್ರೀತಿ ವಿಶ್ವಾಸ ನಮ್ಮ ಮೇಲೆ ಹೀಗೆ ಇರಲಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT