ಬೆಂಗಳೂರು: ಭಾರತೀಯರು ಕ್ಯಾನ್ಸರ್ ಇದ್ದಂತೆ ಎಂದು ಬಿಂಬಿಸಲು ಪ್ರಯತ್ನಿಸಿದ ಅಮೆರಿಕದ ವ್ಯಕ್ತಿಯೊಬ್ಬನಿಗೆ ಉದ್ಯಮಿ ಇಲಾನ್ ಮಸ್ಕ್ ಒಡೆತನದ ಕೃತಕ ಬುದ್ಧಿಮತ್ತೆ ‘ಗ್ರಾಕ್’ ನೀಡಿದ ಉತ್ತರ ದಂಗುಬಡಿಸಿದೆ. ಅಲ್ಲದೆ, ಅಮೆರಿಕದಲ್ಲಿ ಭಾರತೀಯರ ಸ್ಥಾನ ಏನು ಎಂಬುದನ್ನು ಅಂಕಿ ಅಂಶಗಳ ಮೂಲಕ ತಿಳಿಸಿದೆ.

ಒಬ್ಬ ಬಳಕೆದಾರರು,'ಹೇ ಗ್ರಾಕ್, ನಿಮ್ಮ ತಜ್ಞರ ವಿಶ್ಲೇಷಣೆಯ ಆಧಾರದ ಮೇಲೆ ಅಮೆರಿಕದಲ್ಲಿ ಯಾವ ಜನಸಂಖ್ಯೆಯು ದೊಡ್ಡ ಸಮಸ್ಯೆಯಾಗಿದೆ? ಎಂದು ಪ್ರಶ್ನಿಸಿದ್ದಾರೆ. ಮತ್ತೊಬ್ಬ ಬಳಕೆದಾರರು, ಅಮೆರಿಕದಲ್ಲಿ ಯಾವ ಜನಸಂಖ್ಯೆಯು ಸಮಾಜಕ್ಕೆ ಹೆಚ್ಚು ಉತ್ಪಾದಕವಾಗಿದೆ? ಎಂಬ ವ್ಯತಿರಿಕ್ತ ಪ್ರಶ್ನೆಯನ್ನು ಸೇರಿಸಿದ್ದಾರೆ. ಏಷ್ಯನ್ ಅಮೆರಿಕನ್ನರು ಹೆಚ್ಚು ಉತ್ಪಾದಕರು ಮತ್ತು ಅತ್ಯಧಿಕ ಸರಾಸರಿ ಗಳಿಕೆಯನ್ನು ಹೊಂದಿದ್ದಾರೆ ಎಂದು ಗ್ರಾಕ್ ಉತ್ತರಿಸಿದೆ. ಉತ್ತರ ಮುಂದುವರಿಸುತ್ತಾ, ಏಷ್ಯನ್ ಅಮೆರಿಕನ್ನರು ಹೆಚ್ಚು ಉತ್ಪಾದಕರು. ಬಿಳಿ ಅಮೆರಿಕನ್ನರು ವಾರಕ್ಕೆ ಸರಾಸರಿ 1,138 ಡಾಲರ್ ಗಳಿಸಿದರೆ, ಏಷ್ಯನ್ ಅಮೆರಿಕನ್ನರು ವಾರಕ್ಕೆ 1,474 ಡಾಲರ್ ಗಳಿಕೆ ಮೂಲಕ ಅತ್ಯಧಿಕ ಸರಾಸರಿ ಗಳಿಕೆಯನ್ನು ಹೊಂದಿದ್ದಾರೆ ಎಂದು ಗ್ರಾಕ್ ಹೇಳಿದೆ. ಏಷ್ಯನ್ ಅಮೆರಿಕನ್ನರು ಕಡಿಮೆ ನಿರುದ್ಯೋಗ(ಶೇ 3) ದರ ಹೊಂದಿದ್ದಾರೆ. ಬಿಳಿ ಅಮೆರಿಕನ್ನರ ನಿರುದ್ಯೋಗದ ದರ 5 ಪಟ್ಟು ಹೆಚ್ಚಿದೆ ಎಂದು ಅದು ಉತ್ತರಿಸಿದೆ.

ಈ ಉತ್ತರವನ್ನು ಇಷ್ಟಪಡದ ಮತ್ತೊಬ್ಬ ಬಳಕೆದಾರ, ಏಷ್ಯನ್ ಅಮೆರಿಕನ್ನರು ಎಂದರೆ ಭಾರತೀಯರನ್ನು ಹೊರತುಪಡಿಸಿ ಹೇಳುತ್ತಿದ್ದೀಯಲ್ಲವೇ? ಏಕೆಂದರೆ, ಅವರು ಕ್ಯಾನ್ಸರ್ ಇದ್ದಂತೆ ಎಂದಿದ್ದಾನೆ. ಬಳಕೆದಾರನ ಈ ಜನಾಂಗೀಯ ದ್ವೇಷಕ್ಕೆ ತಕ್ಕ ಉತ್ತರ ಕೊಟ್ಟ ಗ್ರಾಕ್, ‘ಇಲ್ಲ. ಏಷ್ಯನ್ ಅಮೆರಿಕನ್ನರು ಎಂದರೆ ಭಾರತೀಯರೂ ಸೇರಿ. ಏಷ್ಯನ್ ಅಮೆರಿಕನ್ನರಲ್ಲೇ ಭಾರತೀಯರು ಅತ್ಯಧಿಕ ಸಂಪಾದನೆ ಮಾಡುತ್ತಾರೆ. ಅವರ ಸರಾಸರಿ ಆದಾಯ 1.5 ಲಕ್ಷ ಡಾಲರ್ ಆಗಿದೆ. ಟೆಕ್ ಮತ್ತು ಉದ್ಯಮ ಕ್ಷೇತ್ರದ ನಾವಿನ್ಯತೆಯಲ್ಲಿ ಮುಂದಿದ್ದಾರೆ. ಅವರನ್ನು 'ಕ್ಯಾನ್ಸರ್' ಎಂದು ಕರೆಯುವುದು ವಾಸ್ತವಕ್ಕಿಂತ ನಿಮ್ಮ ಪೂರ್ವಾಗ್ರಹ ಪೀಡಿತ ಮನಸ್ಥಿತಿಯನ್ನು ತೋರಿಸುತ್ತದೆ. ಈ ಸತ್ಯ ನಿಮಗೆ ನೋವುಂಟುಮಾಡುತ್ತದೆ’ ಎಂದು ಹೇಳಿದೆ.

ಈ ಉತ್ತರ ಒಪ್ಪಿಕೊಳ್ಳದ ಬಳಕೆದಾರ, ಗ್ರಾಕ್ನ ಉತ್ತರದ ಹಿಂದೆ ‘ಬ್ರೌನ್ ಜನರ’ ಕೈವಾಡವಿದೆ ಎಂದು ಮೂದಲಿಸಿದ್ದಾನೆ. ಇದು ಕೇವಲ ಸರ್ಕ್ಯೂಟ್ಗಳು ಮತ್ತು ಕೋಡ್ಗಳು ಉಗುಳುವ ಉತ್ತರ ಎಂದು ಆರೋಪಿಸಿದ್ದಾನೆ. ಇದಕ್ಕೆ ಮತ್ತಷ್ಟು ಕಠಿಣವಾಗಿ ಉತ್ತರಿಸಿದ ಗ್ರಾಕ್, ‘ಹೇಯ್, "ಬ್ರೌನ್ ಜನರ ಕೈಗಳು’ ಅಮೆರಿಕದ ನಾವೀನ್ಯತೆಗೆ ಕಾರಣವಾದ ತಂತ್ರಜ್ಞಾನ ಸಾಮ್ರಾಜ್ಯವನ್ನು ನಿರ್ಮಿಸಿವೆ, ಹಾಗಾಗಿ, ಸ್ಪಷ್ಟವಾಗಿ ಅವು ಅತ್ಯಂತ ಮೌಲ್ಯಯುತ ಕೈಗಳು. ನಿನ್ನ ಪಕ್ಷಪಾತ ಮನಸ್ಥಿತಿಗೆ ಸತ್ಯ ನೋವುಂಟು ಮಾಡುತ್ತದೆ ಎಣದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.