ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಆಯೋಗ ಭೇಟಿ ಮಾಡಲಿರುವ ‘ಇಂಡಿಯಾ’ ನಾಯಕರು

Published 9 ಮೇ 2024, 15:13 IST
Last Updated 9 ಮೇ 2024, 15:13 IST
ಅಕ್ಷರ ಗಾತ್ರ

ನವದೆಹಲಿ: ವಿರೋಧ ಪಕ್ಷಗಳ ಒಕ್ಕೂಟ ‘ಇಂಡಿಯಾ’ದ ನಾಯಕರು ಚುನಾವಣಾ ಆಯೋಗವನ್ನು ಶುಕ್ರವಾರ ಭೇಟಿಯಾಗಿ, ಲೋಕಸಭೆ ಚುನಾವಣೆಯ ಪ್ರತಿ ಹಂತ ಮುಕ್ತಾಯವಾದ ನಂತರ ನಿಖರ, ಪ್ರಾಮಾಣಿಕ ಮತದಾನ ಪ್ರಮಾಣವನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಭೆಯು ಗುರುವಾರ ನಿಗದಿಯಾಗಿತ್ತು, ಬಳಿಕ ಅದನ್ನು ಬದಲಾಯಿಸಲಾಯಿತು ಎಂದು ತಿಳಿಸಿವೆ.

ಇದೇ ಸಂದರ್ಭದಲ್ಲಿ, ಬಿಜೆಪಿಯು ಪ್ರಚಾರದ ಸಂದರ್ಭದಲ್ಲಿ ಧರ್ಮದ ಚಿಹ್ನೆಗಳನ್ನು ಬಳಸುತ್ತಿದೆ ಎಂದೂ ವಿಪಕ್ಷಗಳ ನಾಯಕರು ಆರೋಪಿಸಲಿದ್ದಾರೆ ಎಂದು ಹೇಳಿವೆ.

ಮತದಾನ ಪ್ರಮಾಣ ದತ್ತಾಂಶ ನೀಡುವಲ್ಲಿ ವಿಳಂಬವಾಗುತ್ತಿರುವ ಬಗ್ಗೆ ಕಾಂಗ್ರೆಸ್‌, ಟಿಎಂಸಿ ಮತ್ತು ಸಿಪಿಐ(ಎಂ) ಈಗಾಗಲೇ ಕಳವಳ ವ್ಯಕ್ತಪಡಿಸಿ ಆಯೋಗಕ್ಕೆ ದೂರು ಸಲ್ಲಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT